ಮಹೇಂದ್ರ ಸಿಂಗ್ ಧೋನಿಗೆ ಸೇನಾ ತರಬೇತಿ

ಭಾರತೀಯ ಸೇನೆ ಗೌರವಾರ್ಥವಾಗಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಅವರಿಗೆ ಲೆಫ್ಟಿನೆಂಟ್ ಕರ್ನಲ್ ರ್ಯಾಂಕ್ ನೀಡಿದ್ದು, ಧೋನಿ ಈಗ ಎರಡು...
ಎಂ.ಎಸ್.ಧೋನಿ (ಸಂಗ್ರಹ ಚಿತ್ರ)
ಎಂ.ಎಸ್.ಧೋನಿ (ಸಂಗ್ರಹ ಚಿತ್ರ)

ನವದೆಹಲಿ: ಭಾರತೀಯ ಸೇನೆ ಗೌರವಾರ್ಥವಾಗಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಅವರಿಗೆ ಲೆಫ್ಟಿನೆಂಟ್ ಕರ್ನಲ್ ರ್ಯಾಂಕ್ ನೀಡಿದ್ದು, ಧೋನಿ ಈಗ ಎರಡು ವಾರಗಳ ಕಾಲ ಆಗ್ರಾದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದಾರೆ.

ತನಗೆ ತರಬೇತಿ ನೀಡುವಂತೆ ಧೋನಿ ಸೇನಾ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಹೀಗಾಗಿ ಅಧಿಕಾರಿಗಳು ಧೋನಿಯನ್ನು ತರಬೇತಿಗೆ ಆಹ್ವಾನಿಸಿದ್ದಾರೆ.

ಆಗಸ್ಟ್ 5ರಂದು ಧೋನಿ ಆಗ್ರಾದಲ್ಲಿರುವ ಪ್ಯಾರಾ ಬ್ರಿಗೇಡ್‌ಗೆ ರಿಪೋರ್ಟ್ ಮಾಡಿಕೊಂಡಿದ್ದು, ಅಲ್ಲಿನ ಪ್ಯಾರಾ ತರಬೇತಿ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಎರಡು ವಾರಗಳ ತರಬೇತಿಯ ನಂತರ ಧೋನಿ ಅವರು ಐದು ಪ್ಯಾರಾಚುಟ್ ಜಂಪ್‌ಗಳನ್ನು ಮಾಡುವ ನಿರೀಕ್ಷೆ ಇದೆ ಎಂದು ರಕ್ಷಣಾ ಸಚಿವಾಲಯದ ವಕ್ತಾರ ಸೀತಾಂಶು ಕರ್ ಅವರು ಹೇಳಿದ್ದಾರೆ.

ಧೋನಿ ಅವರಿಗೆ 2011ರಲ್ಲಿ ಪ್ಯಾರಾಚುಟ್ ರೆಜಿಮೆಂಟ್‌ನಲ್ಲಿ ಗೌರವಾರ್ಥವಾಗಿ ಲೆಫ್ಟಿನೆಂಟ್ ಕರ್ನಲ್ ಹುದ್ದೆ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com