ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಘೋಷಣೆ

ಭಾರತೀಯ ಹಾಕಿ ಫೆಡರೇಷನ್ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಿದೆ. ಪುರುಷ ಮತ್ತು ಮಹಿಳಾ ವಿಭಾಗದಲ್ಲಿ...
ಹಾಕಿ
ಹಾಕಿ
Updated on: 

ನವದೆಹಲಿ: ಭಾರತೀಯ ಹಾಕಿ ಫೆಡರೇಷನ್ ಹಾಕಿ ಇಂಡಿಯಾ ವಾರ್ಷಿಕ ಪ್ರಶಸ್ತಿ ಘೋಷಣೆ ಮಾಡಿದೆ.

ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಪ್ರತೀ ವರ್ಷ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಆಟಗಾರರನ್ನು ಉತ್ತೇಜಿಸುವ ಸಲುವಾಗಿ ನಾವು ಈ ಪ್ರಶಸ್ತಿ ನೀಡುತ್ತಿದ್ದು, ಇದರಿಂದಾಗಿ ಅವರ ಉತ್ಸಾಹ ಹೆಚ್ಚಾಗುತ್ತದೆ ಎಂದು ಹಾಕಿ ಇಂಡಿಯಾ ಕಾರ್ಯದರ್ಶಿ ಜನರಲ್ ಮುಶ್ತಾಖೀ ಅಹ್ಮದ್ ಹೇಳಿದ್ದಾರೆ.

ಹಾಕಿ ಇಂಡಿಯಾ ಅಧ್ಯಕ್ಷ ಡಾ. ನರೀಂದರ್ ಬಾತ್ರಾ ಅವರ ಪುತ್ರ ಇತ್ತೀಚೆಗೆ ಮರಣಹೊಂದಿದ್ದು, ಈತನ ಸ್ಮರಣೆಗಾಗಿ ಈ ಬಾರಿ ವೈಯಕ್ತಿಕ ಟ್ರೋಫಿ ನೀಡಲು ಹಾಕಿ ಇಂಡಿಯಾ ತೀರ್ಮಾನಿದೆ.

ಸೋಮವಾರ ನಡೆದ ಹಾಕಿ ಇಂಡಿಯಾ ಎಕ್ಸಿಕ್ಯೂಟಿವ್ ಬೋರ್ಡ್ ಸಭೆಯಲ್ಲಿ ಪ್ರಶಸ್ತಿಗಳ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಪ್ರಶಸ್ತಿಗಳ ವಿವರ ಇಂತಿದೆ


ಧ್ರುವ್ ಬಾತ್ರಾ ಪ್ಲೇಯರ್ ಆಫ್ ದ ಇಯರ್ (ಪುರುಷ) -ರು. 25,00000
ಧ್ರುವ್ ಬಾತ್ರಾ ಪ್ಲೇಯರ್ ಆಫ್ ದ ಇಯರ್ (ಮಹಿಳೆ) -ರು. 25,00,000

ಭರವಸೆಯ ಕ್ರೀಡಾಪಟು  (ಪುರುಷ ವಿಭಾಗ- 21 ವರ್ಷ ಕೆಳಗಿನ ವಯಸ್ಸು)  -ರು. 10,00,000

ಭರವಸೆಯ ಕ್ರೀಡಾಪಟು  (ಮಹಿಳಾ ವಿಭಾಗ- 21 ವರ್ಷ ಕೆಳಗಿನ ವಯಸ್ಸು)  -ರು. 10,00,000

ಗೋಲ್ ಕೀಪರ್ ಆಫ್ ದ ಇಯರ್ - ರು. 5,00,000
ಡಿಫೆಂಡರ್ ಆಫ್ ದ ಇಯರ್ - ರು. 5,00,000
ಮಿಡ್ ಫೀಲ್ಡ್ ಆಫ್ ದ ಇಯರ್-  ರು.5,00,000
ಫಾರ್ವರ್ಡ್ ಆಫ್‌ದ ಇಯರ್ -ರು.5,00,000
ಅಮೂಲ್ಯ ಕೊಡುಗೆ ನೀಡಿದವರಿಗೆ  (ಕೋಚ್ ಮತ್ತು ಸಪೋರ್ಟ್ ಸ್ಟಾಫ್‌ಗಳಿಗೆ ) - ರು. 5,00,000
ಮಹೋನ್ನತ ಸಾಧನೆಗಾಗಿರುವ ಪ್ರಶಸ್ತಿ - ರು . 5,00,000.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com