
ನಾಟಿಂಗ್‍ಹ್ಯಾಂ: ಕ್ರೀಡಾ ಜಗತ್ತಿನ ಅತಿಕಿರಿಯ ಟ್ರೋಫಿ ಎಂದೇ ಕರೆಸಿಕೊಳ್ಳುವ `ಆ್ಯಶಸ್' ಮತ್ತೆ ಇಂಗ್ಲೆಂಡ್‍ನ ಕೈವಶವಾಗಿದೆ.ವಿಶ್ವ ಕ್ರಿಕೆಟ್‍ನ ಅತ್ಯಂತ ಉತ್ಕಟತೆಯ
ಹಾಗೂ ಉದ್ವಿಗ್ನತೆಯ ದ್ವಿಪಕ್ಷೀಯ ಸರಣಿಗಳ ಪೈಕಿ ಒಂದಾಗಿರುವ ಈ ಆ್ಯಶಷ್ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಪಾಲಿಗೆ ಅತ್ಯಂತ ಪ್ರತಿಷ್ಠೆಯದ್ದು. ಇಂಥ ಮಹತ್ವ
ನೀಯ ಸರಣಿಯನ್ನು ಗೆದ್ದ ಇಂಗ್ಲೆಂಡ್ ಆಟಗಾರರ ಹರ್ಷ ಮುಗಿಲು ಮೀರಿದೆ. ಈಗ್ಗೆ 18 ತಿಂಗಳುಗಳ ಹಿಂದೆ ಕಾಂಗರೂ ನೆಲದಲ್ಲಿ 0-5 ಅಂತರದಿಂದ ಕ್ಲೀನ್‍ಸ್ವೀಪ್ ಮುಖಭಂಗಕ್ಕೆ ಗುರಿಯಾಗಿದ್ದ ಇಂಗ್ಲೆಂಡ್, ಇದೀಗ ತವರಿನಲ್ಲಿ ಸರಣಿ ಗೆದ್ದು ಪುಟಿ ದೆದ್ದು ನಿಂತಿದೆ. ಅಂದಹಾಗೆ ಅಲೆಸ್ಟೈರ್ ಕುಕ್ ನಾಯಕತ್ವದಲ್ಲಿ ಇಂಗ್ಲೆಂಡ್‍ಗೆ ಇದು ಎರಡನೇ ಆ್ಯಶಷ್ ಟೆಸ್ಟ್ ಸರಣಿ ಗೆಲುವು.ಇಲ್ಲಿನ ಟ್ರೆಂಟ್‍ಬಿಡ್ಜ್‍ನಲ್ಲಿ ಶನಿವಾರ ಮುಕ್ತಾಯ ಕಂಡ ನಾಲ್ಕನೇ ಟೆಸ್ಟ್ ಪಂದ್ಯ ನಿರೀಕ್ಷೆಯಂತೆಯೇ ಆತಿಥೇಯರ ಕೈವಶವಾಯಿತು. ಪಂದ್ಯದ ಮೂರನೇ ದಿನ ದಂದೇ ಆಂಗ್ಲರ ಗೆಲುವು ಖಚಿತವಾಗಿತ್ತು. ಗೆಲುವಿಗೆ ಕೇವಲ ಮೂರು ವಿಕೆಟ್ ಗಳಷ್ಟೇ ಬೇಕಿತ್ತು. ಕೇವಲ 39 ನಿಮಿಷಗಳಲ್ಲೇ ಇಂಗ್ಲೆಂಡ್ ಆ ಮೂರು ವಿಕೆಟ್‍ಗಳನ್ನು ಎಗರಿಸುವುದರೊಂದಿಗೆ ವಿಜಯ ದುಂದುಭಿ ಮೊಳಗಿತು. ಆ ಮೂಲಕ 5 ಪಂದ್ಯ ಟೆಸ್ಟ್ ಸರಣಿಯನ್ನು ಇಂಗ್ಲೆಂಡ್ 3-1 ಅಂತರದಿಂದ ಗೆದ್ದುಕೊಂಡಿತು. ಮೂರೇ ದಿನದಲ್ಲಿ ಪಂದ್ಯ ಮುಕ್ತಾಯಗೊಳಿಸಿದ್ದೂ ಇಂಗ್ಲೆಂಡ್‍ನ ಪ್ರಾಬಲ್ಯಕ್ಕೆ ಸಾಕ್ಷಿ ಎನಿಸಿತು.
ಪಂದ್ಯದ ಎರಡನೇ ದಿನದಂದು 7 ವಿಕೆಟ್‍ಗೆ 241 ರನ್ ಮಾಡಿದ್ದ ಆಸ್ಟ್ರೇಲಿಯಾ ಶನಿವಾರ ಕಲೆಹಾಕಿದ್ದು 12 ರನ್‍ಗಳನ್ನಷ್ಟೆ. ಮೊದಲ ಇನ್ನಿಂಗ್ಸ್‍ನಲ್ಲಿ ಕೇವಲ 15 ರನ್‍ಗೆ 8 ವಿಕೆಟ್ ಪಡೆದು ಕಾಂಗರೂಗಳನ್ನು ಕಾಡಿದ್ದ ಸ್ಟುವರ್ಟ್ ಬ್ರಾಡ್ ಪಂದ್ಯದ ಮೊದಲ ದಿನದಂದೇ ಆಂಗ್ಲರ ಗೆಲುವನ್ನು ಖಚಿತಪಡಿಸಿದ್ದರು. ಅದಕ್ಕೆ ಪೂರಕವಾಗಿ ಎರಡನೇ ಇನ್ನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾವನ್ನು ಕಟ್ಟಿಹಾಕಿದ್ದು ಬೆನ್ ಸ್ಟೋಕ್ಸ್. 36 ರನ್‍ಗೆ 6 ವಿಕೆಟ್ ಪಡೆದ ಅವರು ಆಸ್ಟ್ರೇಲಿಯಾದ ಎರಡನೇ ಇನ್ನಿಂಗ್ಸ್ ಅನ್ನು ಛಿದ್ರಗೊಳಿಸಿದರು. ಜೀವಮಾನ ಶ್ರೇಷ್ಠ ಬೌಲಿಂಗ್ ಪ್ರದರ್ಶನದೊಂದಿಗೆಮ ಚರಿತ್ರಾರ್ಹ ಗೆಲುವಿಗೆ ಮುನ್ನುಡಿ ಬರೆದ ಸ್ಟುವರ್ಟ್ ಬ್ರಾಡ್ ಸಹಜವಾಗಿಯೇ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ: 60 ಮತ್ತು 253
ಇಂಗ್ಲೆಂಡ್: 391/9 ಡಿಕ್ಲೇರ್ ಫಲಿತಾಂಶ: ಇಂಗ್ಲೆಂಡ್‍ಗೆ ಇನ್ನಿಂಗ್ಸ್ ಹಾಗೂ
78 ರನ್ ಜಯ
ಪಂದ್ಯಶ್ರೇಷ್ಠ: ಸ್ಟುವರ್ಟ್ ಬ್ರಾಡ್
Advertisement