ಮುಂದುವರಿದ ಇಂಡೋ ಪಾಕ್ ಕ್ರಿಕೆಟ್ ಅನಿಶ್ಚಿತತೆ

ಕ್ರಿಕೆಟ್ ಪ್ರಿಯರು ಕಾತುರದಿಂದ ನಿರೀಕ್ಷಿಸುತ್ತಿದ್ದ ಈ ವರ್ಷದ ಭಾರತ- ಪಾಕಿಸ್ತಾನ ಕ್ರಿಕೆಟ್ ಸರಣಿಯು ರದ್ದಾಗುವ ಸಾಧ್ಯತೆಗಳಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)

ನವದಹೆಲಿ: ಕ್ರಿಕೆಟ್ ಪ್ರಿಯರು ಕಾತುರದಿಂದ ನಿರೀಕ್ಷಿಸುತ್ತಿದ್ದ ಈ ವರ್ಷದ ಭಾರತ- ಪಾಕಿಸ್ತಾನ ಕ್ರಿಕೆಟ್ ಸರಣಿಯು ರದ್ದಾಗುವ ಸಾಧ್ಯತೆಗಳಿವೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ನೆರೆಯ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಸರಣಿ ನಡೆಸಲು ಅನುಮತಿ ಕೋರಿದ್ದ ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಗೆ ಈ ಬಗ್ಗೆ ಕೇಂದ್ರ ಪರೋಕ್ಷ ಸೂಚನೆ ನೀಡಿದ್ದು, ಈ ಮೂಲಕ ಉಭಯ ದೇಶಗಳ ಸರಣಿ ನಡೆಯುವ ನಿರೀಕ್ಷೆ ಇತ್ತು.

ಏನಿದು ಪರೋಕ್ಷ ಸೂಚನೆ?: ಹೆಸರನ್ನೇಳಲು ಇಚ್ಛಿಸದ ಬಿಸಿಸಿಐನ ಅಧಿಕಾರಿಯೊಬ್ಬರು ಹಿಂದೂಸ್ತಾನ್ ಟೈಮ್ಸ್ ಗೆ ನೀಡಿದ ಮಾಹಿತಿಯಂತೆ ``ಉದ್ದೇಶಿತ ಸರಣಿಗೆ ಇನ್ನು ಕೆಲವೇ ದಿನಗಳು ಬಾಕಿಯಿದ್ದರೂ ಕೇಂದ್ರ ಸರ್ಕಾರ ಇನ್ನೂ ಈ ಕುರಿತು ಮೀನಾಮೇಷ ಎಣಿಸುತ್ತಿರುವುದು ಸರ್ಕಾರಕ್ಕಿರುವ ಅನಾಸಕ್ತಿಯನ್ನು ತೋರುತ್ತದೆ.

ಪ್ರತಿಷ್ಠಿತ ಹಾಗೂ ಅಂತಾರಾಷ್ಟ್ರೀಯ ಸರಣಿಯನ್ನು ಆಯೋಜಿಸಬೇಕೆಂದಾದಲ್ಲಿ, ಈಗಾಗಲೇ ಕೇಂದ್ರ ತನ್ನ ಅನುಮತಿ ನೀಡುತ್ತಿತ್ತು'' ಎಂದಿದ್ದಾರೆ. ಇನ್ನು ಈ ಬಗ್ಗೆ ವಿದೇಶಾಂಗ ಸಚಿವಾಲಯವನ್ನು ಸಂಪರ್ಕಿಸಿದಾಗ, `ದ್ವಿಪಕ್ಷೀಯ ಸರಣಿಯ ಪ್ರಸ್ತಾವನೆ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ' ಎಂಬ ಉತ್ತರ ಬಂದಿದ್ದು, ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಸಹ ಇದೇ ಮಾತುಗಳನ್ನು ಪ್ರತಿಧ್ವನಿಸಿರುವುದು ಇಂಡೋ-ಪಾಕ್ ಕ್ರಿಕೆಟ್‍ನ ಅನಿಶ್ಚಿತತೆಯನ್ನು ಮುಂದುವರೆಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com