
ಭಾರತ ವಿರುದ್ಧದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನಿಧಾನಗತಿಯ ಓವರ್ ಮಾಡಿದ್ದಕ್ಕೆ ಆ ತಂಡದ ವಿರುದ್ಧ ಕ್ರಮಕೈಗೊಳ್ಳಲಾಗಿದೆ. ಭಾನುವಾರ ಮೆಲ್ಬರ್ನ್‍ನಲ್ಲಿ ಈ ತಂಡಗಳ ನಡುವೆ `ಬಿ' ಗುಂಪಿನ ಪಂದ್ಯ ನಡೆದಿತ್ತು. 50 ಓವರ್‍ಗಳನ್ನು ಮುಗಿಸಲು ನಿಗದಿಪಡಿಸಲಾಗಿದ್ದ ಅವ„ ಮುಗಿದರೂ ಇನ್ನೂ ಒಂದು ಓವರ್ ಬಾಕಿ ಇದ್ದಿದ್ದನ್ನು ಪಂದ್ಯದ ರೆಫರಿ ಜೆಫ್ ಕ್ರೋವ್ ಗಮನಿಸಿದ್ದು, ಈ ಹಿನ್ನೆಲೆ ಯಲ್ಲಿ ಹರಿಣಗಳ ಪಡೆಗೆ ದಂಡ ವಿ„ಸಲಾಗಿದೆ. ನಾಯಕ ಎಬಿ
ಡಿವಿಲಿಯರ್ಸ್‍ಗೆ ಪಂದ್ಯದ ಸಂಭಾವನೆಯಲ್ಲಿ ಶೇ. 20ರಷ್ಟು ದಂಡ ಹಾಗೂ ಉಳಿದ ಆಟಗಾರರಿಗೆ ಶೇ. 10ರಷ್ಟು ದಂಡ ವಿಧಿಸಲಾಗಿದೆ . ಇದೇ ತಪ್ಪನ್ನು ತಂಡ ಮತ್ತೊಮ್ಮೆ ಮಾಡಿದರೆ ಡಿವಿಲಿಯರ್ಸ್‍ಗೆ ಒಂದು ಪಂದ್ಯದ ನಿಷೇಧ ಹೇರಲಾಗುತ್ತದೆ. ಹಾಗಾಗಿ, ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ.
Advertisement