ಭಾರತದ ಬೌಲಿಂಗ್ ದಾಳಿ ಅಚ್ಚರಿ ತಂದಿದೆ: ಜಾಂಟಿ ರೋಡ್ಸ್

ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಸಂಘಟಿತ ದಾಳಿ ನಡೆಸುವ ಮೂಲಕ ತಂಡದ ಯಶಸ್ಸಿಗೆ ಕಾರಣವಾಗಿರುವ ಭಾರತದ ಬೌಲಿಂಗ್ ಪ್ರದರ್ಶನ...
ಜಾಂಟಿ ರೋಡ್ಸ್
ಜಾಂಟಿ ರೋಡ್ಸ್

ನವದೆಹಲಿ: ಪ್ರಸಕ್ತ ವಿಶ್ವಕಪ್ ಟೂರ್ನಿಯಲ್ಲಿ ಸಂಘಟಿತ ದಾಳಿ ನಡೆಸುವ ಮೂಲಕ ತಂಡದ ಯಶಸ್ಸಿಗೆ ಕಾರಣವಾಗಿರುವ ಭಾರತದ ಬೌಲಿಂಗ್ ಪ್ರದರ್ಶನ ಅಚ್ಚರಿ ಮೂಡಿಸಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಜಾಂಟಿ ರೋಡ್ಸ್ ಹೇಳಿದ್ದಾರೆ.

ಭಾರತ ತಂಡದ ಬ್ಯಾಟಿಂಗ್ ಕ್ರಮಾಂಕ ಎಷ್ಟು ಬಲಿಷ್ಠವಾಗಿದೆ ಎಂದು ಪ್ರತಿಯೊಬ್ಬರಿಗೂ ತಿಳಿದಿದೆ. ಆದರೆ, ಬೌಲಿಂಗ್ ವಿಭಾಗದ ಮೇಲೆ ಅನುಮಾನ ಇತ್ತು. ಈಗ ಆಸ್ಟ್ರೇಲಿಯಾದ ನೆಲದಲ್ಲಿ ವೇಗಿಗಳು ನೀಡುತ್ತಿರುವ ಪ್ರದರ್ಶನ ಅಚ್ಚರಿ ಮೂಡಿಸಿದೆ. ಬೌಲರ್‌ಗಳ ಶಿಸ್ತುಬದ್ಧ ದಾಳಿ ಎದುರಾಳಿ ತಂಡ ಒತ್ತಡಕ್ಕೆ ಸಿಲುಕುವಂತೆ ಮಾಡಿದೆ ಎಂದು ರೋಡ್ಸ್ ಅಭಿಪ್ರಾಯಪಟ್ಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com