

ದುಬೈ: ಟೀಂ ಇಂಡಿಯಾ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹಾಗೂ ನಾಯಕ ವಿರಾಟ್ ಕೊಹ್ಲಿ ಭಾನುವಾರ ಪ್ರಕಟಗೊಂಡ ಐಸಿಸಿ ನೂತನ ರ್ಯಾಂಕಿಂಗ್ ಪಟ್ಟಿಯ ಬೌಲಿಂಗ್ ಹಾಗೂ ಬ್ಯಾಟಿಂಗ್ ವಿಭಾಗದಲ್ಲಿ ಅಗ್ರ ಹತ್ತು ಮಂದಿ ಬೌಲರ್‍ಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಅಶ್ವಿನ್ 9ನೇ (734 ಅಂಕ) ಹಾಗೂ ಬ್ಯಾಟ್ಸ್‍ಮನ್ ಗಳ ಪಟ್ಟಿಯಲ್ಲಿ ಕೊಹ್ಲಿ 10ನೇ ಸ್ಥಾನ (759)ದಲ್ಲಿದ್ದಾರೆ. ಇನ್ನು, ಆರಂಭಿಕ ಶಿಖರ್ ಧವನ್ ಈ ಹಿಂದಿನ ಪಟ್ಟಿಯಲ್ಲಿದ್ದ ಸ್ಥಾನಕ್ಕಿಂತ 15 ಸ್ಥಾನಗಳ ಏರಿಕೆ ಕಂಡಿದ್ದು ಹೊಸ ಪಟ್ಟಿಯಲ್ಲಿ 32ನೇ ಸ್ಥಾನ (593) ಪಡೆದಿದ್ದಾರೆ.
ಶನಿವಾರ ಮುಕ್ತಾಯವಾದ ಶ್ರೀಲಂಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅಶ್ವಿನ್ ಎರಡೂ ಇನ್ನಿಂಗ್ಸ್‍ಗಳಿಂದ 10 ವಿಕೆಟ್ ಪಡೆದರೆ, ಕೊಹ್ಲಿ ಹಾಗೂ ಧವನ್ ಶತಕ ಸಿಡಿಸಿದ್ದರು.