ವಿಶ್ವಕಪ್: ಲಂಕಾ ವಿರುದ್ಧ ಆಸ್ಟ್ರೇಲಿಯಾಗೆ ಭರ್ಜರಿ ಜಯ

ವಿಶ್ವಕಪ್ ಟೂರ್ನಿಯ ಭಾನುವಾರದ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ತಂಡ 64 ರನ್ ಗಳ ಭರ್ಜರಿ ಜಯ ಸಾಧಿಸಿದೆ...
ತಿರುಮಾನ್ನೆ ವಿಕೆಟ್ ಪಡೆದ ಸಂಭ್ರಮದಲ್ಲಿ ಮಿಚೆಲ್ ಜಾನ್ಸನ್
ತಿರುಮಾನ್ನೆ ವಿಕೆಟ್ ಪಡೆದ ಸಂಭ್ರಮದಲ್ಲಿ ಮಿಚೆಲ್ ಜಾನ್ಸನ್

ಸಿಡ್ನಿ: ವಿಶ್ವಕಪ್ ಟೂರ್ನಿಯ ಭಾನುವಾರದ ಲೀಗ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆಸ್ಟ್ರೇಲಿಯಾ ತಂಡ 64 ರನ್ ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್ ಗಳಲ್ಲಿ ಗ್ಲೇನ್ ಮ್ಯಾಕ್ಸ್ ವೆಲ್ (102 ರನ್), ಸ್ಮಿತ್ (72 ರನ್), ಕ್ಲಾರ್ಕ್ (68 ರನ್) ಮತ್ತು ಶೇನ್ ವಾಟ್ಸನ್ (67 ರನ್) ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ 9 ವಿಕೆಟ್ ನಷ್ಟಕ್ಕೆ 376 ರನ್ ಗಳನ್ನು ಕಲೆಹಾಕಿತು. ಆರಂಭದಿಂದಲೂ ಲಂಕಾ ಬೌಲರ್ ಗಳ ಮೇಲೆ ಹಿಡಿತ ಸಾಧಿಸಿದ್ದ ಮ್ಯಾಕ್ಸ್ ವೆಲ್ ದಾಖಲೆ ಶತಕ ಸಿಡಿಸಿದರು. ಕೇವಲ 73 ಎಸೆತಗಳಲ್ಲಿ 102 ರನ್ ಸಿಡಿಸಿದರು.

ಇನ್ನು ಕಾಂಗರೂ ಪಡೆ ನೀಡಿದ 378 ರನ್ ಗಳ ಬೃಹತ್ ಮೊತ್ತವನ್ನು ಬೆನ್ನುಹತ್ತಿದ ಶ್ರೀಲಂಕಾ ಉತ್ತಮ ಹೊರಾಟ ನೀಡಿತಾದರೂ, ಗುರಿ ಮುಟ್ಟುವಲ್ಲಿ ವಿಫಲವಾಯಿತು. ಶ್ರೀಲಂಕಾಗೆ ಆರಂಭಿಕ ಆಟಗಾರ ತಿಲಕರತ್ನೆ ದಿಲ್ಶಾನ್ (62 ರನ್), ಮಧ್ಯಮ ಕ್ರಮಾಂಕದ ಆಟಗಾರರಾದ ಚಾಂಡಿಮಾಲ್ (52 ರನ್), ಮ್ಯಾಥ್ಯೂಸ್ (35 ರನ್) ಮತ್ತು ಕುಮಾರ ಸಂಗಕ್ಕಾರ (104 ರನ್)ಅವರನ್ನು ಹೊರತುಪಡಿಸಿ ಬೇರಾವುದೇ ಆಟಗಾರನೂ ಆಸ್ಚ್ರೇಲಿಯಾ ಬೌಲರ್ ಗಳಿಗೆ ಪ್ರತಿರೋಧ ಒಡ್ಡಲಿಲ್ಲ. ಅಂತಿಮವಾಗಿ ಶ್ರೀಲಂಕಾ ತಂಡ 312 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 64 ರನ್ ಗಳ ಅಂತರದಿಂದ ಆಸ್ಟ್ರೇಲಿಯಾಗೆ ಶರಣಾಯಿತು.

ಆಸ್ಟ್ರೇಲಿಯಾ ಪರ ಆಮೋಘ ಶತಕ ಭಾರಿಸಿದ ಗ್ಲೇನ್ ಮ್ಯಾಕ್ಸೆವೆಲ್ ಅರ್ಹವಾಗಿಯೇ ಪಂದ್ಯಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com