

ಹೋಬರ್ಟ್: ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾದ ಆ್ಯಡಮ್ಸ್ ವೊಗ್ಸ್ (ಅಜೇಯ 174) ಮತ್ತು ಶಾನ್ ಮಾರ್ಷ್ (ಅಜೇಯ 139) ಮುರಿಯದ 4ನೇ ವಿಕೆಟ್‍ಗೆ ಪೇರಿಸಿದ 317 ರನ್‍ಗಳ ದಾಖಲೆಯ ಭರ್ಜರಿ ಜತೆಯಾಟದಿಂದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ಗುರುವಾರ ಬೆಲ್ಲೇರಿವ್ ಓವಲ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ಮೊದಲ ದಿನ ಟಾಸ್ ಗೆದ್ದ ಆತಿಥೇಯ ಆಸ್ಟ್ರೇಲಿಯಾ, ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ನಂತರ 89 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 438 ರನ್‍ಗಳನ್ನು ಪೇರಿಸಿತು. ಆಸ್ಟ್ರೇಲಿಯಾ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಜೋ ಬರ್ನ್ಸ್ (33) ಮತ್ತು ಡೇವಿಡ್ ವಾರ್ನರ್ (64) ತಂಡಕ್ಕೆ 75 ರನ್‍ಗಳ ಉತ್ತಮ ಆರಂಭ ನೀಡಿದರು. ನಂತರ ಸ್ಟೀವನ್ ಸ್ಮಿತ್ (10) ಬೇಗನೆ ವಿಕೆಟ್ ಒಪ್ಪಿಸಿದರು. ಈ ವೇಳೆ ಜತೆಯಾದ ವೊಗ್ಸ್ ಮತ್ತು ಶಾನ್ ಮಾರ್ಷ್ ತಂಡವನ್ನು ಬೃಹತ್ ಮೊತ್ತದತ್ತ ಕೊಂಡೊಯ್ದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 89 ಓವರ್ ಗಳಲ್ಲಿ 3 ವಿಕೆಟ್‍ಗೆ 438 (ಬರ್ನ್ಸ್ ಅಜೇಯ 174, ಮಾರ್ಷ್ 139, ವಾರಿಕನ್ 111ಕ್ಕೆ 2, ಗೆಬ್ರಿಯಲ್ 59ಕ್ಕೆ 1)
Advertisement