ಬೆನಕ ಶೆಟ್ಟಿ
ಬೆನಕ ಶೆಟ್ಟಿ

ಯುವ ಪ್ರತಿಭೆ ಬೆನಕ ಚಿನ್ನದ ಸಾಧನೆ

ರಾಜ್ಯದ ಯುವ ಪ್ರತಿಭೆ ಬೆನಕ ಶೆಟ್ಟಿ, ಇತ್ತೀಚೆಗೆ ನಡೆದ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ...

ಬೆಂಗಳೂರು: ರಾಜ್ಯದ ಯುವ ಪ್ರತಿಭೆ ಬೆನಕ ಶೆಟ್ಟಿ, ಇತ್ತೀಚೆಗೆ ನಡೆದ ಹಲವಾರು ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಚಿನ್ನ ಹಾಗೂ ಬೆಳ್ಳಿ ಪದಕ ಗೆದ್ದು ಸಾಧನೆ ಮಾಡಿದ್ದಾರೆ.

ಇದೇ ತಿಂಗಳು 18ರಿಂದ 20ರವರೆಗೆ ಜಿಯೋಂಜುವಿನಲ್ಲಿ ನಡೆದ ಜಿಯೋಂಜು ಅಂತಾರಾಷ್ಟ್ರೀಯ ಟೆಕ್ವಾಂಡೋ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಿ ಸ್ವರ್ಣ ಪದಕ ಬಾಚಿಕೊಂಡಿದ್ದರು.

ಇದಕ್ಕೂ ಮುನ್ನ ಜುಲೈ 12ರಂದು ದಕ್ಷಿಣ ಕೊರಿಯಾದ ಮಜುವಿನಲ್ಲಿ ನಡೆದ ಒಂಬತ್ತನೇ ವಿಶ್ವ ಟೆಕ್ವಾಂಡೋ ಕಲ್ಚರಲ್ ಎಕ್ಸ್ ಪೋ ಕ್ರೀಡಾಕೂಟದಲ್ಲಿ ಒಂಬತ್ತು ವರ್ಷದ ಬೆನಕ ಶೆಟ್ಟಿ ಎರಡು ಬೆಳ್ಳಿ ಪದಕ ಪಡೆದ ಸಾಧನೆ ಮಾಡಿದ್ದರು.

ಬೆಂಗಳೂರಿನ ಮಾಚೋಹಳ್ಳಿಯ ಶ್ರೀವಾಣಿ ವಿದ್ಯಾಕೇಂದ್ರ ಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿರುವ ಬೆನಕ, ಅತ್ಯುತ್ತಮ ಸಾಧನೆ ಮಾಡಿರುವುದಕ್ಕೆ ತಂದೆ ಅಜೇಯ ಮತ್ತು ತಾಯಿ  ಅಶ್ವಿನಿ ಹಾಗೂ ಕೋಚ್ ಕೃಷ್ಣಮೂರ್ತಿ ಸಂತಸ ವ್ಯಕ್ತಪಡಿಸಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com