
ಗುರ್‍ಗಾಂವ್: ಚೊಚ್ಚಲ ಪ್ರೊ ರೆಸ್ಲಿಂಗ್ ಲೀಗ್ ಪಂದ್ಯಾವಳಿಯಲ್ಲಿ ದೈತ್ಯ ಪ್ರದರ್ಶನವನ್ನು ಮುಂದುವರಿಸಿರುವ ಮುಂಬೈ ಗರುಡಾಸ್ ತಂಡ, ಗುರುವಾರ ನಡೆದ ಪಂದ್ಯದಲ್ಲಿ ಉತ್ತರ ಪ್ರದೇಶ ವಾರಿಯರ್ಸ್ ತಂಡವನ್ನು 5-2 ಅಂಕಗಳ ಅಂತರದಲ್ಲಿ ಮಣಿಸಿತು.
ಮುಂಬೈ ಗೆಲವು: ಎರಡನೇ ಸುತ್ತಿನಲ್ಲಿ (ಮಹಿಳೆಯರ 58 ಕೆಜಿ ವಿಭಾಗ) ಸಾಕ್ಷಿ ಮಲಿಕ್‍ಗೆ ಸಾರಿಕಾ ಕುಮಾರಿ ವಿರುದ್ಧ 3-0 ಅಂತರದ ಜಯ; ಮೂರನೇ ಸುತ್ತಿನಲ್ಲಿ (ಪುರುಷರ 57ನೇ ಕೆಜಿ ವಿಭಾಗ)ಯಲ್ಲಿ ಮುಂಬೈನ ರಾಹುಲ್ ಆವತೆ, ಜೈದೀಪ್ ಕುಮಾರ್ ವಿರುದ್ಧ ಗೆಲವು; ನಾಲ್ಕನೇ ಸುತ್ತಿನಲ್ಲಿ (ಮಹಿಳೆಯರ 53 ಕೆಜಿ) ಮುಂಬೈನ ಒಡುನಫಿಗೆ ಬಬಿತಾ ಕುಮಾರಿ ವಿರುದ್ಧ 10-0 ಅಂತರದ ತಾಂತ್ರಿಕ ಜಯ; 5ನೇ ಸುತ್ತಿನಲ್ಲಿ (ಪುರುಷರ 97 ಕೆಜಿ) ಎಲಿಜ್ದಾರ್‍ಗೆ ಸತ್ಯವಾರ್ತ್ ಕಡಿಯಾನ್ ವಿರುದ್ಧ ಜಯ; ಆರನೇ ಸುತ್ತಿನಲ್ಲಿ (ಮಹಿಳೆಯರ 69 ಕೆಜಿ) ಅಡಿಲಿನ್ ಗ್ರೇ ಅವರಿಗೆ, ಅಲಿನಾ ಸ್ಟಾಡಿನಿಕ್ ವಿರುದ್ಧ 10-0 ಅಂತರದ ತಾಂತ್ರಿಕ ಜಯ.
ಉತ್ತರ ಪ್ರದೇಶದ ಗೆಲವು: ಮೊದಲ ಸುತ್ತಿನಲ್ಲಿ (ಪುರುಷರ 74 ಕೆಜಿ) ಪುರೇವ್ಜಾವ್ ಉನುರ್ಬಾತ್ ಅವರಿಗೆ ಪ್ರದೀಪ್ ವಿರುದ್ಧ 12-1ರ ಜಯ; ಗ್ಯಾನ್ಜೋರಿಕ್ ಅವರಿಗೆ ಅಮಿತ್ ಧಾರ್ಕರ್ ವಿರುದ್ಧ ಗೆಲವು.
ಅಗ್ರಸ್ಥಾನಕ್ಕೆ: ಈ ಜಯದ ಮೂಲಕ ಮುಂಬೈ ತಂಡ, ಈವರೆಗಿನ ಟೂರ್ನಿಯಲ್ಲಿ ಸತತ ಮೂರು ಗೆಲವು ದಾಖಲಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ತನ್ನ ಮೊದಲ ಪಂದ್ಯದಲ್ಲಿ ಮುಂಬೈ ತಂಡ, ಪಂಜಾಬ್ ತಂಡವನ್ನು 5-2ರಿಂದ ಮಣಿಸಿತ್ತು. ದ್ವಿತೀಯ ಪಂದ್ಯದಲ್ಲಿ ಬೆಂಗಳೂರು ಯೋಧಾಸ್ ತಂಡದ ವಿರುದ್ಧ 4-3 ಅಂಕಗಳ ಅಂತರದಲ್ಲಿ ಗೆಲವು ಸಾಧಿಸಿತ್ತು. ಈ ಮುಖಾಮುಖಿಯಲ್ಲಿನ ಸೋಲು ಸೇರಿದಂತೆ, ಉತ್ತರ ಪ್ರದೇಶ ತಂಡವು ಸತತ ಎರಡು ಸೋಲು ಕಂಡಂತಾಗಿದೆ. ಟೂರ್ನಿಯಲ್ಲಿನ ತನ್ನ ಆರಂಭಿಕ ಪಂದ್ಯದಲ್ಲಿ, ಬೆಂಗಳೂರು ಫೀಧಾಸ್ ವಿರುದ್ಧ ಪರಾಭವ ಹೊಂದಿದ್ದ ಉತ್ತರ ಪ್ರದೇಶ, ತನ್ನ ಎರಡನೇ ಪಂದ್ಯದಲ್ಲಿ ದಿಲ್ಲಿ ವೀರ್ಸ್ ವಿರುದ್ಧ ಜಯ ಸಾಧಿಸಿತ್ತು. ಇದೀಗ ಪುನಃ ತನ್ನ ಮೂರನೇ ಪಂದ್ಯದಲ್ಲಿ ಸೋಲು ಕಂಡಿದೆ.
Advertisement