ಕೆಒಎ: 4ನೆ ಬಾರಿ ಅಧ್ಯಕ್ಷರಾಗಿ ಗೋವಿಂದರಾಜ್ ಆಯ್ಕೆ
ಬೆಂಗಳೂರು: ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ (ಕೆಒಎ) ಅಧ್ಯಕ್ಷರಾಗಿ ಕೆ. ಗೋವಿಂದರಾಜ್ ನಾಲ್ಕನೇ ಬಾರಿಗೆ ಆಯ್ಕೆಯಾಗಿದ್ದಾರೆ. ಶುಕ್ರವಾರ ನಡೆದ ಕೆಒಎ ಸಾಮಾನ್ಯ ಸಭೆಯಲ್ಲಿ ಅವರು ಅವಿರೋಧವಾಗಿ ಆಯ್ಕೆಯಾದರು.
ಕಾರ್ಯದರ್ಶಿ ಸ್ಥಾನವನ್ನು ಹೊರತುಪಡಿಸಿ ಎಲ್ಲ ಸ್ಥಾನಗಳಿಗೂ ಅವಿರೋಧ ಆಯ್ಕೆ ನಡೆಯಿತು. ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅನಂತರಾಜು ಅವರು, ನಂದ್ಕುಮಾರ್ ವಿರುದ್ಧ ಜಯ ಕಂಡುಕೊಂಡರು. ಒಟ್ಟು 66 ಮತಗಳಲ್ಲಿ 58 ಸದಸ್ಯರು ಮತ ಚಲಾಯಿಸಿದರು. ಅದರಲ್ಲಿ ಅನಂತರಾಜು ಅವರಿಗೆ 43 ಮತ ಪಡೆದರೆ, ನಂದ್ಕುಮಾರ್ ಅವರಿಗೆ 15 ಮತ ಪಡೆದರು.
ಕೈಗೊಂಡ ನಿರ್ಣಯಗಳು: ರಾಜ್ಯ ಒಲಿಂಪಿಕ್ಸ್ ಸಂಸ್ಥೆಗೆ ರು. 3 ಕೋಟಿ ವೆಚ್ಚದ ಒಲಿಂಪಿಕ್ಸ್ ಭವನ ನಿರ್ಮಾಣ, ಕ್ರೀಡಾ ಗ್ರಾಮ ಅಸ್ಥಿತ್ವಕ್ಕೆ ತರುವುದು, ಮುಂಬರುವ ರಾಜ್ಯ ಸರ್ಕಾರದ ಬಜೆಟ್ನಲ್ಲಿ ಕ್ರೀಡಾ ಚಟುವಟಿಕೆಗಳಿಗಾಗಿ ರು. 100 ಕೋಟಿ ಮೀಸಲಿಡುವಂತೆ ಮನವಿ ಮಾಡುವುದು ಸೇರಿದಂತೆ, ಭಾನುವಾರ ಆಯ್ಕೆಯಾದ ನೂತನ ಆಡಳಿತ ಮಂಡಳಿ ಹಲವಾರು ನಿರ್ಣಯಗಳನ್ನು ಕೈಗೊಂಡಿರುವುದಾಗಿ ಅಧ್ಯಕ್ಷ ಕೆ. ಗೋವಿಂದರಾಜ್ ಸುದ್ದಿಗಾರರಿಗೆ ತಿಳಿಸಿದರು.
ಪದಾಧಿಕಾರಿಗಳ ಪಟ್ಟಿ
ಅಧ್ಯಕ್ಷರು- ಕೆ. ಗೋವಿಂದರಾಜ್. ಉಪಾಧ್ಯಕ್ಷರು- ಜೆಪಿ ಕನೈರೋ (ಟ್ರೈಯತ್ಲಾನ್), ಮಂಜೇಗೌಡ (ಬಾಕ್ಸಿಂಗ್), ಎಂ. ಮೋಹನ್ರಾಜ್ (ಫುಟ್ಬಾಲ್), ಆರ್. ವೆಂಕಟೇಶ್ (ಆರ್ಚರಿ), ಡಿ. ಚಂದ್ರಹಾಸ ರೈ (ವೇಟ್ಲಿಫ್ಟಿಂಗ್), ಪಿ.ಎಂ ಸೋಮಶೇಖರ (ಕಬಡ್ಡಿ). ಪ್ರಧಾನ ಕಾರ್ಯದರ್ಶಿ- ಅನಂತರಾಜು, ಸಹ ಕಾರ್ಯದರ್ಶಿಗಳು- ಆರ್. ಪ್ರಕಾಶ್ (ಫೆನ್ಸಿಂಗ್), ಎಸ್.ಆರ್ ಶಿವಾನಂದ (ಜುಡೋ), ಖಜಾಚಿ-ರಾಜೇಶ್ ಜಗದಾಳೆ (ರೈಫಲ್ ಶೂಟಿಂಗ್).
ಆಡಳಿತ ಮಂಡಳಿ ಸದಸ್ಯರು- ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆ, ಕರ್ನಾಟಕ ಕುಸ್ತಿ ಸಂಸ್ಥೆ, ಕರ್ನಾಟಕ ಈಜು ಸಂಸ್ಥೆ, ಕರ್ನಾಟಕ ಟೆಕ್ವಾಂಡೋ ಸಂಸ್ಥೆ, ಕರ್ನಾಟಕ ವಾಲಿಬಾಲ್ ಸಂಸ್ಥೆ, ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಸಂಸ್ಥೆ, ಕರ್ನಾಟಕ ಲಾನ್ ಟೆನಿಸ್ ಸಂಸ್ಥೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

