ಐಪಿಎಲ್ ಟೂರ್ನಿಗಳಿಂದ ಭಾರತ ಎಲ್ಲ ಮಾದರಿಯ ಕ್ರಿಕೆಟ್‍ನಲ್ಲೂ ಬಲಾಢ್ಯವಾಗಿದೆ: ಗೇಲ್

ಐಪಿಎಲ್ ಟೂರ್ನಿಗಳಿಂದಲೇ ಟೀಂ ಇಂಡಿಯಾ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ಗಮನಾರ್ಹ ಪ್ರಗತಿ ಸಾಧಿಸಲು ಕಾರಣವಾಗಿದೆ ಎಂದು ಕ್ರಿಸ್ ಗೇಲ್ ಅಭಿಪ್ರಾಯಪಟ್ಟಿದ್ದಾರೆ...
ಕ್ರಿಸ್ ಗೇಲ್
ಕ್ರಿಸ್ ಗೇಲ್

ಲಂಡನ್: ಐಪಿಎಲ್ ಟೂರ್ನಿಗಳಿಂದಲೇ ಟೀಂ ಇಂಡಿಯಾ ಎಲ್ಲ ಮಾದರಿಯ ಕ್ರಿಕೆಟ್ ನಲ್ಲೂ ಗಮನಾರ್ಹ ಪ್ರಗತಿ ಸಾಧಿಸಲು ಕಾರಣವಾಗಿದೆ ಎಂದು ಕ್ರಿಸ್ ಗೇಲ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ ಟೂರ್ನಿಗಳಿಂದಾಗಿ ಯುವ ಪ್ರತಿಭೆಗಳು ಅಂತಾರಾಷ್ಟ್ರೀಯ ಕ್ರಿಕೆಟಿಗರೊಂದಿಗೆ ಸೆಣಸುತ್ತಾರೆ. ಭಾರತದ ಯುವ ಕ್ರಿಕೆಟಿಗರು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಟ ಕಲಿಯಲು ಐಪಿಎಲ್ ಒಂದು ಅದ್ಭುತ ವೇದಿಕೆಯಾಗಿದೆ ಎಂದು ಗೇಲ್ ಹೇಳಿದ್ದಾರೆ.

ಕ್ರಿಕೆಟ್ ದಿಗ್ಗಜರೊಂದಿಗೆ ಒಂದೇ ಡ್ರೆಸಿಂಗ್ ರೂಮ್ ಶೇರ್ ಮಾಡಿಕೊಳ್ಳುತ್ತಾರೆ. ಯಾವ ಕ್ರಿಕೆಟಿಗ ಯಾವ ರೀತಿ ಯೋಚಿಸುತ್ತಾರೆಂಬುದನ್ನು ಅರಿಯಲು ಸಾಧ್ಯವಾಗುತ್ತದೆ. ತಮ್ಮ ದೇಶದ ಪರವಾಗಿ ಆಡುವಾಗ ಈ ಅಂಶಗಳಿಂದಾಗಿ ಅವರು ಕೆಚ್ಚೆದೆಯ ಪ್ರದರ್ಶನ ನೀಡಲು ಸಾಧ್ಯವಾಗುತ್ತದೆ. ಹೀಗಾಗಿ ಭಾರತ ತಂಡ ವಿಶ್ವ ಕ್ರಿಕೆಟ್ ನ ಬಲಾಢ್ಯ ತಂಡವೆನಿಸಿದೆ. ಇದಕ್ಕೆಲ್ಲಾ ಐಪಿಎಲ್ ಟೂರ್ನಿಯೇ ಕಾರಣ" ಎಂದು ಕ್ರಿಸ್ ಗೇಲ್ ಶ್ಲಾಘಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com