
ಮಂಡ್ಯ: ನಗರದ ಸರ್ ಎಂ.ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಬಾಸ್ಕೆಟ್ ಬಾಲ್ ಪಂದ್ಯಾವಳಿಯ ಬಾಲಕರ ವಿಭಾಗದಲ್ಲಿ ಬೆಂಗಳೂರು ದಕ್ಷಿ ಣ ಮತ್ತು ಬಾಲಕಿಯರ ವಿಭಾಗದಲ್ಲಿ ಮಂಗಳೂರು ತಂಡ ಕ್ರಮವಾಗಿ ಬಾಲಕರ , ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ಗಳಾಗಿ ಹೊರಹೊಮ್ಮಿದವು.
ಬಾಲಕರ ವಿಭಾಗದ ಪ್ರಶಸ್ತಿ ಸುತ್ತಿನಲ್ಲಿ ಧಾರವಾಡ ತಂಡದ ವಿರುದ್ಧ ಸೆಣಸಿದ ಬೆಂಗಳೂರು ದಕ್ಷಿಣ 5845 ಅಂಕಗಳಿಂದ ಜಯಗಳಿಸಿತು. ಬಾಲಕಿಯರ ವಿಭಾಗದ ಫೈನಲ್‍ನಲ್ಲಿ ಬೆಂಗಳೂರು ಉತ್ತರ ವಿರುದ್ಧ ಸೆಣಸಿದ ಮಂಗಳೂರು ತಂಡ 5543 ಅಂಕಗಳಿಂದ ಜಯಗಳಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. 201415ನೇ ಸಾಲಿನಲ್ಲೂ ಪಂದ್ಯಾವಳಿ ಯಲ್ಲಿ ಈ ತಂಡಗಳೇ ಚಾಂಪಿಯನ್‍ಗಳಾಗಿದ್ದವು.
Advertisement