ರಣಜಿ ಫೈನಲ್ಸ್: ಕರ್ನಾಟಕದ ಜೊತೆ ಸೆಣಸಲಿರುವ ತಮಿಳು ನಾಡು

ರಣಜಿ ಟ್ರೋಫಿ ಸರಣಿಯಿಂದ ಎಲ್ಲ ಉತ್ತರ ಭಾರತ ರಾಜ್ಯಗಳು ಹೊರಬಿದ್ದಿವೆ. ಭಾನುವಾರ ತಮಿಳು ನಾಡು ಮತ್ತು ಮಹಾರಾಷ್ಟ್ರ ನಡುವಿನ ಸೆಮಿ ಫೈನಲ್ಸ್
ರಣಜಿ ಫೈನಲ್ ಪ್ರವೇಶಿಸಿ ಸಂಭ್ರಮಿಸಿದ ಕರ್ನಾಟಕ ತಂಡ
ರಣಜಿ ಫೈನಲ್ ಪ್ರವೇಶಿಸಿ ಸಂಭ್ರಮಿಸಿದ ಕರ್ನಾಟಕ ತಂಡ
Updated on

ಕೊಲ್ಕೊತ್ತ: ರಣಜಿ ಟ್ರೋಫಿ ಸರಣಿಯಿಂದ ಎಲ್ಲ ಉತ್ತರ ಭಾರತ ರಾಜ್ಯಗಳು ಹೊರಬಿದ್ದಿವೆ. ಭಾನುವಾರ ತಮಿಳು ನಾಡು ಮತ್ತು ಮಹಾರಾಷ್ಟ್ರ ನಡುವಿನ ಸೆಮಿ ಫೈನಲ್ಸ್ ಪಂದ್ಯ ಡ್ರಾ ಆಗಿ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದ ಮೇಲೆ ತಮಿಳುನಾಡು ಫೈನಲ್ಸ್ ಪ್ರವೇಶಿಸಿದೆ. ಇದಕ್ಕೂ ಮುಂಚೆ ಮುಂಬೈ ತಂಡವನ್ನು ಸದೆಬಡಿದು ಕರ್ನಾಟಕ ತಂಡ ಶನಿವಾರ ಫೈನಲ್ಸ್ ಪ್ರವೇಶಿಸಿತ್ತು.

ಕೊಲ್ಕೋತ್ತಾದ್ದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಈ ಸೆಮಿ ಫೈನಲ್ಸ್ ಪಂದ್ಯದಲ್ಲಿ ತಮಿಳುನಾಡಿನ ಮೊದಲ ಇನ್ನಿಂಗ್ಸ್ ನ ಬೃಹತ್ ಮೊತ್ತ ೫೪೯ ರನ್ ಗಳನ್ನೂ ಬೆನ್ನಟ್ಟಿದ್ದ ಮಹಾರಾಷ್ಟ್ರ ಮೊದಲಿಗೆ ಹೋರಾಟನ ಮನೋಭಾವ ತೋರಿದರೂ ಕೂಡ ೪೫೪ ರನ್ ಗಳಿಸುವಷ್ಟರಲ್ಲಿ ಎಲ್ಲ ವಿಕೆಟ್ ಗಳನ್ನೂ ಕಳೆದುಕೊಂಡರು. ಇದರಿಂದಾಗಿ ತಮಿಳುನಾಡು ೧೨ ನೆ ಬಾರಿಗೆ ರಣಜಿ ಫೈನಲ್ಸ್ ಪ್ರವೇಶಿಸಿದೆ.

ಮಾರ್ಚ್ ೮ ರಿಂದ ಮುಂಬೈನಲ್ಲಿ ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ರಣಜಿ ಫೈನಲ್ಸ್ ಪಂದ್ಯ ನಡೆಯಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com