183ಕ್ಕೆ ಲಂಕಾ ಆಲ್ಔಟ್, ಅಶ್ವಿನ್ಗೆ 6 ವಿಕೆಟ್

ಪ್ರವಾಸಿ ಭಾರತ ಹಾಗೂ ಆತಿಥೇಯ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ ಪಂದ್ಯ ಬುಧವಾರ ಆರಂಭವಾಗಿದ್ದು, ಮೊದಲು ಬ್ಯಾಟ್ ಮಾಡಿದ ಲಂಕಾ ಪಡೆ, ಮೊದಲ...
ವಿಕೆಟ್ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ
ವಿಕೆಟ್ ಪಡೆದ ಸಂಭ್ರಮದಲ್ಲಿ ಟೀಂ ಇಂಡಿಯಾ

ಗಾಲೆ: ಪ್ರವಾಸಿ ಭಾರತ ಹಾಗೂ ಆತಿಥೇಯ ಶ್ರೀಲಂಕಾ ನಡುವಿನ ಮೊದಲ ಟೆಸ್ಟ್‌ ಪಂದ್ಯ ಬುಧವಾರ ಆರಂಭವಾಗಿದ್ದು, ಮೊದಲು ಬ್ಯಾಟ್ ಮಾಡಿದ ಲಂಕಾ ಪಡೆ, ಮೊದಲ ಇನ್ನಿಂಗ್ಸ್‌ನಲ್ಲಿ 183ಕ್ಕೆ ಆಲ್ ಔಟ್ ಆಗುವ ಮೂಲಕ ಸರ್ವ ಪತನ ಕಂಡಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ಗೆ ಇಳಿದ ಶ್ರೀಲಂಕಾ 49.4 ಓವರ್‌ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಬೌಲಿಂಗ್‌ ದಾಳಿಯಲ್ಲಿ ಸ್ಪಿನ್ನರ್‌ ಅಶ್ವಿ‌ನ್‌ 6 ವಿಕೆಟ್‌ ಪಡೆದು ಮಿಂಚಿದರೆ. ಅಮಿತ್‌ ಮಿಶ್ರಾ 2, ಇಶಾಂತ್‌ ಮತ್ತು ವರುಣ್‌ ಅರೋನ್‌ ತಲಾ 1 ವಿಕೆಟ್‌ ಪಡೆದರು.

ಭಾರತದ ಬೌಲಿಂಗ್‌ ದಾಳಿಗೆ ಬೆದರಿದ ಲಂಕಾ 15 ರನ್‌ಗೆ ಮೊದಲ ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತು. ಅಘಾತದಿಂದ ಹೊರಬರಲು ಸಾಧ್ಯವಾಗದೆ 60 ರನ್‌ ಆಗುವಷ್ಟರಲ್ಲಿ 5 ವಿಕೆಟ್‌ ಕಳೆದುಕೊಂಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕಿತು.  ಈ ವೇಳೆ ನಾಯಕ ಏಂಜೆಲೊ ಮ್ಯಾಥ್ಯೂಸ್‌  ಅರ್ಧ ಶತಕ ಸಿಡಿಸಿ ತಂಡಕ್ಕೆ ನೆರವಾದರು. ಆದರೆ ಅವರು 64ಕ್ಕೆ ಆಟ ಮುಗಿಸಿದರು.  ದಿನೇಶ್‌ ಚಂಡಿಮಾಲ್‌ 59 ರನ್‌ ಸಿಡಿಸಿ ತಂಡ 150 ರ ಗಡಿ ದಾಟಲು ನೆರವಾದರು. ಹೆರಾತ್‌ 23 ರನ್‌ ,ತಿರಿಮನ್ನೆ 13 ರನ್‌ ಹೊರತು ಪಡಿಸಿ ಉಳಿದ್ಯಾವ ಆಟಗಾರರು ಒಂದಂಕಿ ದಾಟಲಿಲ್ಲ.

ಆರಂಭಿಕ ಕರುಣ ರತ್ನೆ 9, ಜೆಕೆ ಸಿಲ್ವಾ 5,ಸಂಗಕ್ಕರ 5 ,ಮುಬಾರಕ್‌ 0, ಧಮ್ಮಿಕ ಪ್ರಸಾದ್‌ 0, ಕೌಶಲ್‌ 0 ಮತ್ತು ಪ್ರದೀಪ್‌ ಔಟಾಗದೆ ಉಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com