

ಚೆನ್ನೈ: ಐಪಿಎಲ್ ಬೆಟ್ಟಿಂಗ್ ಹಾಗೂ ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ ನ್ಯಾ.ಲೋಧಾ ಸಮಿತಿ ನೀಡಿರುವ 2 ವರ್ಷಗಳ ಅಮಾನತ್ತಿನ ಶಿಕ್ಷೆ ಶಿಫಾರಸ್ಸಿನ ವಿರುದ್ಧವಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದೆ.
ಸಹಜ ನ್ಯಾಯ ಹಾಗೂ ಮುಕ್ತ ವಿಚಾರಣೆಯ ಉಲ್ಲಂಘನೆಯಾಗಿದೆ. ಅಲ್ಲದೆ ತಂಡದಲ್ಲಿ ಇಂಡಿಯಾ ಸಿಮೆಂಟ್ಸ್ ತಂಡದ ಮಾಲೀಕತ್ವದ ಬಗ್ಗೆಯೂ ಸರಿಯಾದ ತನಿಖೆ ನಡೆದಿಲ್ಲ ಎಂಬ ಅಂಶಗಳ ಆಧಾರದ ಮೇಲೆ ಸಿಎಸ್ಕೆ ಮೇಲ್ಮನವಿ ಸಲ್ಲಿಸಿದೆ.
ಲೋಧಾ ಸಮಿತಿ ನೀಡಿರುವ ಶಿಫಾರಸ್ಸಿಗೆ ತಡೆಯಾಜ್ಞೆ ಕೋರಲಾಗಿದೆ.ಮದ್ರಾಸ್ ಹೈಕೋರ್ಟ್ ಈ ಅರ್ಜಿಯನ್ನು ಮುಂದಿನ ದಿನಗಳಲ್ಲಿ ವಿಚಾರಣೆ ನಡೆಸಲಿದೆ. ಸಿಎಸ್ಕೆ ತನ್ನ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿಕೊಳ್ಳುವ ಪ್ರಯತ್ನದಲ್ಲಿದೆ.