ಕ್ರೀಡೆ

ತಾತಂಡ ಕಪ್ ಹಾಕಿ: ಅಂಜಪರವಂಡ, ಮಂಡೆಪಂಡ ತಂಡಕ್ಕೆ ಭರ್ಜರಿ ಮುನ್ನಡೆ

ತಾತಂಡ ಕಪ್ ಹಾಕಿ: ಅಂಜಪರವಂಡ, ಮಂಡೆಪಂಡ ತಂಡಕ್ಕೆ ಭರ್ಜರಿ ಮುನ್ನಡೆ
Published On :

ವಿರಾಜಪೇಟೆ: ಕೊಡವ ಕುಟುಂಬಗಳ ನಡುವೆ ಇಲ್ಲಿನ ಸರ್ಕಾರಿ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ತಾತಂಡ ಹಾಕಿ ನಮ್ಮೆ-2014ರ ಕಪ್ಗಾಗಿ ನಡೆಯುತ್ತಿರುವ ಹಾಕಿ ಪಂದ್ಯದಲ್ಲಿ ಸೋಮವಾರ ಮಂಡೆಪಂಡ, ಕೂತಂಡ, ಅಂಜಪರವಂಡ ತಂಡಗಳು ಮುಂದಿನ ಸುತ್ತು ಪ್ರವೇಶಿಸಿತು.  ದಿನದ ಆರಂಭದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೂತಂಡ ತಂಡವು ಕಂಬಿರಂಡ ತಂಡವನ್ನು ಭರ್ಜರಿ 4- 1 ಗೋಲುಗಳ ಅಂತರದಿಂದ ಮಣಿಸಿತು. ಕೂತಂಡದ ಪರವಾಗಿ ಸುರೇಶ್ (1 ನಿಮಿಷ), ಬೋಪಣ್ಣ (21ನೇ ನಿಮಿಷ), ಪೂಣಚ್ಚ (31ನೇ ನಿಮಿಷ), ಸೋಮಣ್ಣ (34ನೇ ನಿಮಿಷ) ಗೋಲು ದಾಖಲಿಸಿದರು.
ಕಂಬಿರಂಡ ತಂಡದ ಪರವಾಗಿ 5ನೇ ನಿಮಿಷದಲ್ಲಿ ರಮೇಶ್ 1 ಗೋಲು ದಾಖಲಿಸಿದರು. ಎರಡನೇ ಪಂದ್ಯದಲ್ಲಿ ಅಂಜಪರವಂಡ ತಂಡವು ಕೂಡಿಮಣಿಯಂಡ ತಂಡವನ್ನು ಭರ್ಜರಿ 7- 2 ಗೋಲುಗಳ ಅಂತರದಿಂದ ಮಣಿಸಿತು. ಅಂಜಪರವಂಡ ತಂಡದ ಪರವಾಗಿ ಕಾರ್ಯಪ್ಪನವರು 7ನೇ ನಿಮಿಷದಲ್ಲಿ 1 ಗೋಲ್ ದಾಖಲಿಸಿ ಖಾತೆ ತೆರೆದರು. ಉಳಿದಂತೆ ರೋಶನ್ ಅವರು (10, 34 ಮತ್ತು 39ನೇ ನಿಮಿಷದಲ್ಲಿ) 3 ಗೋಲು ದಾಖಲಿಸಿದರು. ಕುಶಾಲಪ್ಪ (33 ಮತ್ತು 40ನೇ ನಿಮಿಷದಲ್ಲಿ) 2 ಗೋಲ್ ದಾಖಲಿಸಿದರು. 48ನೇ ನಿಮಿಷದಲ್ಲಿ ಚಿಟ್ಟಿಯಪ್ಪನವರು ಒಂದು ಗೋಲ್ ದಾಖಲಿಸಿದರು. ಕಂಬಿರಂಡ ತಂಡದ ಪರವಾಗಿ ವಿವೇಕ್ (13ನೇ ನಿಮಿಷ), ರಕ್ಷಿತ್ (27ನೇ ನಿಮಿಷದಲ್ಲಿ) ತಲಾ 1 ಗೋಲು ದಾಖಲಿಸಿದರೂ ತಂಡಕ್ಕೆ ಜಯಿಸಲು ಸಾಧ್ಯವಾಗಲಿಲ್ಲ.
ಕೊನೆಯ ಪಂದ್ಯದಲ್ಲಿ ಮಂಡೆಪಂಡ ತಂಡವು ತಂಬುಕುತ್ತಿರ ತಂಡವನ್ನು ಭರ್ಜರಿ 5- 1 ಗೋಲುಗಳ ಅಂತರದಿಂದ ಸೋಲಿಸಿತು. ಮಂಡೆಪಂಡ ತಂಡದ ಪರವಾಗಿ ಸಜನ್ (12ನೇ ನಿಮಿಷದಲ್ಲಿ) 1 ಗೋಲು ದಾಖಲಿಸಿದರೆ ಉಳಿದಂತೆ 4 ಗೋಲುಗಳನ್ನು ಉದಯೋನ್ಮುಖ ಆಟಗಾರ ಮಂಡೆಪಂಡ ದೀಲನ್ ದೇವಯ್ಯ (9, 16, 23 ಮತ್ತು 38ನೇ ನಿಮಿಷದಲ್ಲಿ) ದಾಖಲಿಸಿದರು. ತಂಬುಕುತ್ತಿರ ತಂಡದ ಪರವಾಗಿ ಶರಣ್ (35ನೇ ನಿಮಿಷದಲ್ಲಿ) 1 ಗೋಲು ದಾಖಲಿಸಿ ತಂಡಕ್ಕೆ ಸಮಾಧಾನ ತಂದುಕೊಟ್ಟರು.



ದೇವಯ್ಯ ಹ್ಯಾಟ್ರಿಕ್


ತಾತಂಡ ಕಪ್ ಕೌಟುಂಬಿಕ ಹಾಕಿ ಪಂದ್ಯದಲ್ಲಿ ಸೋಮವಾರ ತಂಬುಕುತ್ತಿರ ತಂಡದ ಎದುರು ಭರ್ಜರಿ 4 ಗೋಲು ದಾಖಲಿಸಿದ 13 ವರ್ಷದ ಬಾಲಕ ಮಂಡೆಪಂಡ ದೀಲನ್ ದೇವಯ್ಯ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರನಾದನು. ಈತ ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆಯ ಸ್ಫೋರ್ಟ್ಸ್ ಹಾಸ್ಟೆಲ್ನಲ್ಲಿ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.