ಹ್ಯಾಮಿಲ್ಟನ್‌ಗೆ ಯುಎಸ್ ಗರಿ

ಅತ್ಯುತ್ತಮ ಪ್ರದರ್ಶನ ನೀಡಿದ ಹ್ಯಾಮಿಲ್ಟನ್ 1 ಗಂಟೆ 40 ನಿಮಿಷದಲ್ಲಿ ರೇಸ್ ಮುಕ್ತಾಯ...
ಹ್ಯಾಮಿಲ್ಟನ್‌ಗೆ ಯುಎಸ್ ಗರಿ
Updated on: 

ಆಸ್ಟಿನ್: ಪ್ರಸಕ್ತ ಋತುವಿನ ಫಾರ್ಮುಲಾ ಒನ್ ರೇಸ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರೆಸಿರುವ ಮರ್ಸಿಡೀಸ್ ಚಾಲಕ ಲೂಯಿಸ್ ಹ್ಯಾಮಿಲ್ಟನ್, ಯುಎಸ್‌ಗ್ರಾನ್ ಪ್ರೀ ರೇಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಅಲ್ಲದೆ ವರ್ಷದ ಚಾಂಪಿಯನ್‌ಶಿಪ್‌ನತ್ತ ತಮ್ಮ ತಮ್ಮ ಹೆಜ್ಜೆ ಹಾಕಿದ್ದಾರೆ. ಭಾನುವಾರ ತಡರಾತ್ರಿ ನಡೆದ ರೇಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಹ್ಯಾಮಿಲ್ಟನ್ 1 ಗಂಟೆ 40 ನಿಮಿಷದಲ್ಲಿ ರೇಸ್ ಮುಕ್ತಾಯಗೊಳಿಸಿದರು.

ಇನ್ನು ವರ್ಷದ ಚಾಂಪಿಯನ್‌ಶಿಪ್‌ನಲ್ಲಿ ಹ್ಯಾಮಿಲ್ಟನ್‌ಗೆ ಸ್ಪರ್ಧೆ ನೀಡುತ್ತಿರುವ ಮರ್ಸಿಡೀಸ್ ಸಹ ಚಾಲಕ ನಿಕೊ ರೋಸ್‌ಬರ್ಗ್ ಎರಡನೇ ಸ್ಥಾನ ಪಡೆದರು.  ಇನ್ನು ರೆಡ್‌ಬುಲ್‌ನ ಡೇನಿಯಲ್ ರಿಕಾರ್ಡೊ ಮೂರನೇ ಸ್ಥಾನ ಪಡೆಯುವ ಮೂಲಕ ಹ್ಯಾಮಿಲ್ಟನ್ ಪ್ರಸಕ್ತ ಸಾಲಿನಲ್ಲಿ ಸತತ ಐದನೇ ಹಾಗೂ ಒಟ್ಟಾರೆ 10ನೇ ರೇಸ್ ಅನ್ನು ಗೆದ್ದುಕೊಂಡಿದ್ದಾರೆ. ಈ ಗೆಲುವಿನಿಂದ ಹ್ಯಾಮಿಲ್ಟನ್ ಋುತುವಿನ ಚಾಂಪಿಯನ್‌ಶಿಪ್‌ನಲ್ಲಿ 316 ಅಂಕಗಳನ್ನು ಹೊಂದಿದ್ದು, ರೋಸ್‌ಬರ್ಗ್‌ಗಿಂತ 24 ಅಂಕಗಳ ಮುನ್ನಡೆ ಸಾಧಿಸಿದ್ದಾರೆ.

ಪ್ರಸಕ್ತ ಋುತುವಿನಲ್ಲಿ ಎರಡು ರೇಸ್‌ಗಳು ಕ್ರಮವಾಗಿ ಸಾವ್‌ಪೌಲೊ ಹಾಗೂ ಅಬುಧಾಬಿ ಗ್ರ್ಯಾನ್ ಪ್ರೀಬಾಕಿ ಇರುವಾಗ ಹ್ಯಾಮಿಲ್ಟನ್ ಉತ್ತಮ ಮುನ್ನಡೆ ಪಡೆದಿದ್ದಾರೆ.

ಇನ್ನು ಭಾರತದ ಸಹರಾ ಫೋರ್ಸ್ ಇಂಡಿಯಾ ರೇಸ್‌ನಲ್ಲಿ ನಿರಾಸೆ ಅನುಭವಿಸಿದೆ. ತಂಡದ ಇಬ್ಬರು ಚಾಲಕರಾದ ನಿಕೊ ಹಲ್ಕನ್ ಬರ್ಗ್ ಹಾಗೂ ಸೆರ್ಗಿಯೊ ಪೆರೆಜ್ ರೇಸ್‌ನ ಆರಂಭದಲ್ಲಿ ರಿಟೈರ್ಡ್ ಆದರು. ಮೊದಲ ಲ್ಯಾಪ್‌ನಲ್ಲಿ ಅಪಘಾತದಿಂದ ಪೆರೆಜ್ ರೇಸ್ ಅಂತ್ಯವಾದರೆ, 16ನೇ ಲ್ಯಾಪ್‌ನಲ್ಲಿ ಎಂಜಿನ್ ಸಮಸ್ಯೆಯಿಂದ ಹಲ್ಕನ್‌ಬರ್ಗ್ ಹೊರಗುಳಿಯಬೇಕಾಯಿತು.

ನಾನು ಅತ್ಯುತ್ತಮ ತಂಡ, ಅದ್ಬುತ ಕಾರ್ ಹಾಗೂ ಸ್ಪರ್ಧಾತ್ಮಕ ಎದುರಾಳಿಯನ್ನು ಹೊಂದಿದ್ದೇನೆ. ನನ್ನ ದೇಶವನ್ನು ಪ್ರತಿನಿಧಿಸಿ ಪ್ರಶಸ್ತಿ ಗೆದ್ದಿರುವುದು ಹೆಮ್ಮೆಯ ಸಂಗತಿ, ಈ ರೇಸ್‌ನಲ್ಲಿ ನನ್ನ ಕಾರ್ ಉತ್ತಮವಾಗಿ ಸಹಕಾರಿಯಾಯಿತು ಎಂದು ಹ್ಯಾಮಿಲ್ಟನ್ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com