ಚೆನ್ನೈಕಿಂಗ್ಸ್ಗೆ ಅಪ್ಪಳಿಸಿದ ಮ್ಯಾಕ್ಸ್ವೆಲ್ ಸುನಾಮಿ

ಕಟಕ್: ಮತ್ತೊಮ್ಮೆ ಸಿಎಸ್ಕೆ ತಂಡದ ಬೌಲರ್ಗಳಿಗೆ ಮಾರಕವಾಗಿ ಪರಿಣಮಿಸಿದ ಗ್ಲೆನ್ ಮ್ಯಾಕ್ಸ್ವೆಲ್ (90) ಹಾಗೂ ಡೇವಿಡ್ ಮಿಲ್ಲರ್ (47), ಬಾರಾಬತಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 231 ರನ್ ಕಲೆ ಹಾಕುವಲ್ಲಿ ನೆರವಾದರು.
ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಫೀಲ್ಡಿಂಗ್ ಆಯ್ಕೆಮಾಡಿಕೊಂಡರು. ಹಾಗಾಗಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್ಗಳಲ್ಲಿ 4 ವಿಕೆಟ್ಗೆ 231 ರನ್ ಕಲೆಹಾಕಿತು.
ಆರಂಭಿಕ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಕೇವಲ 69 ರನ್ ಗಳಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ನಂತರದ 10 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 231 ರನ್ ದಾಖಲಿಸಿದರು. ಹಾಗಾಗಿ ಪಂಜಾಬ್ 230ರ ಗಡಿ ತಲುಪಲು ನೆರವಾಯಿತು. ಇದು ಪಂಜಾಬ್ ತಂಡದ ಅಬ್ಬರದ ಬ್ಯಾಟಿಂಗ್ಗೆ ಹಿಡಿದ ಕೈಗನ್ನಡಿಯಾಯಿತು.
ಆರಂಭಿಕ ಕುಸಿತ: ಈ ಪಂದ್ಯದಲ್ಲಿ ಆಡುವ ಅವಕಾಶ ಪಡೆದ ಮನ್ದೀಪ್ ಸಿಂಗ್, ವೀರೇಂದ್ರ ಸೆಹ್ವಾಗ್ ಜತೆ ಇನಿಂಗ್ಸ್ ಆರಂಭಿಸಿದರಾದರೂ, ಉತ್ತಮ ಪ್ರದರ್ಶನ ನೀಡಲಿಲ್ಲ. ಕೇವಲ 3 ರನ್ಗಳಿಗೆ ತಮ್ಮ ಆಟಕ್ಕೆ ತೆರೆ ಎಳೆದುಕೊಂಡರು. ಇದರ ಬೆನ್ನಲ್ಲೇ ಆರಂಭದಿಂದ ಅಬ್ಬರದ ಬ್ಯಾಟಿಂಗ್ಗೆ ಮುಂದಾದ ವೀರೇಂದ್ರ ಸೆಹ್ವಾಗ್ (30 ರನ್, 23ಎಸೆತ, 5 ಬೌಂಡರಿ, 1 ಸಿಕ್ಸರ್) ಸಹ ಬೇಗನೆ ವಿಕೆಟ್ ಒಪ್ಪಿಸಿದರು. ಹಾಗಾಗಿ ಪಂಜಾಬ್ 38 ರನ್ಗಳಿಗೆ ಆರಂಭಿಕರನ್ನು ಕಳೆದುಕೊಂಡಿತು.
ಮಿಂಚಿದ ಮ್ಯಾಕ್ಸ್ವೆಲ್, ಮಿಲ್ಲರ್: ನಂತರ ಮೂರನೇ ವಿಕೆಟ್ಗೆ ಜತೆಯಾದ ಗ್ಲೆನ್ ಮ್ಯಾಕ್ಸ್ವೆಲ್ (90 ರನ್, 38 ಎಸೆತ, 6 ಬೌಂಡರಿ, 8 ಸಿಕ್ಸರ್) ಹಾಗೂ ಡೇವಿಡ್ ಮಿಲ್ಲರ್ (47 ರನ್, 32 ಎಸೆತ, 5 ಬೌಂಡರಿ, 2 ಸಿಕ್ಸರ್) ಸ್ಫೋಟಕ 135 ರನ್ಗಳ ಜತೆಯಾಟ ನೀಡುವ ಮೂಲಕ ತಂಡಕ್ಕೆ ಆಸರೆಯಾಗಿ ನಿಂತರು.
ಇನಿಂಗ್ಸ್ ಉದ್ದಕ್ಕೂ ಸಿಎಸ್ಕೆ ಆಟಗಾರರ ಬೆವರಿಳಿಸಿದ ಮ್ಯಾಕ್ಸ್ವೆಲ್, ಮತ್ತೊಮ್ಮೆ 90ರ ಗಡಿಯಲ್ಲಿ ಔಟಾಗಿದ್ದಾರೆ. ಈ ಮೂಲಕ ಈ ಆವೃತ್ತಿಯಲ್ಲಿ ಮೂರನೇ ಬಾರಿಗೆ ಶತಕ ವಂಚಿತರಾಗಿದ್ದಾರೆ. ಅಂತಿಮವಾಗಿ ಕ್ರೀಸ್ಗೆ ಆಗಮಿಸಿದ ಜಾರ್ಜ್ ಬೇಯ್ಲಿ (ಅಜೇಯ 40 ರನ್, 13 ಎಸೆತ, 6 ಬೌಂಡರಿ, 2 ಸಿಕ್ಸರ್), ಮಿಚೆಲ್ ಜಾನ್ಸನ್ (ಅಜೆಯ 11) ತಂಡ 230ರ ಗಡಿ ದಾಟುವಂತೆ ನೋಡಿಕೊಂಡರು.
ಸ್ಕೋರ್ ವಿವರ
ಕಿಂಗ್ಸ್ ಇಲೆವೆನ್ ಪಂಜಾಬ್ 20 ಓವರ್ಗಳಲ್ಲಿ 4 ವಿಕೆಟ್ಗೆ 231
ವೀರೇಂದ್ರ ಸೆಹ್ವಾಗ್ ಬಿ ಹಿಲ್ಫನ್ಹಾಸ್ 30,ಮನ್ದೀಪ್ ಸಿಂಗ್ ಸಿ ಈಶ್ವರ್ ಬಿ ಮೊಹಿತ್ 3, ಗ್ಲೆನ್ ಮ್ಯಾಕ್ಸ್ವೆಲ್ ಸಿ ಜಡೇಜಾ ಬಿ ಮೊಹಿತ್ 90, ಡೇವಿಡ್ ಮಿಲ್ಲರ್ ಬಿ ಸ್ಮಿತ್ 47, ಜಾರ್ಜ್ ಬೇಯ್ಲಿ ಅಜೇಯ 40, ಮಿಚೆಲ್ ಜಾನ್ಸನ್ ಅಜೇಯ 11
ಇತರೆ: (ಲೆಗ್ ಬೈ 5, ವೈಡ್ 5)
ವಿಕೆಟ್ ಪತನ: 1-33, 2-38, 3-173, 4-182
ಬೌಲಿಂಗ್ ವಿವರ
ಬೆನ್ ಹಿಲ್ಫೆನ್ಹಾಸ್ 4-0-36-1, ಈಶ್ವರ್ ಪಾಂಡೆ 4-0-41-0, ಮೋಹಿತ್ ಶರ್ಮಾ 4-0-38-2, ಡ್ವೈನ್ ಸ್ಮಿತ್ 3-0-36-1, ರವೀಂದ್ರ ಜಡೇಜಾ 3-0-37-0, ಆರ್ ಅಶ್ವಿನ್ 2-0-38-0
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


