ಕ್ರೀಡೆ

ಮರುಣನ ಕಾಟಕ್ಕೆ ಕ್ವಾಲಿಫಾಯರ್ ಮುಂದಕ್ಕೆ

Published On :

ಕೋಲ್ಕತಾ: ಕಳೆದ ಕೆಲವು ದಿನಗಳಿಂದ ನಿರಂತರ ಮಳೆ ಸುರಿದ ಹಿನ್ನೆಲೆಯಲ್ಲಿ ಮಂಗಳವಾರ ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಕೋಲ್ಕತಾ ನೈಟ್ ರೈಡರ್ಸ್ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಗಳ ನಡುವಿನ ಐಪಿಎಲ್ 7ನೇ ಆವೃತ್ತಿಯ ಮೊದಲ ಕ್ವಾಲಿಫಾಯರ್ ಪಂದ್ಯವನ್ನು ಒಂದು ದಿನ ಮುಂದೂಡಲಾಗಿದೆ.
ಒಂದು ವೇಳೆ ಹವಾಮಾನ ಪರಿಸ್ಥಿತಿ ಸುಧಾರಿಸಿದರೆ, ಈ ಪಂದ್ಯವನ್ನು ಬುಧವಾರ ಇದೇ ಕ್ರೀಡಾಂಗಣದಲ್ಲಿ ನಡೆಸಲು ನಿರ್ಧರಿಸಿದ್ದು, ಸಂಜೆ 4 ಗಂಟೆಗೆ ಪಂದ್ಯವನ್ನು ಆರಂಭಿಸಲಾಗುತ್ತದೆ. ಅಲ್ಲದೆ ರಾತ್ರಿ 9.15ರವರೆಗೆ ಪಂದ್ಯವನ್ನು ಆರಂಭಿಸಲು ಅಂತಿಮ ಸಮಯವಾಗಿದ್ದು,  ಈ ವೇಳೆಗೆ ಆರಂಭವಾದರೆ ಉಭಯ ತಂಡಗಳ ನಡುವೆ ತಲಾ 5 ಓವರ್ ಪಂದ್ಯವನ್ನು ನಡೆಸಲಾಗುವುದು.
ಮಂಗಳವಾರ ಸಂಜೆ 5.15ರ ಸುಮಾರಿಗೆ ಮೈದಾನದ ಅಂಪೈರ್‌ಗಳಾದ ನಿಗೆಲ್ ಲಾಂಗ್ ಮತ್ತು ಎಸ್. ರವಿ ಪಿಚ್ ಕ್ಯುರೇಟರ್ ಪ್ರಣಬ್ ಮುಖರ್ಜಿ ಜತೆ ಸಮಾಲೋಚನೆ ನಡೆಸಿದರು. ಈ ವೇಳೆ ಪಂದ್ಯ ನಡೆಸಲು ನೀಡಲಾಗಿರುವ ಅಂತಿಮ ಗಡುವಿನಲ್ಲಿ ಪಿಚ್ ಅನ್ನು ಆಡಲು ಯೋಗ್ಯವಾಗುವಂತೆ ಸಿದ್ಧ ಪಡಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪಂದ್ಯವನ್ನು ಮುಂದೂಡಲು ಮೂವರು ನಿರ್ಧರಿಸಿದರು.
ಐಪಿಎಲ್‌ನ ನಿಯಮಾವಳಿ ಪ್ರಕಾರ, ಪಂದ್ಯಕ್ಕೆ ಯಾವುದೇ ರೀತಿ ಅಡಚಣೆಯಾದಲ್ಲಿ ಪಂದ್ಯವನ್ನು 5 ಓವರ್‌ಗೆ ಕಡಿತಗೊಳಿಸಲಾಗುತ್ತದೆ. ಒಂದುವೇಳೆ 5 ಓವರ್‌ಗಳ ಆಟವೂ ಸಾಧ್ಯವಾಗದಿದ್ದಾಗ ಸೂಪರ್ ಓವರ್ ನಡೆಸುವ ಮೂಲಕ ಫಲಿತಾಂಶವನ್ನು ನಿರ್ಧರಿಸಲಾಗುವುದು. ಸೂಪರ್ ಓವರ್ ನಡೆಸಲೂ ಸಹ ಸಾಧ್ಯವಾಗದಿದ್ದರೆ, ಲೀಗ್ ಹಂತದಲ್ಲಿ ಹೆಚ್ಚಿನ ಪಂದ್ಯವನ್ನು ಗೆದ್ದುಕೊಂಡಿರುವ ತಂಡ ಫೈನಲ್‌ಗೆ ಪ್ರವೇಶಿಸಲಿದೆ.
ಲೀಗ್ ಹಂತದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ 11ರಲ್ಲಿ ಗೆಲವು  ದಾಖಲಿಸಿದ್ದರೆ, ಕೋಲ್ಕತಾ ನೈಟ್ ರೈಡರ್ಸ್ ತಂಡ 9 ಪಂದ್ಯಗಳಲ್ಲಿ ಗೆಲವು ದಾಖಲಿಸಿದೆ.
ಮಳೆ ಧಾರಾಕಾರವಾಗಿ ಸುರಿಯುತ್ತಿದ್ದು, ನಾಳೆಯು ವರುಣನ ಅಬ್ಬರ ಮುಂದುವರಿದರೆ, ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಫೈನಲ್‌ಗೆ ಪ್ರವೇಶಿಸಲಿದೆ. ನಂತರ ಕೆಕೆಆರ್ ತಂಡ ಎಲಿಮಿನೇಟರ್‌ನಲ್ಲಿ ಸಿಎಸ್‌ಕೆ ಹಾಗೂ ಮುಂಬೈ ನಡುವಣ ಪಂದ್ಯದಲ್ಲಿ ಗೆಲವು ದಾಖಲಿಸುವ ತಂಡದೊಂದಿಗೆ ಎರಡನೇ ಕ್ವಾಲಿಫಾಯರ್ ಪಂದ್ಯದಲ್ಲಿ ಸೆಣೆಸಾಡಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.