

ಅಹಮದಾಬಾದ್: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಉತ್ತಮವಾಗಿ ಬ್ಯಾಟ್ ಬೀಸಿದ್ದು, ರಾಯಲ್ಸ್ ಗೆ ಗೆಲ್ಲಲು 157 ರನ್ ಗಳ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭಿಕರಾದ ಸ್ಮಿತ್ ಅತ್ಯುತ್ತಮವಾಗಿ ಬ್ಯಾಟ್ ಬಿಸಿದ್ದು 29 ಎಸೆತಗಳಲ್ಲಿ 40 ಗಳಿಸಿ ಔಟಾದರು. ಆದರೆ ಸ್ಫೋಟಕ ಬ್ಯಾಟ್ಸ್ ಮನ್ ಬ್ರೆಂಡನ್ ಮೆಕ್ಲಮ್ ಕೇವಲ 12 ಸಿಡಿಸಿ ಅಭಿಮಾನಿಗಳಿಗೆ ನಿರಾಸೆ ಮಾಡಿದರು.
ನಂತರ ಬಂದ ಸುರೇಶ್ ರೈನಾ 4 ರನ್ ಗಳಿಸಿ ಔಟಾದರೆ, ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಫಾಫ್ ಡು ಪ್ಲೆಸಿಸ್ 1 ರನ್ ಕಲೆ ಹಾಕಿ ಪೆವಿಲಿಯನ್‌ಗೆ ಮರಳಿದರು.
ಕಡಿಮೆ ಮೊತ್ತಕ್ಕೆ ಕುಸಿಯುತ್ತಿದ್ದ ತಂಡಕ್ಕೆ ಡ್ವೇನ್ ಬ್ರಾವೊ ಅಜೇಯ ಹಾಗೂ ನಾಯಕ ಮಹೇಂದ್ರ ಸಿಂಗ್ ಧೋನಿ ಚೇತರಿಕೆ ನೀಡಿದರು. ಬ್ರಾವೋ ಅಜೇಯ 62 ರನ್ ಹಾಗೂ ಧೋನಿಯ 31 ಗಳಿಸಿದ್ದು, ಈ ಇಬ್ಬರ ಜತೆಯಾಟ 91 ರನ್ ಸಿಡಿಸಿದ್ದು, ರಾಜಸ್ಥಾನ ರಾಯಲ್ಸ್ ಗೆ ಗೆಲ್ಲಲು 157 ರನ್ ಗಳ ಗುರಿ ನೀಡಲು ಸಾಧ್ಯವಾಯಿತು.
ರಾಜಸ್ಥಾನ ರಾಯಲ್ಸ್ ಪರ ಅಂಕಿತ್ ಶರ್ಮಾ, ಮೋರಿಸ್, ತಂಬೇ ಹಾಗೂ ಜೇಮ್ಸ್ ಫಾಕ್ನರ್ ತಲಾ 1 ವಿಕೆಟ್ ಪಡೆದರು.