ವಿಶ್ವ ಈಜಿನಲ್ಲಿ ಮೂರು ಹೊಸ ದಾಖಲೆ

ಕಜಾನ್ (ರಷ್ಯಾ): ವಿಶ್ವ ಈಜು ಚಾಂಪಿಯನ್ಶಿಪ್ನಲ್ಲಿ ಈ ಹಿಂದಿದ್ದ ಮೂರು ವಿಶ್ವ ದಾಖಲೆಗಳು ಅಳಿಸಲ್ಪಟ್ಟು ಹೊಸ ದಾಖಲೆಗಳು ನಿರ್ಮಾಣವಾಗಿವೆ. 100 ಮೀ. ಬಟರ್ ಫ್ಲೈ
200 ಮೀ. ವೈಯಕ್ತಿಕ ಮೆಡ್ಲೆ ಹಾಗೂ ಮಹಿಳೆಯರ 1, 500 ಮೀ. ಫ್ರೀ ಸ್ಟೈಲ್ ವಿಭಾಗಗಳಲ್ಲಿ ಮೂರು ಹೊಸ ದಾಖಲೆಗಳು ನಿರ್ಮಿತವಾಗಿವೆ ಎಂದು ಐಬಿಎನ್ ಜಾಲತಾಣ ವರದಿ ಮಾಡಿದೆ.
ಮಹಿಳೆಯರ 100 ಮೀ. ಬಟರ್ ಫ್ಲೈ ವಿಭಾಗದಲ್ಲಿ ಸ್ಪರ್ಧಿಸಿದ್ದ ಸ್ವೀಡನ್ನ ಸಾರಾ ಜೊಸ್ಟ್ರೊಮ್, ನಿಗದಿತ ಗುರಿಯನ್ನು 55.4 ಸೆಕೆಂಡ್ಗಳಲ್ಲಿ ಮುಟ್ಟಿ ಎರಡು ದಿನಗಳ ಹಿಂದಷ್ಟೇ ಇದೇ ವಿಭಾಗದಲ್ಲಿ ತಾವು ಮಾಡಿದ್ದ ವಿಶ್ವ ದಾಖಲೆಯನ್ನು ಕೇವಲ 0.1 ಸೆಕೆಂಡ್ನ ಅಂತರದಲ್ಲಿ ಮುರಿದರು. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಹಾಲೆಂಡ್ನ ಜೀನೆಟ್ ಒಟೆಸೆನ್ 57.05 ಸೆಕೆಂಡ್ಗಳಲ್ಲಿ ಗುರಿ ಮುಟ್ಟಿ ದ್ವಿತೀಯ ಸ್ಥಾನ ಗಳಿಸಿದರೆ, ಚೀನಾದ ಲು ಯಿಂಗ್ 57.48 ಸೆಕೆಂಡ್ಗಳಲ್ಲಿ ಗುರಿ ಕ್ರಮಿಸಿ 3ನೇ ಸ್ಥಾನ ಪಡೆದರು.
ಇನ್ನು, 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲಿ ವಿಶ್ವದಾಖಲೆ ಮುರಿದಿದ್ದು ಹಂಗೇರಿಯ ಕಾಟಿಂಕಾ ಹೊಸ್ಸು. ನಿಗದಿತ ಗುರಿಯನ್ನು 2:06.12 ಸೆಕೆಂಡ್ಗಳಲ್ಲಿ ಕ್ರಮಿಸುವ
ಮೂಲಕ, 2009ರಲ್ಲಿ ನಡೆದಿದ್ದ ರೋಮ್ ವಿಶ್ವ ಈಜು ಚಾಂಪಿಯನ್ಶಿಪ್ನಲ್ಲಿ ಅಮೆರಿಕದ ಆ್ಯರಿಯಾನಾ ಕುಕೊರ್ಸ್ ಮಾಡಿದ್ದ (2:06.14 ಸೆಕೆಂಡ್) ಸಾಧನೆಯನ್ನು
ಹಿಂದಿಕ್ಕಿದರು. ಈ ವಿಭಾಗದಲ್ಲಿ ಸ್ಪರ್ಧಿದ್ದ ಜಪಾನ್ನ ಕನಾಕೊ ವಾಟನಾಬ್ 2:08.45 ಸೆಕೆಂಡ್ಗಳಲ್ಲಿ ಗುರಿಮುಟ್ಟಿ 2ನೇ ಸ್ಥಾನ ಗಳಿಸಿದರೆ, ಬ್ರಿಟನ್ನ ಸಿಯೋಭನ್
ಮ್ಯಾರಿ ಒ'ಕೊನೊರ್ ಅವರು, 2:08.77 ಸೆಕೆಂಡ್ಗಳಲ್ಲಿ ನಿಗದಿತ ಗುರಿ ತಲುಪಿ ತೃತೀಯ ಸ್ಥಾನ ಗಳಿಸಿದರು. ಲಂಡನ್ ಒಲಿಂಪಿಕ್ಸ್ನಲ್ಲಿ ಚಿನ್ನದ ಸಾಧನೆ ಮಾಡಿದ್ದ ಚೀನಾದ ಯೋ ಸ್ವಿಡೆನ್ ಅವರು, ಈ ವಿಭಾಗದಲ್ಲಿ 8ನೇ ಸ್ಥಾನ ಗಳಿಸಿದ್ದು ಅಚ್ಚರಿ ತಂದಿತು. ಮಹಿಳೆಯರ 1,500 ಮೀ. ಪ್ರೀ ಸ್ಟೈಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಅಮೆರಿಕದ ಈಜು ತಾರೆ ಕ್ಯಾಟಿ ಲೆಡೆಕಿ, ನಿಗದಿತ ಗುರಿಯನ್ನು 15 ನಿಮಿಷ, 27.71 ಸೆಕೆಂಡ್ಗಳಲ್ಲಿ ಕ್ರಮಿಸಿ ತಾವೇ ಈ ಹಿಂದೆ ಹೊಂದಿದ್ದ ವಿಶ್ವ ದಾಖಲೆಯನ್ನು ಅಳಿಸಿ ಹಾಕಿದರು. ಇದರೊಂದಿಗೆ ಈ ವಿಭಾಗದಲ್ಲಿ ನಾಲ್ಕನೇ ಬಾರಿಗೆ ವಿಶ್ವ ದಾಖಲೆ ಬರೆದಂತಾಗಿದೆ. 2014ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಪ್ಯಾನ್ ಪೆಸಿಫಿಕ್ ಚಾಂಪಿಯನ್ಶಿಪ್ನಲ್ಲಿ ಕ್ಯಾಟಿ 1,500 ಮೀ. ಫ್ರೀ ಸ್ಟೈಲ್ ನಲ್ಲಿ 15 ನಿಮಿಷ, 28.36 ಸೆಕೆಂಡ್ಗಳಲ್ಲಿ ಈಜಿ ದಾಖಲೆ ನಿರ್ಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


