ದ್ರಾವಿಡ್‍ಗೆ ಕೋಚ್ ಹುದ್ದೆ?

ಭಾರತ ಕ್ರಿಕೆಟ್ ತಂಡದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ.
ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್
ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್

ಮುಂಬೈ: ಭಾರತ ಕ್ರಿಕೆಟ್ ತಂಡದ ಗೋಡೆ ಖ್ಯಾತಿಯ ರಾಹುಲ್ ದ್ರಾವಿಡ್ ಅವರನ್ನು ಸಲಹಾ ಸಮಿತಿಗೆ ಆಯ್ಕೆ ಮಾಡದಿರುವುದು ಚರ್ಚೆಗೆ ಗ್ರಾಸವಾಗಿದೆ.

ದ್ರಾವಿಡ್ ಅವರನ್ನು ಬಿಸಿಸಿಐ ಕಡೆಗಣಿಸಿದೆಯೇ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ದ್ರಾವಿಡ್ ಬೇರೆ ಜವಾಬ್ದಾರಿ ನೀಡುವ ಬಗ್ಗೆ ಬಿಸಿಸಿಐ ಯೋಚಿಸುತ್ತಿದೆ ಎಂದು ಮಂಡಳಿಯ ಮೂಲಗಳಿಂದ ತಿಳಿದುಬಂದಿವೆ. ಬಹುಶಃ ಅವರಿಗೆ ಭಾರತ ತಂಡದ ಕೋಚ್ ಜವಾಬ್ದಾರಿ ಸಿಗಬಹುದೇ ಎಂಬ ಸುದ್ದಿ ಕೂಡ ಹರಿದಾಡುತ್ತಿದೆ. ಟೀಂ ಇಂಡಿಯಾ ಕೋಚ್ ಸ್ಥಾನ ಯಾರು ತುಂಬಬೇಕು ಎಂಬುದರ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳದ ಬಿಸಿಸಿಐ, ಈ ವಿಷಯದಲ್ಲಿ ಸದ್ಯ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

ಭಾರತ ತಂಡ ಬಾಂಗ್ಲಾ ಪ್ರವಾಸಕೈಗೊಳ್ಳುವ ಮುನ್ನ ತಂಡದ ಸಹಾಯಕ ಸಿಬ್ಬಂದಿ ಆಯ್ಕೆ ನಡೆಯಲಿದ್ದು, ಕೋಚ್ ಸ್ಥಾನಕ್ಕೂ ಆಯ್ಕೆ ನಡೆಯಲಿದೆಯೇ ಎಂಬ ಪ್ರಶ್ನೆ ಇದೆ. ಇನ್ನು ತಂಡದಲ್ಲಿ ರವಿಶಾಸ್ತ್ರಿ ಅವರ ಪಾತ್ರವನ್ನು ಬಿಸಿಸಿಐ ನಿರ್ಧರಿಸಿಲ್ಲ. ಕೆಲವು ವರದಿಗಳ ಪ್ರಕಾರ ಭಾರತ ತಂಡ ಮುಖ್ಯ ಕೋಚ್ ಇಲ್ಲದೆ, ಕೇವಲ ಸಂಜಯ್ ಬಂಗಾರ್, ಭರತ್ ಅರುಣ್ ಮತ್ತು ಆರ್.ಶ್ರೀಧರ್ ಅವರನ್ನೊಳಗೊಂಡ ಸಹಾಕಯ ಸಿಬ್ಬಂದಿಯನ್ನು ತಂಡದ ಜತೆ ಕಳುಹಿಸುವ ಸಾಧ್ಯತೆಗಳಿವೆ ಎಂದು ತಿಳಿಸಲಾಗಿದೆ ಎಂದು ಖಾಸಗಿ ವಾಹಿನಿ ವರದಿ ಮಾಡಿದೆ.

ಒಟ್ಟಿನಲ್ಲಿ ಬಿಸಿಸಿಐ ತನ್ನ ನಿರ್ಧಾರ ಯಾವ ರೀತಿ ಬರಲಿದೆ ಎಂಬುದರ ಸುಳಿವನ್ನು ನೀಡದೇ ಸಾಕಷ್ಟು ಕುತೂಹಲ ಮೂಡಿಸಿದೆ. ಒಟ್ಟಿನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಿರುವ ರಾಹುಲ್ ದ್ರಾವಿಡ್‍ಗೆ ಬಿಸಿಸಿಐ ಸೂಕ್ತ ಜವಾಬ್ದಾರಿ ನೀಡುವುದೇ ಎಂಬುದನ್ನು ಕಾದುನೋಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com