ಕಿಂಗ್ಸ್ ಇಲೆವೆನ್ ವಿರುದ್ಧ ಜಯ: ಐಪಿಎಲ್ ನಲ್ಲಿ ರಾಜಸ್ಥಾನ ಶುಭಾರಂಭ

ಜೇಮ್ಸ್ ಫಾಕ್ನರ್ ಹಾಗೂ ಟಿಮ್ ಸೌಥೀ ಅವರ ಮಿಂಚಿನ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ, ಶುಕ್ರವಾರ ನಡೆದ ಐಪಿಎಲ್ ಲೀಗ್ ಪಂದ್ಯದಲ್ಲಿ ಕಿಂಗ್ಸ್...
ರಾಜಸ್ಥಾನ ರಾಯಲ್ಸ್ ತಂಡ
ರಾಜಸ್ಥಾನ ರಾಯಲ್ಸ್ ತಂಡ
Updated on: 

ಪುಣೆ: ಜೇಮ್ಸ್ ಫಾಕ್ನರ್ ಹಾಗೂ ಟಿಮ್ ಸೌಥೀ ಅವರ ಮಿಂಚಿನ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ತಂಡ, ಶುಕ್ರವಾರ ನಡೆದ ಐಪಿಎಲ್ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ವಿರುದ್ಧ 26 ರನ್‍ಗಳ ಜಯ ದಾಖಲಿಸಿತು. ಈ ಮೂಲಕ ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಗೆಲವಿನ ಮೂಲಕ ಶುಭಾರಂಭ ಮಾಡಿತು.

ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ ರಾಯಲ್ಸ್, 20 ಓವರ್ ಗಳಲ್ಲಿ 7 ವಿಕೆಟ್‍ಗೆ 162 ರನ್ ಗಳಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ 20 ಓವರ್‍ಗಳಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 136 ರನ್ ಗಳಿಸಲಷ್ಟೇ ಶಕ್ತವಾಯಿತು.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವೇಗಿಗಳದ್ದೇ ಕಾರುಬಾರು. ರಾಜಸ್ಥಾನ ಇನ್ನಿಂಗ್ಸ್ ವೇಳೆ ಅನುರೀತ್ ಸಿಂಗ್ ಹಾಗೂ ಮಿಚೆಲ್ ಜಾನ್ಸನ್ ಆರ್ಭಟಿಸಿದರೆ, ಪಂಜಾಬ್ ಇನಿಂಗ್ಸ್ ನಲ್ಲಿ ಟಿಮ್ ಸೌಥೀ ಮತ್ತು ಜೇಮ್ಸ್ ಫಾಕ್ನರ್ ಮೇಳೈಸಿದರು. ಆದರೆ, ಈ ಪೈಪೋಟಿಯಲ್ಲಿ ಯಶಸ್ವಿಯಾಗಿದ್ದು ಮಾತ್ರ  ರಾಜಸ್ಥಾನ ತಂಡದ ಬೌಲರ್‍ಗಳು.

ಅದರಲ್ಲೂ ಟಿಮ್ ಸೌಥೀ ಹಾಗೂ ಜೇಮ್ಸ್ ಫಾಕ್ನರ್ ಅವರು 136 ರನ್ ಮೊತ್ತಕ್ಕೆ ಪಂಜಾಬ್ ತಂಡದ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾದರು. ರಾಜಸ್ಥಾನ ನೀಡಿದ್ದ 163 ರನ್‍ಗಳ ಗುರಿ ಬೆನ್ನಟ್ಟಲು ಕಣಕ್ಕಿಳಿದಿದ್ದ ಪಂಜಾಬ್ ತಂಡದ ಆಸೆಗೆ ತಣ್ಣೀರೆರೆಚಿದ್ದು ಈ ಇಬ್ಬರೇ.

ಪಂಜಾಬ್ ತಂಡದ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಅವರನ್ನು ಡಕ್ ಔಟ್ ಮಾಡಿ ಹೊರಹಾಕಿದ ಸೌಥೀ, ಮಧ್ಯಮ ಕ್ರಮಾಂಕದ ಅಕ್ಷರ್ ಪಟೇಲ್ ಅವರ ವಿಕೆಟ್ ಪಡೆದರು. ಇನ್ನು, ಫಾಕ್ನರ್ ಅವರು, ಅಪಾಯಕಾರಿ ಆಟಗಾರನಾದ ಗ್ಲೆನ್ ಮ್ಯಾಕ್ಸವೆಲ್, ಜಾರ್ಜ್ ಬೇಯ್ಲಿ ಹಾಗೂ ಮಿಚೆಲ್ ಅವರನ್ನು ಡಕ್‍ಔಟ್ ಮಾಡಿ ಹೊರಹಾಕಿದ ಸೌಥೀ, ಮಧ್ಯಮ ಕ್ರಮಾಂಕದ ಅಕ್ಷರ್ ಪಟೇಲ್ ಅವರ ವಿಕೆಟ್ ಪಡೆದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com