ದಾಖಲೆ ಬರೆದ ವಿಶೇಷ ಚೇತನ

ಮೂರು ತಿಂಗಳ ಹಿಂದೆ ವೆಂಬನಾಡ್ ಕೆರೆಯಲ್ಲಿ ಸುಮಾರು 10 ಕಿ.ಮೀ. ವರೆಗೆ ಸತತವಾಗಿ ಈಜಿದ್ದ ಕೇರಳದ 50 ವರ್ಷದ ಈಜುಗಾರ ಇ.ಡಿ. ಬಾಬುರಾಜ್ ಎಂಬ ವಿಶೇಷ...
ಬಾಬುರಾಜ್
ಬಾಬುರಾಜ್

ಅಲೆಪ್ಪಿ(ಕೇರಳ): ಮೂರು ತಿಂಗಳ ಹಿಂದೆ ವೆಂಬನಾಡ್ ಕೆರೆಯಲ್ಲಿ ಸುಮಾರು 10 ಕಿ.ಮೀ. ವರೆಗೆ ಸತತವಾಗಿ ಈಜಿದ್ದ ಕೇರಳದ 50 ವರ್ಷದ ಈಜುಗಾರ ಇ.ಡಿ. ಬಾಬುರಾಜ್ ಎಂಬ ವಿಶೇಷ ಚೇತನ ವ್ಯಕ್ತಿಯ ಸಾಧನೆ ಈಗ ಯುಆರ್‍ಎಫ್ ಏಷ್ಯನ್ ರೆಕಾರ್ಡ್ಸ್ ಪಟ್ಟಿಗೆ ಸೇರಿದೆ.

ದೈಹಿಕವಾಗಿ ಶೇ. 40ರಷ್ಟು ವೈಕಲ್ಯತೆ ಹೊಂದಿರುವ ಬಾಬುರಾಜ್, ಇದೇ ವರ್ಷ ಆಗಸ್ಟ್ 18ರಂದು ಈ ಸಾಧನೆ ಮಾಡಿದ್ದರು. ಬಡ ಕುಟುಂಬದಿಂದ ಬಂದ ಈ ಈಜು ಪ್ರತಿಭೆ ಇತ್ತೀಚೆಗೆ ರಷ್ಯಾದ ಸೋಚಿಯಲ್ಲಿ ನಡೆದಿದ್ದ ಅಂತಾರಾಷ್ಟ್ರೀಯ ವಿಶೇಷ ಚೇತನರ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದರೂ ರು. 3 ಲಕ್ಷ ಹಣ ಹೊಂದಿಸಲಾರದೇ ಆ ಕ್ರೀಡಾಕೂಟದಿಂದ ಹೊರಗುಳಿದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com