ವಿಂಬಲ್ಡನ್ ಗೆ ಪ್ರಾಂಜಲಾ ಪ್ರವೇಶ

ಉದಯೋನ್ಮುಖ ಆಟಗಾರ್ತಿ ಯಡ್ಲಪಳ್ಳಿ ಪ್ರಾಂಜಲಾ ಅವರು ಇದೇ ಮಾಸಾಂತ್ಯಕ್ಕೆ ಆರಂಭಗೊಳ್ಳಲಿರುವ ವಿಂಬಲ್ಡನ್ ಜೂನಿಯರ್ ಟೆನಿಸ್ ಚಾಂಪಿಯನ್ ಶಿಪ್...
ಪ್ರಾಂಜಲಾ ಯಡ್ಲಪಳ್ಳಿ
ಪ್ರಾಂಜಲಾ ಯಡ್ಲಪಳ್ಳಿ
Updated on: 

ಹೈದರಾಬಾದ್: ಉದಯೋನ್ಮುಖ ಆಟಗಾರ್ತಿ ಯಡ್ಲಪಳ್ಳಿ ಪ್ರಾಂಜಲಾ ಅವರು ಇದೇ ಮಾಸಾಂತ್ಯಕ್ಕೆ ಆರಂಭಗೊಳ್ಳಲಿರುವ ವಿಂಬಲ್ಡನ್ ಜೂನಿಯರ್ ಟೆನಿಸ್ ಚಾಂಪಿಯನ್ ಶಿಪ್ ನ ಮುಖ್ಯ ಪಂದ್ಯಾವಳಿಯಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ. 16 ವರ್ಷ ವಯಸ್ಸಿನ ಪ್ರಾಂಜಲಾ, ಇದೇ ವರ್ಷದ ಆರಂಭದಲ್ಲಿ ನಡೆದಿದ್ದ ಆಸ್ಟ್ರೇಲಿಯನ್ ಓಪನ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ  ಎರಡನೇ ಸುತ್ತಿಗೆ ಕಾಲಿಟ್ಟಿದ್ದರು. 

ಮಾರ್ಚ್ ತಿಂಗಳಲ್ಲಿ ಥಾಯ್ಲೆಂಡ್ ನಲ್ಲಿ ನಡೆದಿದ್ದ ಐಟಿಎಫ್ ಜೂನಿಯರ್ ಗ್ರೇಡ್ 1 ಚಾಂಪಿಯನ್ ನಲ್ಲಿ ಮುಡಿಗೇರಿಸಿಕೊಂಡಿದ್ದರು. ಇದಲ್ಲದೆ ಏಪ್ರಿಲ್ ನಲ್ಲಿ ನಡೆದಿದ್ದ ಏಷ್ಯನ್ ಜೂನಿಯರ್ ಚಾಂಪಿಯನ್ ಶಿಪ್ ನಲ್ಲಿ ಸಿಂಗಲ್ಸ್ ಹಾಗೂ ಡಬಲ್ಸ್ ವಿಭಾಗದ ಎರಡೂ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಅವರು ಬಾಚಿಕೊಂಡಿದ್ದರು,ಶುಕ್ರವಾರ ಬಿಡುಗಡೆಗೊಂಡಿರುವ ಐಟಿಎಫ್  ಜೂನಿಯರ್ ರ್ಯಾಂಕಿಂಗ್  ಪಟ್ಟಿಯಲ್ಲಿ ಪ್ರಾಂಜಲಾ ಅವರು ಡಬಲ್ಸ್ ವಿಭಾಗದಲ್ಲಿ 19 ನೇ ಸ್ಥಾನಕ್ಕೇರಿದ್ದಾರೆ,


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com