ಕಾಂಗರೂ ನಾಡಲ್ಲಿ ಭಾರತ ಪ್ರತಾಪ

ಪರ್ತ್: ಪ್ರತಿಯೊಂದು ವಿಭಾಗದಲ್ಲಿ ಸಂಘಟಿತ ಪ್ರದರ್ಶನ ನೀಡುವ ಮೂಲಕ ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಅವರದ್ದೇ ನೆಲದಲ್ಲಿ ಮಕಾಡೆ ಮಲಗಿಸಿದ ಸರ್ದಾರ್ ಸಿಂಗ್ ನೇತೃತ್ವದ ಭಾರತ ಹಾಕಿ ತಂಡ, ತನ್ನ ಯಶಸ್ಸಿನ ಹಾದಿಯನ್ನು ಮುಂದುವರಿಸಿದೆ. ಆಸೀಸ್ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲೂ ಗೆಲವಿನ ನಗೆ ಬೀರುವ ಮೂಲಕ ಸರಣಿಯನ್ನು ತನ್ನ ವಶಕ್ಕೆ ತೆಗೆದುಕೊಂಡಿದೆ.
ಭಾನುವಾರ ನಡೆದ 4ನೇ ಹಾಗೂ ಕಡೇಯ ಟೆಸ್ಟ್ ಪಂದ್ಯದಲ್ಲೂ ತನ್ನ ಪ್ರಾಬಲ್ಯ ಮುಂದುವರಿಸಿದ ಭಾರತ ತಂಡ, 3-1 ಗೋಲುಗಳ ಅಂತರದಲ್ಲಿ ಆಸ್ಟ್ರೇಲಿಯಾ ತಂಡವನ್ನು ಬಗ್ಗುಬಡಿಯಿತು. ಈ ಮೂಲಕ 4 ಟೆಸ್ಟ್ ಹಾಕಿ ಪಂದ್ಯಗಳ ಸರಣಿಯನ್ನು 3-1 ಅಂತರದಲ್ಲಿ ಗೆದ್ದು ಬೀಗಿದೆ.
ಆರಂಭದಲ್ಲೇ ಅಬ್ಬರ: ಸರಣಿಯಲ್ಲಿ ಮುನ್ನಡೆಯೊಂದಿಗೆ ಆತ್ಮವಿಶ್ವಾಸದಿಂದ ಕಣಕ್ಕಿಳಿದ ಭಾರತ, ಪಂದ್ಯದ ಮೊದಲ ಕ್ವಾರ್ಟರ್‌ನಲ್ಲೇ ಗೋಲು ದಾಖಲಿಸಿ ಆರಂಭಿಕ ಮುನ್ನಡೆ ಪಡೆದುಕೊಂಡಿತು. 13ನೇ ನಿಮಿಷದಲ್ಲಿ ಸಿಕ್ಕಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಿಸಿಕೊಂಡ ಆಕಾಶ್‌ದೀಪ್ ಸಿಂಗ್ ತಂಡಕ್ಕೆ ಮೊದಲ ಗೋಲು ತಂದುಕೊಟ್ಟರು.
ನಂತರ ಆಸ್ಟ್ರೇಲಿಯಾ, ಎರಡನೇ ಕ್ವಾರ್ಟರ್‌ನಲ್ಲಿ ಹೋರಾಟ ನಡೆಸುವ ಪ್ರಯತ್ನ ಮಾಡಿತಾದರೂ ಯಶಸ್ವಿಯಾಗಲಿಲ್ಲ. ಈ ವೇಳೆ ಆಸೀಸ್ ಪಡೆಗೆ ಅಮೂಲ್ಯವಾದಂತಹ ಪೆನಾಲ್ಟಿ ಅವಕಾಶ ಲಭಿಸಿತಾದಲೂ, ಕಾಂಗರೂಗಳ ಪ್ರಯತ್ನಗಳನ್ನು ಭಾರತದ ಗೋಲ್‌ಕೀಪರ್ ಶ್ರೀಜೇಶ್ ಅತ್ಯುತ್ತಮವಾಗಿ ತಡೆದರು. ಹಾಗಾಗಿ ಭಾರತ ಪಂದ್ಯದ ಮೊದಲಾರ್ಧದಲ್ಲಿ 1-0 ಮುನ್ನಡೆ ಪಡೆಯಿತು.
ಇದೊಂದು ಶೇಷ್ಠ ಗೆಲವು. ಈ ಫಲಿತಾಂಶದಿಂದ ತಂಡಕ್ಕೆ ಸಂತೋಷವಾಗಿದ . ನನ್ನ ಪ್ರದರ್ಶನ ತೃಪ್ತಿ ತಂದಿದೆ. ವಿಶ್ವ ಚಾಂಪಿಯನ್ ಎದುರು ಆಡಿದ ಈ ಅನುಭವ ತಂಡಕ್ಕೆ ಸಕಾರಾತ್ಮಕವಾಗಲಿದೆ.
- ಎಸ್.ವಿ ಸುನೀಲ್
ನಂಬರ್ ಒನ್ ತಂಡದ ವಿರುದ್ಧ ಸತತ ಮೂರು ಗೆಲವು ಮುಂದಿನ ದಿನಗಳಲ್ಲಿ ಬರುವ ಚಾಂಪಿಯನ್ಸ್ ಟ್ರೋಫಿಗೆ ಆತ್ಮ ವಿಶ್ವಾಸ ಹೆಚ್ಚಲಿದೆ. ಅದರಿಂದ ನಮ್ಮ ತಪ್ಪನ್ನು ಸರಿಪಡಿಸಿಕೊಳ್ಳಬಹುದು. ಮುಂದಿನ ದಿನಗಳಲ್ಲಿ ಇದೇ ಪ್ರದರ್ಶನ ನೀಡಲಾಗುವುದು.
- ವಿ.ಆರ್ ರಘುನಾಥ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


