25ರಿಂದ ಜ.5ರವರೆಗೆ ಇಂಡೋ-ಪಾಕ್ ಸರಣಿ

ಭಾರತ ಮತ್ತು ಪಾಕಿಸ್ತಾನ ನಡುವಣದ ಬಹು ಚರ್ಚಿತ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಬಹುತೇಕ ಈ ತಿಂಗಳಾಂತ್ಯಕ್ಕೆ ಶುರುವಾಗುವ ಸಾಧ್ಯತೆಗಳಿವೆ ಎಂದು ಪಿಟಿಐ ವರದಿ ಮಾಡಿದೆ...
ಭಾರತ ಮತ್ತು ಪಾಕಿಸ್ತಾನ ನಡುವಿನ ಸರಣಿ (ಸಂಗ್ರಹ ಚಿತ್ರ)
ಭಾರತ ಮತ್ತು ಪಾಕಿಸ್ತಾನ ನಡುವಿನ ಸರಣಿ (ಸಂಗ್ರಹ ಚಿತ್ರ)

ಕರಾಚಿ: ಭಾರತ ಮತ್ತು ಪಾಕಿಸ್ತಾನ ನಡುವಣದ ಬಹು ಚರ್ಚಿತ ದ್ವಿಪಕ್ಷೀಯ ಕ್ರಿಕೆಟ್ ಸರಣಿಯು ಬಹುತೇಕ ಈ ತಿಂಗಳಾಂತ್ಯಕ್ಕೆ ಶುರುವಾಗುವ ಸಾಧ್ಯತೆಗಳಿವೆ ಎಂದು ಪಿಟಿಐ ವರದಿ ಮಾಡಿದೆ.

ಉದ್ದೇಶಿತ ಈ ಚುಟುಕು ಸರಣಿಯು ಡಿಸೆಂಬರ್ 24ರಿಂದ ಜನವರಿ 5ರವರೆಗೆ ನಡೆಯುವ ಸಂಭವವಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಮೂಲಗಳು ತಿಳಿಸಿವೆ ಎಂದು  ಹೇಳಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಣದ ಸರಣಿಯು ಈ ಮೊದಲು ನಿರ್ಧರಿಸಲ್ಪಟ್ಟಂತೆ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಜರುಗಲಿದೆ ಎಂದು ತಿಳಿದುಬಂದಿದೆ. ಉಭಯರ ನಡುವೆ  ಮೂರು ಏಕದಿನ ಹಾಗೂ ಎರಡು ಟಿ20 ಪಂದ್ಯಗಳು ಜರುಗಲಿದ್ದು, ಈ ಸರಣಿಯು ಮುಕ್ತಾಯವಾಗುತ್ತಿದ್ದಂತೆಯೇ ಭಾರತ ಮತ್ತು ಪಾಕಿಸ್ತಾನ ಕೊಲಂಬೊದಿಂದಲೇ ವಿದೇಶಕ್ಕೆ ಪ್ರಯಾಣ  ಬೆಳೆಸಲಿವೆ ಎಂದು ಕೂಡ ವರದಿಯಾಗಿದೆ.

ಅಂದಹಾಗೆ ಭಾರತ ಕಾಂಗರೂಗಳ ವಿರುದ್ಧದ ಸೀಮಿತ ಓವರ್‍ಗಳ ಸರಣಿಗಾಗಿ ಆಸ್ಟ್ರೇಲಿಯಾಗೆ ತೆರಳಿದರೆ, ಪಾಕಿಸ್ತಾನ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ. ಪಾಕಿಸ್ತಾನ ವಿರುದ್ಧದ  ಸರಣಿಗೂ ಮುನ್ನ ಭಾರತ ತಂಡಕ್ಕೆ 10ರಿಂದ 12 ದಿನಗಳ ವಿಶ್ರಾಂತಿ ನೀಡಬೇಕೆಂದು ಬಿಸಿಸಿಐ ಬಯಸಿದೆ ಎಂದೂ ಕೂಡ ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com