ಮಾಡು ಇಲ್ಲವೆ ಮಡಿ ಸ್ಥಿತಿಯಲ್ಲಿ ಮುಂಬೈ

ಹೈದರಾಬಾದ್: ಪ್ರಸಕ್ತ ಐಪಿಎಲ್ ಪಂದ್ಯಾವಳಿಯಲ್ಲಿ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ಕಣಕ್ಕಿಳಿದ ಮುಂಬೈ ಇಂಡಿಯನ್ಸ್ ತಂಡ ಹೆಚ್ಚಾಗಿ ಸೋಲಿನ ಹಾದಿಯಲ್ಲಿ ತಮ್ಮ ಪಯಣವನ್ನು ಮುಂದುವರಿಸಿದ್ದು, ಪ್ಲೇಆಫ್ ಸುತ್ತಿಗ ಪ್ರವೇಶ ಪಡೆಯಬೇಕಾದರೆ ಮುಂಬೈ ತಂಡ ಮುಂದಿನ ಎಲ್ಲಾ ಪಂದ್ಯಗಳಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿದೆ. ಹಾಗಾಗಿ ಸೋಮವಾರ ನಡೆಯಲಿರುವ ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯ ಮುಂಬೈ ಪಾಲಿಗೆ ಮಾಡು ಇಲ್ಲವೆ ಮಡಿ ಪಂದ್ಯವಾಗಿದೆ.
ಮುಂಬೈ ಇಂಡಿಯನ್ಸ್ ತಂಡ ಈಗಾಗಲೇ 8 ಪಂದ್ಯಗಳನ್ನಾಡಿದ್ದು ಅದರಲ್ಲಿ ಕೇವಲ 2 ಗೆಲವು ಹಾಗೂ 6 ಸೋಲನುಭವಿಸಿದ್ದು, ಕೇವಲ 4 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಹಾಗಾಗಿ ಮುಂಬೈ ತಂಡ ಇನ್ನು 6 ಪಂದ್ಯಗಳನ್ನಾಡಬೇಕಿದ್ದು, ಪ್ಲೇ ಆಫ್ ಸುತ್ತಿನ ಆಸೆ ಜೀವಂತವಾಗಿರಿಸಲು ಈ ಪಂದ್ಯದಲ್ಲಿ ಗೆಲವು ದಾಖಲಿಸಲೇಬೇಕಾಗಿದೆ.
ಇನ್ನು ಸನ್ರೈಸರ್ಸ್ ಹೈದರಾಬಾದ್ ತಂಡ ಪಂದ್ಯಾವಳಿಯಲ್ಲಿ ಸಾಧಾರಣ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದೆ. ಆಡಿರುವ 8 ಪಂದ್ಯಗಳಲ್ಲಿ 4ರಲ್ಲಿ ಗೆಲವು 4ರಲ್ಲಿ ಸೋಲನುಭವಿಸಿರುವ ಹೈದರಾಬಾದ್ 8 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹಾಗಾಗಿ ಪ್ಲೇ ಆಫ್ ಸುತ್ತಿನ ಹಾದಿಯಲ್ಲಿ ಸಾಗಲು ಸನ್ರೈಸರ್ಸ್ಗೂ ಸಹ ಈಪಂದ್ಯ ಮಹತ್ವದ್ದಾಗಿದೆ.
ಸನ್ರೈಸರ್ಸ್ ತಂಡ ಬ್ಯಾಟಿಂಗ್ ವಿಭಾಗದಲ್ಲಿ ಉತ್ತಮ ಆರಂಭ ದೊರೆಯುತ್ತಿಲ್ಲ. ಆರಂಭಿಕ ಎರಾನ್ ಫಿಂಚ್ ಹಾಗೂ ಶಿಖರ್ ಧವನ್ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಬೇಕಾದ ಅಗತ್ಯವಿದೆ. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್ ವಾರ್ನರ್, ಮೊಯ್ಸಿಸ್ ಹೆನ್ರಿಕ್ಸ್, ಕೆ.ಎಲ್ ರಾಹುಲ್, ನಮನ್ ಓಜಾ, ಇರ್ಫಾನ್ ಪಠಾಣ್, ಉತ್ತಮವಾಗಿ ರನ್ ಗಳಿಸಬೇಕಿದೆ. ಬೌಲಿಂಗ್ ವಿಭಾಗದಲ್ಲಿ ಡೇಲ್ ಸ್ಟೇಯ್ನ್ ಜತೆಗೆ ಭುವನೇಶ್ವರ್ ಕುಮಾರ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಇನ್ನು ಸ್ಪಿನ್ ವಿಭಾಗದಲ್ಲಿ ಅಮಿತ್ ಮಿಶ್ರಾ ಹಾಗೂ ಕರಣ್ ಶರ್ಮಾ ತಮ್ಮ ಜವಾಬ್ದಾರಿ ನಿರ್ವಹಿಸುತ್ತಿದ್ದಾರೆ. ಹಾಗಾಗಿ ಸನ್ರೈಸರ್ಸ್ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಬೇಕಾಗಿದೆ.
ಇನ್ನು ಮುಂಬೈ ತಂಡ ಪಂದ್ಯಾವಳಿಯಲ್ಲಿ ನಡೆಸಿದ ಯಾವುದೇ ಪ್ರಯೋಗಗಳು ಯಶಸ್ವಿಯಾಗಿಲ್ಲ. ಪೊಲಾರ್ಡ್, ರೋಹಿತ್ ಶರ್ಮಾ, ಅಂಬಟಿ ರಾಯುಡು, ಸಿಮನ್ಸ್, ಮಾಲಿಂಗ, ಹರ್ಭಜನ್, ಪ್ರವೀಣ್ ಕುಮಾರ್ರಂತಹ ಪ್ರಮುಖ ಆಟಗಾರರನ್ನು ಹೊಂದಿದೆಯಾದರು, ಸಂಘಟಿತ ಪ್ರದಶಂನ ನೀಡುವಲ್ಲಿ ವಿಫಲವಾಗಿದೆ. ಮುಂಬೈ ತಂಡ ಗೆಲವಿನ ಹಾದಿಗೆ ಮರಳಬೇಕಾದರೆ ಸಂಘಟಿತ ಪ್ರದರ್ಶನ ಹೊರಬೇಕು. ಇಲ್ಲವಾದರೆ ಹಾಲಿ ಚಾಂಪಿಯನ್ನರು ಮನೆಯ ಹಾದಿ ಹಿಡಿಯಬೇಕಾಗುತ್ತದೆ.
ಅಂಕಪಟ್ಟಿ
ತಂಡ ಪಂದ್ಯ ಜಯ ಸೋಲು ಅಂಕ ಸರಾಸರಿ
ಕಿಂಗ್ಸ್ ಇಲೆವೆನ್ ಪಂಜಾಬ್ 9 7 2 14 1.025
ಚೆನ್ನೈ ಸೂಪರ್ ಕಿಂಗ್ಸ್ 9 7 2 14 0.608
ರಾಜಸ್ಥಾನ ರಾಯಲ್ಸ್ 8 5 3 10 0.204
ಕೋಲ್ಕತಾ ನೈಟ್ ರೈಡರ್ಸ್ 9 4 5 8 0.007ಸನ್ರೈಸರ್ಸ್ ಹೈದರಾಬಾದ್ 8 4 4 8 -0.200
ರಾಯಲ್ ಚಾಲೆಂಜರ್ಸ್ ಬೆಂಗಳೂರು 8 3 5 6 -0.444
ಮುಂಬೈ ಇಂಡಿಯನ್ಸ್ 8 2 6 4 -0.471
ಡೆಲ್ಲಿ ಡೇರ್ಡೆವಿಲ್ಸ್ 9 2 7 4 -0.953
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


