ವಿಜಯ್ ಟ್ರೋಫಿ: ಜಾರ್ಖಂಡ್ ಮಣಿಸಿದ ದೆಹಲಿ ಸೆಮಿಗೆ

ನಿರ್ಣಾಯಕ ಘಟ್ಟದಲ್ಲಿ ಕೇವಲ 16 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್ ಸೇರಿದ ಅಜೇಯ 38 ರನ್ ಪೇರಿಸಿ ತಂಡದ ಮೊತ್ತವನ್ನು ಸ್ಪರ್ಧಾತ್ಮಕವಾಗಿಸಿದ...
ಎಂಎಸ್ ಧೋನಿ ಆಟದ ವೈಖರಿ
ಎಂಎಸ್ ಧೋನಿ ಆಟದ ವೈಖರಿ

ಬೆಂಗಳೂರು: ನಿರ್ಣಾಯಕ ಘಟ್ಟದಲ್ಲಿ ಕೇವಲ 16 ಎಸೆತಗಳಲ್ಲಿ 3 ಬೌಂಡರಿ, 3 ಸಿಕ್ಸರ್  ಸೇರಿದ ಅಜೇಯ 38 ರನ್ ಪೇರಿಸಿ  ತಂಡದ ಮೊತ್ತವನ್ನು ಸ್ಪರ್ಧಾತ್ಮಕವಾಗಿಸಿದ ಪವನ್  ನೇಗಿ ಹಾಗೂ ಸುಬೋಧ್ ಭಾಟಿ (21ಕ್ಕೆ 4) ನಡೆಸಿದ  ಮಿಂಚಿನ ಬೌಲಿಂಗ್ ಧೋನಿಯ  ಅಜೇಯ ಆಟವನ್ನು  ಮಂಕಾಗಿಸಿತಲ್ಲದೆ, ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಯಲ್ಲಿ   ಜಾರ್ಖಂಡ್‍ನ ಹೋರಾಟಕ್ಕೆ ತೆರೆ  ಎಳೆಯಿತು.

ಬುಧವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯ ಎರಡನೇ ಕ್ವಾರ್ಟರ್  ಫೈನಲ್ ಪಂದ್ಯದಲ್ಲಿ ಗೆಲ್ಲಲು ದೆಹಲಿ ನೀಡಿದ್ದ 226 ರನ್‍ಗಳಿಗೆ ಉತ್ತರವಾಗಿ ಜಾರ್ಖಂಡ್ 38  ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್‍ಗಳನ್ನೂ ಕಳೆದುಕೊಂಡು ಕಲೆಹಾಕಿದ್ದು ಕೇವಲ 126  ರನ್‍ಗಳನ್ನು. ಈ ಮೊತ್ತಕ್ಕೆ ಧೋನಿ 70 ರನ್ ಗಳನ್ನು ಕಾಣಿಕೆಯಾಗಿ ನೀಡಿದರೆ, ಕೌಶಲ್ ಸಿಂಗ್  (11), ಅಂಕಿತ್ ದಾಬಸ್ (16) ಬಿಟ್ಟರೆ ಮಿಕ್ಕವರು ಎರಡಂಕಿ ದಾಟಲು  ವಿಫಲವಾದರು.  ಎಲ್ಲಕ್ಕಿಂತ  ಮಿಗಿಲಾಗಿ ಕ್ರೀಸ್‍ಗೆ ಕಚ್ಚಿನಿಂತಿದ್ದ ಧೋನಿಗೆ ಯಾರೊಬ್ಬರೂ ಸಾಥ್ ನೀಡದೆ  ಹೋದದ್ದು ತಂಡದ ದಯನೀಯ ಸೋಲಿಗೆ ಕಾರಣವಾಯಿತು. ಪರಿಣಾಮ ಜಾರ್ಖಂಡ್ 99  ರನ್‍ಗಳಿಂದ ಜಾರ್ಖಂಡ್ ಗೆ ಸೋಲುಣಿಸಿತು.

ಮಧ್ಯಮ ವೇಗಿ ಸುಬೋಧ್ ಜತೆಗೆ ನವದೀಪ್ ಸೈನಿ ಮತ್ತು ಇಶಾಂತ್ ಶರ್ಮಾ ಪ್ರಭಾವಿ  ಳಿ  ಸಂಘಟಿಸಿ ಜಾರ್ಖಂಡ್‍ನ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ದೆಹಲಿ ಸಾಧಾರಣ ಮೊತ್ತ: ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ದೆಹಲಿ 50  ಓವರ್ ಗಳಲ್ಲಿ 225ಕ್ಕೆ  ಆಲೌಟ್ ಆಯಿತು . ನಿತೀಶ್ ರಾಣಾ (44) ಮತ್ತು  ಮನನ್ ಶರ್ಮಾ     (21) 74 ರನ್ ಜತೆಯಾಟವಾಡುವ ಮೂಲಕ ತಂಡದ ಸ್ಥಿತಿಯನ್ನು   ಉತ್ತಮಗೊಳಿಸಿದರು. ಆದರೆ, ದೆಹಲಿ 200 ರನ್‍ಗಳ ಗಡಿ ದಾಟಿದ್ದು ಪವನ್ ನೇಗಿಯ  ಬಿಡುಬೀಸಿನ ಬ್ಯಾಟಿಂಗ್‍ನಿಂದಲೇ. ಬಿರುಸಿನ ಬ್ಯಾಟಿಂಗ್ ನಡೆಸಿದ ಅವರು ತಂಡದ ಮೊತ್ತ  200 ರನ್  ಗಳ ಗಡಿ ದಾಟುವಂತೆ ನೋಡಿಕೊಂಡರು.

ದೆಹಲಿ ಪರ ಎಡಗೈ ಮಧ್ಯಮ ವೇಗಿ ರಾಹುಲ್ ಶುಕ್ಲಾ 3 ವಿಕೆಟ್ ಪಡೆದರೆ, ವರುಣ್ ಏರಾನ್  ಗೂ ಎ.ಎಂ. ದಾಬಸ್ ತಲಾ 2 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್: ದೆಹಲಿ: 50 ಓವರ್‍ಗಳಲ್ಲಿ 225ಕ್ಕೆ ಆಲೌಟ್ (ನಿತೀಶ್ ರಾಣಾ 44, ಪವನ್  ಗಿ  ಅಜೇಯ 38; ರಾಹುಲ್ ಶುಕ್ಲಾ 60ಕ್ಕೆ 3, ಅಂಕಿತ್ ದಾಬಸ್ 46ಕ್ಕೆ 2)    ಜಾರ್ಖಂಡ್: 38 ಓವರ್‍ಗಳಲ್ಲಿ 126 (ಧೋನಿ ಅಜೇಯ 70; ಸುಬೋಧ್ ಭಾಟಿ 21ಕ್ಕೆ  4,  ಸೈನಿ 31ಕ್ಕೆ 3, ಇಶಾಂತ್ ಶರ್ಮಾ 21ಕ್ಕೆ 2)  ಫಲಿತಾಂಶ: ದೆಹಲಿ ತಂಡಕ್ಕೆ 99 ರನ್ ಗೆಲುವು  ಪಂದ್ಯಶ್ರೇಷ್ಠ: ಪವನ್ ನೇಗಿ  

ಹಿಮಾಚಲ ಪ್ರದೇಶ ದಾಖಲೆ:
ಇನ್ನು ಆಲೂರಿನ ಕೆಎಸ್‍ಸಿಎ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಕ್ವಾರ್ಟರ್ ಫೈನಲ್‍ನಲ್ಲಿ ಪಂಜಾಬ್ ತಂಡವನ್ನು 5 ವಿಕೆಟ್‍ಗಳಿಂದ ಮಣಿಸಿದ   ಹಿಮಾಚಲ ಪ್ರದೇಶ ಅಂತಿಮ ನಾಲ್ಕರ ಘಟ್ಟಕ್ಕೆ ಅರ್ಹತೆ ಪಡೆಯಿತು.  ಮೊದಲ ಬಾರಿಗೆ  ಉಪಾಂತ್ಯ ಪ್ರವೇಶಿಸಿ ದಾಖಲೆ ಬರೆಯಿತು. ಗೆಲ್ಲಲು 264 ರನ್ ಗುರಿ ಪಡೆದಿದ್ದ  ಹಿ.ಪ್ರದೇಶ, ರಾಬಿನ್ ಬಿಸ್ತ್ (109) ಅವರ ಅಜೇಯ ಶತಕದ ನೆರವಿನೊಂದಿಗೆ 49.2 ಓವರ್‍ಗಳಲ್ಲಿ 5  ವಿಕೆಟ್ ಗೆ 266 ರನ್ ಮಾಡಿ ಜಯ ಪಡೆಯಿತು. ರಾಬಿನ್ ಬಿಸ್ತ್ ಪಂದ್ಯಶ್ರೇಷ್ಠರೆನಿಸಿದರು.   

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com