
ಬೆಂಗಳೂರು: ಬ್ಯಾಟಿಂಗ್ ನಲ್ಲಿ ಸುರೇಶ್ ರೈನಾ(62 ರನ್) ಅಬ್ಬರ, ಬೌಲಿಂಗ್ ನಲ್ಲಿ ಆಶಿಶ್ ನೆಹ್ರಾ(4 ವಿಕೆಟ್) ಕರಾರುವಕ್ ಬೌಲಿಂಗ್ ದಾಳಿಯಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ
ಐಪಿಎಲ್ ಎಂಟನೇ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ವಿರುದ್ಧ ಗೆಲವಿನ ನಗೆ ಬೀರಿದೆ.
ನಗರದ ಚಿನ್ನಸ್ವಾಮಿ ಅಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 27 ರನ್ ಅಂತರದಲ್ಲಿ ಗೆಲವು ದಾಖಲಿಸಿತು. ಟಾಸ್ ಗೆದ್ದ ಆರ್‍ಸಿಬಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ನಂತರ ಚೆನ್ನೈಸೂಪರ್ ಕಿಂಗ್ಸ್ ತಂಡ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 181 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಆರ್‍ಸಿಬಿ 20 ಓವರ್‍ಗಳಲ್ಲಿ 8 ವಿಕೆಟ್‍ಗೆ 154 ರನ್ ಕಲೆಹಾಕಿತು. ತವರಿನ ಅಂಗಣದಲ್ಲಿ ಸತತ ಮೂರನೇ ಸೋಲಿನಿಂದಾಗಿ ಆರ್‍ಸಿಬಿ ಅಂಕಪಟ್ಟಿಯಲ್ಲಿ ಕೆಳಸ್ಥಾನಕ್ಕೆ ಕುಸಿದಿದೆ.
ಗೇಯ್ಲ್ ಗೆ ವಿಶ್ರಾಂತಿ: ತಂಡದ ಬ್ಯಾಟಿಂಗ್ ಬಲವಾದ ಕ್ರಿಸ್ ಗೇಯ್ಲ್ ಅವರಿಗೆ ವಿಶ್ರಾಂತಿ ನೀಡಿದ ಆರ್‍ಸಿಬಿ ಎಲ್ಲರಲ್ಲಿ ಅಚ್ಚರಿ ಮೂಡಿಸಿತು. ಈ ಮೂಲಕ ಆರಂಭಿಕ ಬ್ಯಾಟ್ಸ್ ಮನ್ ಆಗಿ ರಿಲಿ ರೊಸ್ಸೊ ಅವರನ್ನು ಕಣಕ್ಕಿಳಿಸುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಯಿತು. ಇನ್ನು ಗೇಯ್ಲ್ ಬದಲಿಗೆ ವಿದೇಶಿ ಆಟಗಾರನಾಗಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ ಕಣಕ್ಕಿಳಿದರು. ಈ ಪ್ರಯೋಗಗಳು ತಂಡಕ್ಕೆ ಗೆಲವು ತಂದುಕೊಡಲಿಲ್ಲ.
Advertisement