ಕ್ರೀಡೆ

ಕ್ರಿಕೆಟ್ ಸರಣಿ ಮುಂದುವರಿಸಲು ಭಾರತ, ಪಾಕ್ ಮಂಡಳಿ ಒಪ್ಪಿಗೆ

Published On :

ಕರಾಚಿ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಭಾರತದ ಜತೆಗಿನ ಕ್ರಿಕೆಟ್ ಸರಣಿಯನ್ನು ಆಡುವ ಅಗತ್ಯತೆಯಲ್ಲಿರುವ ಪಾಕಿಸ್ತಾನ ಕ್ರಿಕೆಟ್ ಸಮಿತಿಗೆ ಈಗ ಉಸಿರು ಬಂದಿದೆ. ಕಾರಣ 2015ನೇ ಸಾಲಿನಿಂದ 2023ನೇ ಸಾಲಿನ ಅವಧಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಟ್ಟು 6 ಸರಣಿಗಳನ್ನಾಡಲು ಉಭಯ ದೇಶಗಳ ಕ್ರಿಕೆಟ್ ಮಂಡಳಿಗಳು ಒಪ್ಪಿಗೆ ಸೂಚಿಸಿವೆ.
ಪಾಕಿಸ್ತಾನ ಇತ್ತೀಚೆಗೆ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಾವಳಿಯನ್ನು ಆಡದಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ತೀವ್ರ ಆರ್ಥಿಕ ನಷ್ಟ ಎದುರಿಸುತ್ತಿದೆ. ಅಲ್ಲದೆ ಭಾರತದ ವಿರುದ್ಧ ಸರಣಿಯನ್ನು ಆಡಲು ಸತತ ಪ್ರಯತ್ನ ನಡೆಸುತ್ತಿದ್ದು, ಆರ್ಥಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಚಿಂತನೆ ನಡೆಸಿತ್ತು. ಹೀಗಾಗಿ ಐಸಿಸಿ ಅಧಿಕಾರ ಹಂಚಿಕೆಗೆ ಒಪ್ಪಿಗೆ ನೀಡಲು ಪಿಸಿಬಿ, ಭಾರತ ವಿರುದ್ಧದ ಕ್ರಿಕೆಟ್ ಸರಣಿಗೆ ಒಪ್ಪಿಗೆ ನೀಡಬೇಕೆಂದು ಷರತ್ತು ಹಾಕಿತ್ತು.
ಈ ಸರಣಿಗಳಿಗೆ ಮುನ್ನುಡಿ ಬರೆಯುವ ನಿಟ್ಟಿನಲ್ಲಿ ಮುಂದಿನ ವರ್ಷ ಪಾಕಿಸ್ತಾನ ಯುಎಇನಲ್ಲಿ ಭಾರತದ ವಿರುದ್ಧ ಎರಡು ಟೆಸ್ಟ್, ಮೂರು ಏಕದಿನ ಹಾಗೂ 2 ಟಿ20 ಪಂದ್ಯಗಳ ಸರಣಿಯನ್ನಾಡಲಿದೆ ಎಂದು ಪಿಸಿಬಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಆರು ಸರಣಿಗಳಲ್ಲಿ ಒಟ್ಟು 14 ಟೆಸ್ಟ್, 30 ಏಕದಿನ ಹಾಗೂ 12 ಟಿ20 ಪಂದ್ಯಗಳು ನಡೆಯುವ ಸಾಧ್ಯತೆಗಳಿವೆ ಎಂದು ಪಿಸಿಬಿಯ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಸುಭಾನ್ ಅಹಮದ್ ತಿಳಿಸಿದ್ದಾರೆ.
ಭಾರತ 2007ರಲ್ಲಿ ಪಾಕಿಸ್ತಾನದ ಜತೆ ಪೂರ್ಣ ಪ್ರಮಾಣದ ಕ್ರಿಕೆಟ್ ಸರಣಿಯನ್ನು ಆಡಿತ್ತು. ಆನಂತರ 2008ರಲ್ಲಿ ಮುಂಬೈ ಮೇಲೆ ಉಗ್ರರ ದಾಳಿಯ ನಂತರ ಬಿಸಿಸಿಐ ಪೂರ್ಣ ಪ್ರಮಾಣದ ಕ್ರಿಕೆಟ್ ಪಂದ್ಯಾವಳಿಯನ್ನು ಪಾಕ್ ಜತೆ ಆಡಿರಲಿಲ್ಲ.
ಆನಂತರ ಭಾರತ 2012ರಲ್ಲಿ ಮೂರು ಏಕದಿನ ಹಾಗೂ 2 ಟಿ20 ಪಂದ್ಯಾವಳಿಯನ್ನಾಡಿದ್ದು, ಉಳಿದಂತೆ ಏಷ್ಯಾಕಪ್ ಹಾಗೂ ಐಸಿಸಿಯ ಪಂದ್ಯಾವಳಿಗಳಲ್ಲಿ ಮಾತ್ರ ಪಾಕಿಸ್ತಾನದ ಜತೆ ಪಂದ್ಯವನ್ನಾಡಿತ್ತು.
ಈ ಸರಣಿಗಳಿಗೆ ಸಂಬಂಧಿಸಿದಂತೆ ಬಿಸಿಸಿಐ ಜತೆಗೆ ಒಪ್ಪಂದಕ್ಕೆ ಸಹಿ ಹಾಕಲು ಪ್ರಯತ್ನಿಸುತ್ತಿದ್ದು, ಒಂದುವೇಳೆ ಸರಣಿ ನಡೆಯಲು ಸಾಧ್ಯವಾಗದಿದ್ದರೇ, ಸರಣಿ ಆತಿಥ್ಯ ವಹಿಸುವ ಮಂಡಳಿಗೆ ಪರಿಹಾರ ನೀಡುವಂತೆ ಒತ್ತಾಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.