ಕ್ರೀಡೆ

ಲಂಕಾ-ಭಾರತ ಏಕದಿನ ಪಂದ್ಯ: ಶತಕ ಸಿಡಿಸಿದ ರಹಾನೆ, ಧವನ್

ಲಂಕಾ-ಭಾರತ ಏಕದಿನ ಪಂದ್ಯ: ಶತಕ ಸಿಡಿಸಿದ ರಹಾನೆ, ಧವನ್
Published On :

ಕಟಕ(ಒಡಿಶಾ): ಭಾರತ ಮತ್ತು ಶ್ರೀಲಂಕಾ ನಡುವೆ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಪರ ಅಂಜಿಕ್ಯಾ ರಹಾನೆ ಮತ್ತು ಶಿಖರ್ ಧವನ್ ಶತಕ ಸಿಡಿಸಿದ್ದಾರೆ.

ಒಡಿಶಾದ ಕಟಕ್‌ನ ಬರಬಾಟಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಉತ್ತಮ ಸ್ಥಿತಿಯಲ್ಲಿದೆ. ಆರಂಭಿಕ ಆಟಗಾರರಾದ ರಹಾನೆ ಅಜೇಯ 111 ಗಳ ನೇರವಿನೊಂದಿಗೆ ಭಾರತ 37 ಓವರ್‌ಗಳ ಲ್ಲಿ 240 ರನ್ ಗಳಿಸಿದೆ.

ಟಾಸ್ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕರಾಗಿ ಕಣಕ್ಕೀಳಿದ ರಹಾನೆ ಹಾಗೂ ಧವನ್ ಶ್ರೀಲಂಕಾ ಬೌಲರ್‌ಗಳ ಬೆವರಿಳಿಸಿದರು. ಹೆಚ್ಚು ಲಂಕಾ ಬೌಲರ್‌ಗಳನ್ನು ಕಾಡಿದ ಧವನ್ 113 ರನ್ ಗಳಿಸಿದ್ದಾಗ ಪ್ರಿಯಾಂಜನ್ ಎಸೆದ ಚೆಂಡನ್ನು ಬೌಂಡರಿಗಟ್ಟುವ ಭರದಲ್ಲಿ ಬೌಲ್ಡಾದರು. ಸದ್ಯ ರಹಾನೆ ಹಾಗೂ ಸುರೇಶ್ ರೈನಾ ಕಣದಲ್ಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.