ಬಾಂಗ್ಲಾ-ಆಸಿಸ್ ಕದನಕ್ಕೆ ಮಳೆ ಅಡ್ಡಿ

ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿರುವ ಆತಿಥೇಯ ಆಸ್ಟ್ರೇಲಿಯಾಗೆ ಸಡ್ಡು ಹೊಡೆಯಲು ಬಾಂಗ್ಲಾದೇಶ ತಯಾರಿ ನಡೆಸಿದ್ದು, ಪಂದ್ಯಕ್ಕೆ ಮಳೆರಾಯ ಅಡ್ಡಿಯನ್ನು ತದ್ದೊಡ್ಡಿದ್ದಾನೆ...
ಬಾಂಗ್ಲಾ-ಆಸಿಸ್ ಕದನಕ್ಕೆ ಮಳೆ ಅಡ್ಡಿ
ಬಾಂಗ್ಲಾ-ಆಸಿಸ್ ಕದನಕ್ಕೆ ಮಳೆ ಅಡ್ಡಿ

ಬ್ರಿಸ್ಬೇನ್: ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡವಾಗಿರುವ ಆತಿಥೇಯ ಆಸ್ಟ್ರೇಲಿಯಾಗೆ ಸಡ್ಡು ಹೊಡೆಯಲು ಬಾಂಗ್ಲಾದೇಶ ತಯಾರಿ ನಡೆಸಿದ್ದು, ಪಂದ್ಯಕ್ಕೆ ಮಳೆರಾಯ ಅಡ್ಡಿಯನ್ನು ತದ್ದೊಡ್ಡಿದ್ದಾನೆ.

ಶನಿವಾರ ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾಗಬೇಕಿದ್ದ ಆಟ ಮಳೆಯಿಂದಾಗಿ ತಡವಾಗಿ ಆರಂಭವಾಗಲಿದೆ. ಈ ಮೊದಲು ಆಸ್ಟ್ರೇಲಿಯಾ ತಂಡದ ನಾಯಕ ಮೈಕೆಲ್ ಕ್ಲಾರ್ಕ್ ಗಾಯದ ಸಮಸ್ಯೆಯಿಂದಾಗಿ ಮೊದಲ ಪಂದ್ಯದಿಂದ ಹೊರಗುಳಿದಿದ್ದರು. ಆದರೆ ಬಾಂಗ್ಲಾದೇಶದ ವಿರುದ್ಧ ವಿಶ್ವಕಪ್ ಆಟವನ್ನು ಆಡಲು ಕ್ಲಾರ್ಕ್ ಸಾಕಷ್ಟು ತಯಾರಿ ನಡೆಸಿದ್ದರು. ಆದರೆ ಮಳೆರಾಯನ ಆರ್ಭಟ ಹೆಚ್ಚಾಗಿದ್ದು, ಸ್ಟೇಡಿಯಂನಾದ್ಯಂತ ನೀರು ತುಂಬಿದೆ. ಪಂದ್ಯ ರದ್ದಾಗುವುದರಲ್ಲಿ ಸಂಶಯವಿಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶದ ಎರಡೂ ತಂಡಗಳ ಮಧ್ಯೆ ಟಾಸ್ ಪ್ರಕ್ರಿಯೆ ನಡೆಯುವುದಕ್ಕೂ ಮೊದಲೇ ಮಳೆ ಅಡ್ಡಿಯಾಗಿದೆ. ಒಂದು ವೇಳೆ ಪಂದ್ಯ ರದ್ದಾದರೆ ಎರಡು ತಂಡಗಳಿಗೂ ಯಾವುದೇ ಫಲಿತಾಂಶ ಲಭಿಸುವುದಿಲ್ಲ. ಎರಡೂ ತಂಡಗಳಿಗೂ ಒಂದೊಂದು ಅಂಕವನ್ನು ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

ಶನಿವಾರ ನಡೆಯಲಿರುವ ಎ ಗುಂಪಿನ ಪಂದ್ಯದಲ್ಲಿ ಉಭಯ ತಂಡಗಳು ಸೆಣಸಾಟ ನಡೆಸಲು ಮುಂದಾಗಿತ್ತು. ಆಸ್ಟ್ರೇಲಿಯಾ ತಂಡ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಸುಲಭ ಗೆಲವು ದಾಖಲಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿತ್ತು. ಇತ್ತ ಬಾಂಗ್ಲಾದೇಶ ತಂಡ ಇದೇ ಮೊದಲ ಬಾರಿಗೆ ವಿಶ್ವಕಪ್ ಕಣದಲ್ಲಿ ನಿಂತಿರುವ ಅಪ್ಘಾನಿಸ್ತಾನ ವಿರುದ್ಧ ನಿಚ್ಚಳ ಜಯ ಸಂಪಾದಿಸಿತ್ತು. ಉಭಯ ತಂಡಗಳು ಟೂರ್ನಿಯಲ್ಲಿ ಶುಭಾರಂಭ ಮಾಡಿ ಮತ್ತೊಂದು ಪಂದ್ಯದಲ್ಲಿ ಸೆಣಸುವ ಆತ್ಮ ವಿಶ್ವಾಸದಲ್ಲಿದ್ದವು.

ಆಸ್ಟ್ರೇಲಿಯಾದ ಡೇವಿಡ್ ವಾರ್ನರ್, ಎರಾನ್ ಫಿಂಚ್ , ಗ್ಲೆನ್ ಮ್ಯಾಕ್ಸ್ ವೆಲ್‍ರಂತಹ ಸ್ಪೋಟಕ ಬ್ಯಾಟ್ಸ್‍ಮನ್‍ಗಳ ಜತೆಗೆ ಸ್ಟೀವನ್ ಸ್ಮಿತ್, ಮಿಚೆಲ್ ಮಾರ್ಷ್‍ರಂತಹ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಅದೇ ರೀತಿ, ಬೌಲಿಂಗ್‍ನಲ್ಲಿ ಮಿಚೆಲ್ ಜಾನ್ಸನ್, ಜೋಶ್ ಹ್ಯಾಜೆಲ್‍ವುಡ್, ಮಿಚೆಲ್ ಸ್ಟಾರ್ಕ್ ವೇಗದ ಅಸ್ತ್ರಗಳಾಗಿದ್ದು, ಮುಖ್ಯವಾಗಿ ನಾಯಕ ಮೈಕೆಲ್ ಕ್ಲಾರ್ಕ್ ಆಗಮನ ಆತಿಥೇಯರಲ್ಲಿ ಹೆಚ್ಚಿನ ಸ್ಪೂರ್ತಿ ತುಂಬಿದಂತಾಗಿತ್ತು.

ಬಾಂಗ್ಲಾ ತಂಡದಲ್ಲಿ ಮುಷ್ಫಿಕರ್ ರಹೀಮ್, ತಮೀಮ್ ಇಕ್ಬಾಲ್, ಅನಾಮುಲ್ ಹಕ್, ಮಹಮದ್ದುಲ್ಲಾ ಪ್ರಮುಖ ಬ್ಯಾಟ್ಸ್‍ಮನ್ಗಳಾಗಿದ್ದಾರೆ. ಬೌಲಿಂಗ್‍ನಲ್ಲಿ ನಾಯಕ ಮಶ್ರಫೆ ಮೊರ್ತಜಾ ಜತೆಗೆ ರುಬೆಲ್ ಹುಸೇನ್, ತಸ್ಕಿನ್ ಅಹ್ಮದ್ ಪ್ರಮುಖ ವೇಗಿಗಳಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಶಕಿಬ್ ಅಲ್ ಹಸನ್ ಆಲ್ರೌಂಡರ್ ಆಗಿ ತಮ್ಮ ಜವಾಬ್ದಾರಿಯನ್ನು ಪರಿಣಾಮಕಾರಿ ನಿಭಾಯಿಸಬಲ್ಲವರಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com