ಅಮಾನತ್ತಿನಲ್ಲಿದ್ದರೂ ಶುಲ್ಕ ಪಾವತಿ!

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್ ಆರ್) ತಂಡಗಳು, ಮುಂದಿನ ಎರಡು ವರ್ಷಗಳವರೆಗೆ...
ಸಿಎಸ್ ಕೆ ಮತ್ತು ಆರ್ ಆರ್ ತಂಡಗಳು (ಸಂಗ್ರಹ ಚಿತ್ರ)
ಸಿಎಸ್ ಕೆ ಮತ್ತು ಆರ್ ಆರ್ ತಂಡಗಳು (ಸಂಗ್ರಹ ಚಿತ್ರ)

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಿಂದ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‍ಕೆ) ಹಾಗೂ ರಾಜಸ್ಥಾನ ರಾಯಲ್ಸ್ (ಆರ್ ಆರ್) ತಂಡಗಳು, ಮುಂದಿನ ಎರಡು ವರ್ಷಗಳವರೆಗೆ ಅಮಾನತುಗೊಂಡಿದ್ದರೂ, ಆ ಟೂರ್ನಿಗಳಿಗೆ ಸಹಭಾಗಿತ್ವ ಶುಲ್ಕವನ್ನು ನೀಡಬೇಕಿದೆ ಎಂದು ಐಬಿಎನ್ ಲೈವ್ ವರದಿ ಮಾಡಿದೆ.

2016 ಹಾಗೂ 2017ರ ಐಪಿಎಲ್ ಟೂರ್ನಿ ಗಳಿಗೆ ಈ ಎರಡೂ ತಂಡಗಳು ಕ್ರಮವಾಗಿ ರು. 72 ಕೋಟಿ, ರು. 56 ಕೋಟಿ ಕಟ್ಟಬೇಕಿದೆ. 2008ರಲ್ಲಿ ಈ ತಂಡಗಳ ಫ್ರಾಂಚೈಸಿಗಳನ್ನು ಕೊಳ್ಳಲು ಸಂಬಂಧಪಟ್ಟ ಮಾಲೀಕರು ಡಾಲರ್ ಮೊತ್ತದಲ್ಲಿ ನೀಡಿದ ಹಣದ 10ನೇ ಒಂದು ಭಾಗವನ್ನು ಈ ತಂಡಗಳು 2018ರವರೆಗೂ ಸಹಭಾಗಿತ್ವ ಶುಲ್ಕದ ರೂಪದಲ್ಲಿ ಬಿಸಿಸಿಐಗೆ ಕಡ್ಡಾಯವಾಗಿ ಪಾವತಿಸಲೇಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com