ಭಾರತದ ಪದಕ ಬೇಟೆ ಇಂದಿನಿಂದ

ಶನಿವಾರ ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಶುರುವಾಗಿರುವ 15ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿನ...
ವಿಕಾಸ್ ಗೌಡ
ವಿಕಾಸ್ ಗೌಡ

ಬೀಜಿಂಗ್: ಶನಿವಾರ ಚೀನಾ ರಾಜಧಾನಿ ಬೀಜಿಂಗ್ ನಲ್ಲಿ ಶುರುವಾಗಿರುವ 15ನೇ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿನ ಭಾರತದ ಪದಕದ ಅಭಿಯಾನ ಭಾನುವಾರದಿಂದ ಆರಂಭವಾಗಲಿದೆ.

ಇಲ್ಲಿನ ಬರ್ಡ್ಸ್ ನೆಸ್ಟ್ ಕ್ರೀಡಾಂಗಣದಲ್ಲಿ ಆಗಸ್ಟ್ 30ರವರೆಗೆ ನಡೆಯಲಿರುವ ಕ್ರೀಡಾಕೂಟದಲ್ಲಿ ಏಷ್ಯನ್ ಅಥ್ಲೆಟಿಕ್ಸ್‍ನಲ್ಲಿ ಚಿನ್ನದ ಪದಕ ಗೆದ್ದಿರುವ ಇಂದರ್ಜೀತ್ ಸಿಂಗ್ ಹಾಗೂ 2014ರ ಇಂಚಾನ್ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ವಿಜೇತಕರ್ನಾಟಕದ ಡಿಸ್ಕಸ್ ಎಸೆತಗಾರ ವಿಕಾಸ್ ಗೌಡ, ಮಹಿಳಾ ಸ್ಪ್ರಿಂಟರ್ ಪೂವಮ್ಮ ಅವರುಳ್ಳ 17 ಜನರ ಭಾರತೀಯ ಅಥ್ಲೀಟ್‍ಗಳ ತಂಡ ಭಾಗವಹಿಸುತ್ತಿದೆ.

32 ವರ್ಷಗಳ ವಿಶ್ವ ಅಥ್ಲೆಟಿಕ್ ಚರಿತ್ರೆಯಲ್ಲಿ ಈ ಹಿಂದೆ ಪ್ಯಾರಿಸ್‍ನಲ್ಲಿ ನಡೆದಿದ್ದ 2003ರ ಆವೃತ್ತಿಯಲ್ಲಿ ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದ ಅಥ್ಲೀಟ್ ಅಂಜು ಬಾಬ್ಬಿ ಜಾರ್ಜ್ ಬಳಿಕ ಮತ್ತೆ ಭಾರತ ಈ ಪ್ರತಿಷ್ಠಿತ ಕೂಟದಲ್ಲಿ ಪದಕ ಗೆದ್ದಿಲ್ಲ. 2005ರ ಆವೃತ್ತಿಯಲ್ಲಿ ಅಂಜು 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದರು. 2011, 13ರಲ್ಲಿ ವಿಕಾಸ್ ಗೌಡ ಏಳನೇ ಸ್ಥಾನ ಗಳಿಸಿ ಪದಕ ಪಡೆಯದೆ ನಿರಾಸೆ ಅನುಭವಿಸಿದ್ದರು.

1983ರಲ್ಲಿ ಶುರುವಾಶದ ಈ ವಿಶ್ವ ಅಥ್ಲೆಟಿಕ್ ಚಾಂಪಿಯನ್‍ಶಿಪ್‍ನಲ್ಲಿ ಫೈನಲ್ ತಲುಪಿದ ಇಬ್ಬರು ಭಾರತೀಯರೆಂದರೆ ಅದು ಅಂಜು ಮತ್ತು ವಿಕಾಸ್ ಮಾತ್ರವೇ. ಟ್ರೋಫಿ ವಿಶ್ವಕಪ್ ಬಳಿಕ ವಿಶ್ವದ ಎರಡನೇ ಅತಿ ಬೃಹತ್ ಕ್ರೀಡಾಕೂಟವೆನಿಸಿರುವ ಈ ವಿಶ್ವ ಅಥ್ಲೆಟಿಕ್ಸನಲ್ಲಿ ಭಾರತದ ಅಥ್ಲೀಟ್‍ಗಳು ಈ ಬಾರಿ ಯಾವ ಪರಿಯಲ್ಲಿ ಮಿಂಚು ಹರಿಸಲಿದ್ದಾರೆ ಎಂಬುದನ್ನು ಕಾದುನೋಡಬೇಕಿದೆ.

800 ಮೀ. ರೇಸ್‍ನಲ್ಲಿ ಟಿಂಟು ಲೂಕಾ, ಅನು ರಾಘವನ್, ಎಂ.ಆರ್. ಪೂವಮ್ಮ, ದೇಬಶ್ರೀ ಮಜುಂದಾರ್ ಹಾಗೂ ಜಿಸ್ನಾ ಮಾ್ಯಥ್ಯೂ ರಿಲೇ ತಂಡದ ಮೇಲೆ ಹೆಚ್ಚಿನ ಭರವಸೆಯಿದೆ. ಇದಲ್ಲದೆ, ಮಧ್ಯಂತರ, ದೀರ್ಘ ಓಟದ ಸ್ಪರ್ಧೆ ವಿಭಾಗದಲ್ಲಿ ಸ್ಪರ್ಧಿಸುತ್ತಿರುವ ಒ.ಪಿ. ಜೈಶಾ, ಸುಧಾ ಸಿಂಗ್ (ಇಬ್ಬರೂ ಮಾ್ಯರಥಾನ್) ಹಾಗೂ ಲಲಿತಾ ಬಾಬರ್ (3 ಸಾವಿರ ಮೀ. ಸ್ಟೀಪಲ್ ಚೇಸ್, ಮಾ್ಯರಥಾನ್) ಮೇಲೆ ಪದಕದ ನಿರೀಕ್ಷೆ ಹುಟ್ಟಿಸಿದ್ದಾರೆ. ಥಾಯ್ ಲ್ಯಾಂಡ್ ನಲ್ಲಿ ಇತ್ತೀಚೆಗೆ ನಡೆದಿದ್ದ ಏಷ್ಯನ್ ಜಿಪಿಯಲ್ಲಿ ಗಾಯಗೊಂಡಿದ್ದ ಜಾವಲಿನ್ ಎಸೆತಗಾರ ರಾಜಿಂದರ್ ಸಿಂಗ್ ಇಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com