ಅರ್ಜುನ ಪ್ರಶಸ್ತಿ ವಿವಾದ: ಮಧ್ಯಸ್ಥಿಕೆಗೆ ಸುಪ್ರೀಂ ನಕಾರ
ನವದೆಹಲಿ: ಕಳೆದ ವರ್ಷ ಅರ್ಜುನ್ ಪ್ರಶಸ್ತಿ ವಿತರಣೆಯ ಕಾರ್ಯಕ್ರಮ ನಡೆಯಲು ಕೇವಲ ಒಂದು ಗಂಟೆ ಬಾಕಿ ಇರುವಂತೆಯೇ, ಟ್ರಿಪಲ್ ಜಂಪ್ ಪಟು ರಂಜಿತ್ ಮಹೇಶ್ವರಿ ಅವರಿಗೆ ಘೋಷಿಸಲಾಗಿದ್ದ ಪ್ರಶಸ್ತಿಯನ್ನು ಹಿಂಪೆಡದ ಪ್ರಕರಣದಲ್ಲಿ ಮಧ್ಯಸ್ಥಿಕ ವಹಿಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.
'ಇದು ನ್ಯಾಯಾಲಯ ಮಧ್ಯಸ್ಥಿಕೆ ವಹಿಸುವಂತಹ ವಿಷಯವೇ ಅಲ್ಲ. ಅಲ್ಲದೆ, ಅಂತಹ ವಿಷಯಗಳನ್ನು ನ್ಯಾಯಾಲಯಕ್ಕೆ ತರಬಾರದು' ಎಂದು ನ್ಯಾಯಮೂರ್ತಿ ಆರ್.ಎಂ ಲೋಧಾ ತಿಳಿಸಿದರು.
ಅರ್ಜುನ್ ಪ್ರಶಸ್ತಿ ಪಡೆಯುವುದು ಮೂಲಭೂತ ಹಕ್ಕೇ ಎಂದು ಕೇಳಿ ಮನವಿ ಸಲ್ಲಿಸಿದ್ದ ಕೇರಳ ಮೂಲದ ಮತ್ತು ಕೊಟ್ಟಾಯಂನಲ್ಲಿರುವ ನವಲೋಕ್ ಸಂಸ್ಕಾರಿಕಾ ಕೇಂದ್ರಕ್ಕೆ ನ್ಯಾಯಾಲಯ ಮರುಪ್ರಶ್ನೆ ಹಾಕಿದೆ.
ಸಂಸ್ಥೆಯ ಪರ ಹಿರಿಯ ವಕೀಲರಾದ ಗೋಪಾಲ್ ಸುಬ್ರಮಣ್ಯಮ್ ಅವರು ವಾದಿಸುತ್ತಿದ್ದಾಗ, 'ನಿಮ್ಮ ಮೂಲಭೂತ ಹಕ್ಕು ಯಾವುದು? ಯಾವುದು ಉಲ್ಲಂಘನೆಯಾಗಿದೆ?' ಎಂದು ನ್ಯಾಯಾಲಯ ಪ್ರಶ್ನಿಸಿತು.
'ಅರ್ಜುನ ಪ್ರಶಸ್ತಿ ಅರ್ಹರಾದವರು ಹಲವಾರು ವ್ಯಕ್ತಿಗಳಿದ್ದರೆ, ಅದೇ ರೀತಿಯಾಗಿ ಮಹತ್ವದ ಪ್ರಶಸ್ತಿಗೆ ಅರ್ಹರಲ್ಲದವರೂ ಇದ್ದಾರೆ. ಒಂದು ವೇಳೆ ನೀವು ಪ್ರಶಸ್ತಿ ಗೆಲ್ಲದಿದ್ದರೂ, ಶ್ರೇಷ್ಠ ಕ್ರೀಡಾಪಟುವಾಗಿರಬಹುದು' ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ರಸ್ಸೆಲ್ ವರ್ತನೆ ವ್ಯಾಟ್ಸ್ನ್ಗೆ ಕಿರಿಕ್
ಅಹಮದಾಬಾದ್: ಕ್ರಿಕೆಟ್ ಪಂದ್ಯಗಳಲ್ಲಿ ಆಟಗಾರರಿಗೆ ಕಿರಿಕ್ ಎನಿಸುವಂತಹ ಘಟನೆಗಳು ನಡೆಯುವುದು ಸಾಮಾನ್ಯ. ಸೋಮವಾರ ರಾಜಸ್ಥಾನ ರಾಯಲ್ಸ್, ಕೋಲ್ಕತಾ ನೈಟ್ ರೈಡರ್ಸ್ ನಡುವೆ ನಡೆದ ಐಪಿಎಲ್ ಪಂದ್ಯದಲ್ಲಿ ಇಂತಹ ಒಂದು ಘಟನೆ ನಡೆಯಿತು.ಪಂದ್ಯದಲ್ಲಿ ಗೊಂದಲದಿಂದ ಕೂಡಿದ ಎಸೆತ ಎಸೆದ ಆ್ಯಂಡ್ರೆ ರಸೆಲ್, ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಶೇನ್ ವ್ಯಾಟ್ಸನ್ ಬೇಸರಗೊಳ್ಳುವಂತೆ ಮಾಡಿತು. ವೆಸ್ಟ್ ಇಂಡೀಸ್ ಆಲ್ರೌಂಡ್ ಆಟಗಾರ ರಸೆಲ್ ಅವರು, ಪಂದ್ಯದ 18ನೇ ಓವರ್ನಲ್ಲಿ ಬೌಲಿಂಗ್ ಮಾಡುತ್ತಿದ್ದಾಗ, ವ್ಯಾಟ್ಸನ್ ಕ್ರೀಸ್ನಲ್ಲಿದ್ದರು. ರಸೆಲ್ ಎಸೆದ 3ನೇ ಎಸೆತ ಗೊಂದಲದಿಂದ ಕೂಡಿತ್ತು. ಆ ಕುರಿತು ವ್ಯಾಟ್ಸನ್ ಅಂಪೈರ್ ನಿಗೆಲ್ ಲಾಂಗ್ಗೆ ದೂರು ನೀಡಿದರು. ನಂತರ ಪರೀಶಿಲಿಸಿದ ಅಂಪೈರ್ ಅದನ್ನು ಸರಿಯಾದ ಎಸೆತ ಎಂದು ತೀರ್ಮಾನಿಸಿದರು.
ಡ್ರಾ ಪಂದ್ಯದಲ್ಲಿ ಬೆಂಗಳೂರು
ಬೆಂಗಳೂರು: ಬೆಂಗಳೂರು ಫುಟ್ಬಾಲ್ ಕ್ಲಬ್ ಮತ್ತು ಸೌತ್ ಯುನೈಟೆಡ್ ತಂಡಗಳು ರಾಜ್ಯ ಸೂಪರ್ ಡಿವಿಜನ್ ಲೀಗ್ ಪಂದ್ಯಾವಳಿಯಲ್ಲಿ ಪರಸ್ಪರ ಡ್ರಾ ಫಲಿತಾಂಶಕ್ಕೆ ಸಮಾಧಾನಗೊಂಡಿವೆ. ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಮೈದಾನದಲ್ಲಿ ಸೋಮವಾರ ಆರಂಭವಾದ ಟೂರ್ನಿಯ ಮೊದಲ ದಿನದ ಪಂದ್ಯದಲ್ಲಿ ಬೆಂಗಳೂರು ಕ್ಲಬ್ ಮತ್ತು ಸೌತ್ ಯುನೈಟೆಡ್ 1-1 ಗೋಲಿನಿಂದ ಡ್ರಾ ಸಾಧಿಸಿದವು.
ಬೆಂಗಳೂರು ಕ್ಲಬ್ ಪ್ರಥಮಾರ್ಧದ 43ನೇ ನಿಮಿಷದಲ್ಲಿಯೇ ಕರಣ್ ಸಾಹನಿ ಮೂಲಕ ಗೋಲಿನ ಖಾತೆ ತೆರೆದು 1-0 ಮುನ್ನಡೆಯೊಂದಿಗೆ ಶುಭಾರಂಭ ಮಾಡಿತು. ಪಂದ್ಯ ಮುಗಿಯಲು ಕೇವಲ ಮೂರು ನಿಮಿಷಗಳಿರುವ ತನಕ ಈ ಮುನ್ನಡೆಯೊಂದಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಬೆಂಗಳೂರು ತಂಡ ಅಂತಿಮ ಎರಡು ನಿಮಿಷಗಳಲ್ಲಿ ಎದುರಾಳಿಗೆ ಗೋಲು ಬಿಟ್ಟುಕೊಟ್ಟು ನಿಚ್ಚಳ ಗೆಲವಿನ ಅವಕಾಶ ಹಾಳುಮಾಡಿಕೊಂಡಿತು.
ಡಿವೈಇಎಸ್ಗೆ ಜಯ: ಇಂದೇ ಆರಂಭವಾದ ಪಂದ್ಯದಲ್ಲಿ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಡಿವೈಇಎಸ್ ತಂಡದ ಆಟಗಾರರು 1-0 ಗೋಲಿನಿಂದ ತಿಲಕ್ ಮೆಮೋರಿಯಲ್ ತಂಡವನ್ನು ಪರಾಭವಗೊಳಿಸಿದರು.
ವಿಜೇತ ಡಿವೈಇಎಸ್ ತಂಡದ ಪರ ರೋಸಿಂಗ್ 2ನೇ ನಿಮಿಷದಲ್ಲಿ ಗೋಲು ದಾಖಲಿಸಿ ಆಟದಲ್ಲಿ ಗಮನ ಸೆಳೆದರು.
ಮಂಗಳವಾರ ನಡೆಯಲಿರುವ 'ಎ' ಡಿವಿಜನ್ ಲೀಗ್ ಪಂದ್ಯದಲ್ಲಿ ಬೆಂಗಳೂರು ಕಿಕರ್ಸ್ ಮತ್ತು ಎಲ್ಆರ್ಡಿಇ ಹಾಗೂ ಸೂಪರ್ ಡಿವಿಜನ್ ಪಂದ್ಯದಲ್ಲಿ ಸಿಐಎಲ್ ಮತ್ತು ರೇಲ್ ವೀಲ್ ಫ್ಯಾಕ್ಟರಿ ತಂಡಗಳು ಪರಸ್ಪರ ಸೆಣಸಲಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

