ಕ್ರೀಡೆ

ಬಾಕ್ಸರ್ ಮನೋಜ್ ಕುಮಾರ್‌ಗೆ ಕೊನೆಗೂ ಸಿಕ್ಕಿತು ಅರ್ಜುನ ಪ್ರಶಸ್ತಿ

ಬಾಕ್ಸರ್ ಮನೋಜ್ ಕುಮಾರ್‌ಗೆ ಕೊನೆಗೂ ಸಿಕ್ಕಿತು ಅರ್ಜುನ ಪ್ರಶಸ್ತಿ
Published On :

ನವದೆಹಲಿ: ಭಾರತದ ಬಾಕ್ಸರ್ ಮನೋಜ್‌ಕುಮಾರ್ ಕೊನೆಗೂ ಪ್ರತಿಷ್ಠಿತ ಅರ್ಜುನ ಪ್ರಶಸ್ತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕ್ರೀಡಾ ಸಚಿವಾಲಯ ಕೊನೆಗೂ ಅವರ ಶಿಫಾರಸ್ಸನ್ನು ಸ್ವೀಕರಿಸಿ ಅರ್ಜುನ ಪ್ರಶಸ್ತಿಯನ್ನು ಪ್ರಕಟಿಸಿದೆ.

2010ರ ಕಾಮನ್‌ವೆಲ್ತ್‌ಗೇಮ್ಸ್ ವಿಜೇತ ಮನೋಜ್‌ಕುಮಾರ್‌ಗೆ ಬುಧವಾರ ಬೆಳಗ್ಗೆ ಕ್ರೀಡಾ ಸಚಿವಾಲಯ ತಮ್ಮನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿದ ಬಗ್ಗೆ ಮಾಹಿತಿ ಲಭಿಸಿತು. ಕ್ರೀಡಾ ಜಂಟಿ ಕಾರ್ಯದರ್ಶಿ ಓಂಕಾರ್ ಕೇಡಿಯಾ, ಮಂಗಳವಾರ ಸಂಜೆಯೇ ಮನೋಜ್‌ರ ಸಹೋದರ ರಾಜೇಶ್ ಅವರಿಗೆ ಕರೆ ಮಾಡಿ ಈ ಮಾಹಿತಿ ತಿಳಿಸಿದ್ದರು. ಮನೋಜ್‌ಗೆ ಮಾತ್ರ ಮಾರನೇಯ ದಿನ ಬೆಳಗ್ಗೆ ಈ ವಿಷಯ ಗೊತ್ತಾಗಿದೆ.

ಈ ಬಾರಿ ಅರ್ಜುನ ಪ್ರಶಸ್ತಿಗೆ ತಮ್ಮನ್ನು ಆಯ್ಕೆ ಮಾಡಲಾಗುವುದೆಂದು ಕ್ರೀಡಾ ಸಚಿವಾಲಯದ ಅಧಿಕಾರಿಗಳು ಮನೋಜ್‌ಗೆ ಭರವಸೆ ನೀಡಿದ್ದರು. ಆದರೆ, ಮೊದಲ ಬಾರಿಗೆ ಘೋಷಿಸಲಾದ ಪ್ರಶಸ್ತಿ ಪಟ್ಟಿಯಿಂದ ಅವರನ್ನು ಕೈಬಿಡಲಾಗಿತ್ತು. ಬಳಿಕ 15 ಕ್ರೀಡಾಪಟುಗಳ ಪುನರ್ ಪರಿಶೀಲನಾ ಪಟ್ಟಿಯ ಮೂಲಕ ತಮಗೆ ನ್ಯಾಯ ದೊರಕಿಸಿಕೊಡುವುದಾಗಿಯೂ ಹೇಳಲಾಗಿತ್ತು. ಪುನಃ ಮನೋಜ್‌ರನ್ನು ನಿರ್ಲಕ್ಷಿಸಿದಾಗ ಸಚಿವಾಲಯದ ಕ್ರಮ ಪ್ರಶ್ನಿಸಿ ದೆಹಲಿ ಹೈಕೋರ್ಟ್‌ನ ಮೊರೆ ಹೋಗಿದ್ದರು.

ಇದೀಗ ಕ್ರೀಡಾ ಸಚಿವಾಲಯವೆ ಮನೋಜ್ ಕುಮಾರ್‌ರನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಿ ವಿವಾದಕ್ಕೆ ತೆರೆ ಎಳೆದಿದೆ. ಕೋರ್ಟ್ ಮೆಟ್ಟಿಲು ಹತ್ತುವ ಉದ್ದೇಶ ನನಗಿರಲಿಲ್ಲ.

ಆದರೆ, ಇದನ್ನು ಬಿಟ್ಟು ಬೇರೆ ದಾರಿಯೇ ಇರಲಿಲ್ಲ. ಕೊನೆಗೂ ಅರ್ಜುನ ಪ್ರಶಸ್ತಿಗೆ ತಾವು ಭಾಜನರಾಗಿರುವುದಕ್ಕೆ ಮುಂದಿನ ಏಷ್ಯನ್ ಗೇಮ್ಸ್ ದೃಷ್ಟಿಯಿಂದ ಇದು ನನ್ನಲ್ಲಿ ಹೊಸ ಚೈತನ್ಯ ತುಂಬುವಂತೆ ಮಾಡಿದೆ ಎಂದು ಮನೋಜ್ ಹೆಮ್ಮೆಯಿಂದ ಪ್ರತಿಕ್ರಿಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.