
ಬೆಂಗಳೂರು: ಮುಂಬರುವ 2017 ಮಹಿಳಾ ವಿಶ್ವಕಪ್ ಗೆ ಅರ್ಹತೆ ಪಡೆಯಲು ಯತ್ನಿಸುತ್ತಿರುವ ಭಾರತದ ವನಿತೆಯರು, ಹಿರಿಯ ಆಟಗಾರ್ತಿ ಜುಲನ್ ಗೋಪಾಲಸ್ವಾಮಿ ಅವರ ಆಕರ್ಷಕ ಬ್ಯಾಟಿಂಗ್ ಹಾಗೂ ಬೌಲರ್ ಗಳ ಶಿಸ್ತುಬದ್ಧ ದಾಳಿಯ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅದ್ಭುತ ಗೆಲುವು ದಾಖಲಿಸಿದ್ದಾರೆ.
ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಮಿಥಾಲಿ ರಾಜ್ ನೇತೃತ್ವದ ಭಾರತ ತಂಡ 17 ರನ್ ಗಳ ಅಂತರದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಗೆಲುವು ದಾಖಲಿಸಿದೆ. ಈ ಮೂಲಕ ಐಸಿಸಿಯ ರ್ಯಾಂಕಿಂಗ್ ನಲ್ಲಿ ಅತ್ಯಮೂಲ್ಯ ಎರಡು ಅಂಕಗಳನ್ನು ಗಳಿಸಿದೆ. ಐದು ಏಕದಿನ ಸರಣಿಯ ಈ ಟೂರ್ನಿಯಲ್ಲಿ ಆರಂಭಿಕ ಮೂರು ಪಂದ್ಯಗಳ ಫಲಿತಾಂಶಕ್ಕೆ ಅಂಕಗಳನ್ನು ಪರಿಗಣಿಸಲಾಗುತ್ತಿದ್ದು ಭಾರತದ ಪಾಲಿಗೆ ಈ ಪಂದ್ಯಗಳು ಮಹತ್ವದ್ದಾಗಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಆರಂಭಿಕ ವೈಫಲ್ಯದಿಂದಾಗಿ 44 .3 ಓವರ್ ಗಳಲ್ಲಿ 142 ರನ್ ದಾಖಲಿಸಿದರು. ಈ ಮೊತ್ತವನ್ನು ಬೆನ್ನಟ್ಟಿದ ನ್ಯೂಜಿಲೆಂಡ್, 45 .3 ಓವರ್ ಗಳಲ್ಲಿ 125 ರನ್ ಗಳಿಗೆ ಅಲೌಟ್ ಆಯಿತು.
Advertisement