

ಢಾಕಾ: ಆತಿಥೇಯ ಬಾಂಗ್ಲಾದೇಶ ವಿರುದ್ಧ ಆರಂಭಗೊಂಡಿರುವ ಏಕೈಕ ಟೆಸ್ಟ್ ಪಂದದಲ್ಲಿ ಭಾರತ ವಿಕೆಟ್ ನಷ್ಟವಿಲ್ಲದೆ 56 ಓವರ್‌ಗಳಲ್ಲಿ 239 ರನ್ ಗಳ ಬೃಹತ್ ಮೊತ್ತ ಕಲೆಹಾಕಿದೆ.
ಖಾನ್ ಸಾಹೇಬ್ ಒಸ್ಮಾನ್ ಅಲಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟ್ ಮಾಡಿದ ಟೀಂ ಇಂಡಿಯಾಗೆ ಮಳೆ ಅಡ್ಡಿ ಮಾಡಿತು. ಇದರ ನಡುವೆಯೂ ಭಾರತದ ಓಪನರ್ ಗಳು ಉತ್ತಮವಾಗಿ ಆಟವಾಡಿದ್ದು ಬೃಹತ್ ಮೊತ್ತ ಕಲೆ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ.
ಸ್ಫೋಟಕ ಬ್ಯಾಟ್ ಮನ್ ಶಿಖರ್ ಧವನ್ 158 ಎಸೆತಗಳಲ್ಲಿ 150 ರನ್ ಗಳಿಸಿದ್ದರೆ, ಧವನ್‌ಗೆ ಸಾಥ್ ನೀಡಿರುವ ಮುರಳಿ ವಿಜಯ್ 178 ಎಸೆತಗಳಲ್ಲಿ 89 ರನ್ ಗಳಿಸಿ ಕ್ರಿಸ್ ನಲ್ಲಿದ್ದಾರೆ.
ಮೊದಲ ದಿನದಾಟ ಅಂತ್ಯವಾದಾಗ ಭಾರತ ವಿಕೆಟ್ ನಷ್ಟವಿಲ್ಲದೆ 56 ಓವರ್‌ಗಳಲ್ಲಿ 239 ರನ್ ಕಲೆ ಹಾಕಿದೆ.