

ಬೆಂಗಳೂರು: ನ್ಯೂಜಿಲೆಂಡ್‌ನಲ್ಲಿ ನಡೆದ ಪ್ರತಿಷ್ಠಿತ ಡೆನ್ನಿ ಹಲ್ಮೆಟ್ರೋಫಿಯಲ್ಲಿ ಕರ್ನಾಟಕದ ಮತ್ತೊಬ್ಬ ಪ್ರತಿಭೆ ಅರ್ಜುನ್ ಮೈನಿ ಚಾಂಪಿಯನ್ ಆಗುವ ಮೂಲಕ ಹೊಸ ಇತಿಹಾಸ ಬರೆದಿದ್ದಾರೆ.
ಭಾನುವಾರ ನ್ಯೂಜಿಲೆಂಡ್‌ನ ಟೊಪೊ ಮೋಟಾರ್ ಪಾರ್ಕ್‌ನಲ್ಲಿ ನಡೆದ ಟೊಯೊಟಾ ರೇಸಿಂಗ್ ಸೀರೀಸ್‌ನಲ್ಲಿ ಫ್ರೆಂಚ್‌ನ ರೇಸರ್ ಬ್ರೆಂಡನ್ ಮೈಸಾನೋ ವಿರುದ್ಧ ಉತ್ತಮ ಪ್ರದರ್ಶನ ನೀಡಿದ ಅರ್ಜುನ್, ಚಾಂಪಿಯನ್ ಪಟ್ಟ ಅಲಂಕರಿಸಿದರು. ಅಲ್ಲದೆ, ಈ ಸಾಧನೆ ಮಾಡಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೂ ಭಾಜನರಾದರು.
ಪೋಡಿಯಂ ಫಿನಿಷ್: ರಾಜ್ಯದ ಭರವಸೆಯ ಯುವ ಕಾರ್ಟಿಂಗ್ ರೇಸರ್ ಖುಷ್ ಮೈನಿ ಚಾಂಪಿಯನ್ಸ್ ಕಪ್ ವಿಶ್ವ ಕಾರ್ಟಿಂಗ್ ಸೀರೀಸ್‌ನ 2ನೇ ಸುತ್ತಿನಲ್ಲಿ ಎರಡನೇ ಸ್ಥಾನ ಪಡೆದು ಪೋಡಿಯಂ ಫಿನಿಷ್ ಪಡೆದಿದ್ದಾರೆ. ಭಾನುವಾರ ಲಾ ಕೊನಾಕ್ ಕಾರ್ಟ್‌ಟ್ರ್ಯಾಕ್‌ನಲ್ಲಿ ನಡೆದ ಎರಡನೇ ಸುತ್ತಿನ ರೇಸ್‌ನಲ್ಲಿ 14 ವರ್ಷದ ಖುಷ್ ಅತ್ಯುತ್ತಮ ಪ್ರದರ್ಶನ ತೋರಿದರು. ಈ ಮೂಲಕ ಮೊದಲ ಸುತ್ತಿನಲ್ಲಿ ಪೋಡಿಯಂ ಫಿನಿಷ್ ಪಡೆಯುವಲ್ಲಿ ವಿಫಲವಾಗಿದ್ದ ಖುಷ್, 2ನೇ ಸುತ್ತಿನಲ್ಲಿ ಯಶಸ್ವಿಯಾಗಿದ್ದಾರೆ.