ಕಿವೀಸ್‍ಗೆ ಶರಣೆಂದ ಭಾರತ

ಭಾರತದ ಆಟಗಾರರು 24ನೇ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಭಾರಿ ಆಘಾತ ಅನುಭವಿಸಿದ್ದಾರೆ. ಸೋಮವಾರ ನಡೆದ ರೌಂಡ್ ರಾಬಿನ್ ಲೀಗ್ ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ನ್ಯೂಜಿಲೆಂಡ್ ವಿರುದಟಛಿ ಸೋಲನುಭವಿಸಿತು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಇಫೊ (ಮಲೇಷಿಯಾ): ಭಾರತದ ಆಟಗಾರರು 24ನೇ ಸುಲ್ತಾನ್ ಅಜ್ಲಾನ್ ಶಾ ಕಪ್ ಹಾಕಿ ಟೂರ್ನಿಯಲ್ಲಿ ಭಾರಿ ಆಘಾತ ಅನುಭವಿಸಿದ್ದಾರೆ. ಸೋಮವಾರ ನಡೆದ ರೌಂಡ್ ರಾಬಿನ್ ಲೀಗ್ ಸುತ್ತಿನ ತನ್ನ ಎರಡನೇ ಪಂದ್ಯದಲ್ಲಿ ಭಾರತ 1-2 ಗೋಲುಗಳಿಂದ ನ್ಯೂಜಿಲೆಂಡ್ ವಿರುದಟಛಿ ಸೋಲನುಭವಿಸಿತು.

ವಿಜೇತ ನ್ಯೂಜಿಲೆಂಡ್ ಪರ ನಾಯಕ ಸೈಮನ್ ಚೈಲ್ಡ್ 38ನೇ ನಿಮಿಷ ಮತ್ತು ಆ್ಯಂಡಿ ಹೆವಾರ್ಡ್ 54ನೇ ನಿಮಿಷದಲ್ಲಿ ಗೋಲು ಗಳಿಸಿ ಪಂದ್ಯದಲ್ಲಿ ಮಿಂಚಿದರು. ಭಾರತದ ಪರ ಆಕಾಶದೀಪ್ 43ನೇ ನಿಮಿಷದಲ್ಲಿ ಏಕಮಾತ್ರ ಗೋಲುಗಳಿಸಿದರು.
ಮಳೆಯಿಂದಾಗಿ ಪಂದ್ಯ ಸ್ವಲ್ಪ ತಡವಾಗಿ  ಆರಂಭಗೊಂಡಿತು. ಮೊದಲೆರಡೂ ಕ್ವಾರ್ಟರ್ ಗಳಲ್ಲಿ ಎರಡೂ ತಂಡಗಳಿಗೆ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ವಿರಾಮದ ವೇಳೆ ಗೋಲುರಹಿತ ಸಾಧನೆ ಮಾಡಿದ್ದ ಉಭಯ ತಂಡಗಳಿಂದ ಮುಂದಿನ ಎರಡು ಕ್ವಾರ್ಟರ್‍ಗಳಲ್ಲಿ ಮಾತ್ರ ತೀವ್ರ ಹೋರಾಟ ನಡೆಯಿತು.ಮೂರನೇ ಕ್ವಾರ್ಟರ್ ಆಟ ಪ್ರಾರಂಭವಾಗಿ ಎಂಟು ನಿಮಿಗಳು ಕಳೆಯುವಷ್ಟರಲ್ಲಿ ನ್ಯೂಜಿಲೆಂಡ್ ತಂಡಕ್ಕೆ ಖಾತೆ ತೆರೆಯುವ ಭಾಗ್ಯ ಸಿಕ್ಕಿತು. ಶಾಯ್ ನೀಲ್ ನೀಡಿದ ಪಾಸ್ ನಲ್ಲಿ ಭಾರತದ ರಕ್ಷಣಾ ಆಟಗಾರರನ್ನು ವಂಚಿಸಿದ ಸೈಮನ್ ಚೈಲ್ಡ್ ಆಕರ್ಷಕ ಗೋಲು ಬಾರಿಸಿ ನ್ಯೂಜಿಲೆಂಡ್ ಗೆ 1-0 ಗೋಲಿನ ಮುನ್ನಡೆ ತಂದುಕೊಟ್ಟರು.

ಆದರೆ, ಈ ಮುನ್ನಡೆಯನ್ನು ಕಿವೀಸ್ ಆಟಗಾರರು ಹೆಚ್ಚು ಸಮಯ ಉಳಿಸಿಕೊಳ್ಳಲಿಲ್ಲ. ಕೇವಲ ಐದು ನಿಮಿಷಗಳ ಆಟ ಕಳೆಯುವಷ್ಟರಲ್ಲಿ ಭಾರತ ತಿರುಗಿಬಿದ್ದುತು. ವಿ.ಆರ್.ರಘುನಾಥ್ ಜೊತೆಗಿನ ಉತ್ತಮ ಹೊಂದಾಣಿಕೆಯಿಂದಾಗಿ ಆಕಾಶದೀಪ್ ಅವರು ಭಾರತದ ಪರ ಗೋಲುಗಳಿಸಿ ಉಭಯರ ನಡುವಿನ ಹೋರಾಟ 1-1ಕ್ಕೆ ಸಮಸ್ಥಿತಿ ತಲುಪಲು ಕಾರಣರಾದರು.  ಇನ್ನು ಕೊನೆಯ 15 ನಿಮಿಷಗಳ ನಾಲ್ಕನೇ ಕ್ವಾರ್ಟರ್ ಆಟದಲ್ಲಿ ಉಭಯರು ಮುನ್ನಡೆಗಾಗಿ ಭಾರಿ ಪ್ರಯತ್ನ ನಡೆಸಿದರು. ನ್ಯೂಜಿಲೆಂಡ್ ತಂಡವನ್ನು ತಂಡವನ್ನು ಅದೃಷ್ಟ ಕೈಬಿಡದಿದ್ದರಿಂದ ಅಂತಿಮವಾಗಿ ಭಾರತಕ್ಕೆ ಸೋಲೇ ಗತಿಯಾಯಿತು.

ಕೊರಿಯಾಗೆ ಗೆಲವು
ದಿನದ ಮೊದಲ ಪಂದ್ಯದಲ್ಲಿ ಕೊರಿಯಾ ಆಟಗಾರರು 3-1 ಗೋಲುಗಳಿಂದ ಕೆನಡಾ ತಂಡದ ವಿರುದ್ಧ ಗೆಲುವು ದಾಖಲಿಸಿದರು. ಸೋಮವಾರ ನಡೆದ ಮೊದಲ ಪಂದ್ಯದಲ್ಲಿ ಭಾರತದ ಎದುರು 2-2 ಗೋಲುಗಳಿಂದ ಡ್ರಾ ಫಲಿತಾಂಶ ಪಡೆದಿದ್ದ ಕೊರಿಯಾ, ಮಂಗಳವಾರ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ನಿಚ್ಚಳ ಜಯ ದಾಖಲಿಸುವಲ್ಲಿ ಯಶಸ್ವಿಯಾಯಿತು.

ಆಸೀಸ್ ಗೆ ಎರಡನೇ ಜಯ
ಮೊದಲ ಪಂದ್ಯದಲ್ಲಿ ಕೆನಡಾ ವಿರುದ್ಧ 7-0 ಗೋಲುಗಳಿಂದ ದೊಡ್ಡ ಜಯ ಪಡೆದಿದ್ದ ಆಸ್ಟ್ರೇಲಿಯಾ ತಂಡ, ಮಂಗಳವಾರ ತನ್ನ ಎರಡನೇ ಪಂದ್ಯದಲ್ಲಿ ಮಲೇಷಿಯಾ ತಂಡವನ್ನು 4-3 ಗೋಲುಗಳಿಂದ ಮಣಿಸಿತು. ಈ ಮೂಲಕ ಎರಡೂ ಪಂದ್ಯಗಳಿಂದ 6 ಅಂಕ ಪಡೆದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ತ, ಅತಿಥೇಯ ಮಲೇಷಿಯಾ, ಈ ಪಂದ್ಯದಲ್ಲಿನ ಸೋಲು ಸೇರಿ, ಈವರೆಗಿನ ಸತತ 2ನೇ ಸೋಲು ದಾಖಲಿಸಿದೆ. ಸೋಮವಾರ, ನ್ಯೂಜಿಲೆಂಡ್ ವಿರುದ್ಧ ಸೆಣಸಿದ್ದ ಮಲೇಷಿಯಾ 4-2 ಗೋಲುಗಳಿಂದ ಸೋತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com