ಫುಟ್ಬಾಲ್ ವಿಶ್ವಕಪ್: ಯುವ ತಂಡ ಪ್ರಕಟಿಸಿದ ಇಂಗ್ಲೆಂಡ್
ಲೂಟಾನ್ (ಇಂಗ್ಲೆಂಡ್): ಬ್ರೆಜಿಲ್ನಲ್ಲಿ ನಡೆಯಲಿರು ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿಗೆ ಇಂಗ್ಲೆಂಡ್, ಯುವಕರಿಂದ ಕೂಡಿದ ತಂಡವನ್ನು ಪ್ರಕಟಿಸಿದೆ. ಹೀಗಾಗಿ ಕಳೆದ ವಿಶ್ವಕಪ್ನಲ್ಲಿ ಆಡಿದ ಕೇವಲ 6 ಆಟಗಾರರು ಮಾತ್ರ ಈ ಬಾರಿ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಪ್ರೀಮಿಯರ್ ಲೀಗ್ನಲ್ಲಿ ಯುವ ಆಟಗಾರರು ನೀಡಿದ ಸ್ಫೂರ್ತಿ ತುಂಬಿದ ಪ್ರದರ್ಶನವನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಪ್ರಕಟಿಸಲಾಗಿದೆ. ಬರುವ ತಿಂಗಳು 36ನೇ ವಸಂತಕ್ಕೆ ಕಾಲಿರಿಸಲಿರುವ ಮಿಡ್ಫೀಲ್ಡರ್ ಫ್ರಾಂಕ್ ಲ್ಯಾಂಪರ್ಡ್ ತಂಡದಲ್ಲಿರುವ ಹಿರಿಯ ಆಟಗಾರ ಎನಿಸಿದರೆ, ರಕ್ಷಣಾ ವಿಭಾಗದಲ್ಲಿರುವ 18 ವರ್ಷದ ಲ್ಯೂಕ್ ಶಾ ಅತಿ ಕಿರಿಯ ಆಟಗಾರ ಎನಿಸಿದ್ದಾರೆ. ಲ್ಯೂಕ್ ಕಳೆದ ಮಾರ್ಚ್ನಲ್ಲಷ್ಟೇ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದಾರೆ.
ಇಂಗ್ಲೆಂಡ್ ತಂಡ: ಗೋಲ್ ಕೀಪರ್ಗಳು- ಜಾಯ್ ಹರ್ಟ್, ಫ್ರಾಸೆರ್ ಫಾರ್ಸ್ಟಾರ್, ಬೆನ್ ಫಾಸ್ಟರ್. ರಕ್ಷಣಾ ವಿಭಾಗ: ಲೈಟಾನ್ ಬಾಯಿನೆಸ್, ಗ್ಯಾರಿ ಚಹಿಲ್, ಫಿಲ್ ಜಾಗೀಲ್ಕಾ, ಗ್ಲೆನ್ ಜಾನ್ಸನ್, ಫಿಲ್ ಜೋನ್ಸ್, ಲ್ಯೂಕ್ ಶಾ, ಕ್ರಿಸ್ ಸ್ಮಾಲ್ಲಿಂಗ್. ಮಿಡ್ಫಿಲ್ಡರ್ಗಳು: ರಾಸ್ ಬರ್ಕ್ಲೇ, ಸ್ಟೀವನ್ ಗೆರಾರ್ಡ್, ಜೋರ್ಡಾನ್ ಹೆಂಡರ್ಸನ್, ಆ್ಯಡಂ ಲಲ್ಲನಾ, ಫ್ರಾಂಕ್ ಲ್ಯಾಂಪರ್ಡ್, ಜೇಮ್ಸ್ ಮಿಲ್ನರ್, ಅಲೆಕ್ಸ್ ಓಕ್ಲಡೆ-ಚಂಬರ್ಲೈನ್, ರಹೀಮ್ ಸ್ಟರ್ಲಿಂಗ್, ಜಾಕ್ ವಿಲ್ಷೇರ್. ಮುನ್ನಡೆ ಆಟಗಾರರು: ರಿಕೀ ಲ್ಯಾಂಬರ್ಟ್, ವ್ಯಾನೆ ರೂನಿ, ಡ್ಯಾನಿಯಲ್ ಸ್ಟರೀಡ್ಜ್, ಡ್ಯಾನಿಯಲ್ ವೆಲ್ಬೆಕ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

