ರಣಜಿ ಬಳಿಕ ಇರಾನಿ ಟ್ರೋಫಿ ಗೆದ್ದ ಕರ್ನಾಟಕ ಬಾಯ್ಸ್

ರಣಜಿ ಟ್ರೋಫಿ ಗೆದ್ದು ಬೀಗಿದ್ದ ಕರ್ನಾಟಕ ತಂಡ ಇದೀಗ ಇರಾನಿ ಟ್ರೋಫಿಯನ್ನೂ ಮುಡಿಗೇರಿಸಿಕೊಂಡಿದೆ.
ಇರಾನಿ ಕಪ್ ಎತ್ತಿ ಹಿಡಿದ ಕರ್ನಾಟಕ ತಂಡ(ಸಾಂದರ್ಭಿಕ ಚಿತ್ರ)
ಇರಾನಿ ಕಪ್ ಎತ್ತಿ ಹಿಡಿದ ಕರ್ನಾಟಕ ತಂಡ(ಸಾಂದರ್ಭಿಕ ಚಿತ್ರ)

ಬೆಂಗಳೂರು: ರಣಜಿ ಟ್ರೋಫಿ ಗೆದ್ದು ಬೀಗಿದ್ದ ಕರ್ನಾಟಕ ತಂಡ ಇದೀಗ ಇರಾನಿ ಟ್ರೋಫಿಯನ್ನೂ ಮುಡಿಗೇರಿಸಿಕೊಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಶೇಷಭಾರತವನನ್ನು 246 ರನ್ ಗಳ ಅಂತರದಿಂದ ಮಣಿಸಿ ಸತತ 2ನೇ ಬಾರಿಗೆ ಇರಾನಿ ಟ್ರೋಫಿಯನ್ನು ಮುಡಿಗೇರಿಸಿಕೊಂಡ ಸಾಧನೆ ಮಾಡಿದೆ.

2ನೇ ಇನ್ನಿಂಗ್ಸ್ ನಲ್ಲಿ 403 ರನ್ ಗಳ ಗುರಿ ಪಡೆದಿದ್ದ ಶೇಷಭಾರತ ಕರ್ನಾಟಕ ಬೌಲಿಂಗ್ ದಾಳಿ ಎದುರು ತರಗೆಲೆಯಂತೆ ಉರುಳಿತು. ತಂಡದ ಎಲ್ಲ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು.

ಮನೋಜ್ ತಿವಾರಿ 56 ರನ್ ಗಳಿಸಿದ್ದು ಬಿಟ್ಟರೆ ಮತ್ಯಾವ ಬ್ಯಾಟ್ಸ್ ಮನ್ ಉತ್ತಮವಾಗಿ ಆಡಲಿಲ್ಲ.  ಕೇವಲ 156 ರನ್‘ಗಳಿಗೆ ಆಲೌಟ್ ಆಗುವ ಮೂಲಕ 246 ರನ್ ಅಂತರದಿಂದ ಶೇಷಭಾರತ ಸೋಲೊಪ್ಪಿಕೊಂಡಿತು.

ಕರ್ನಾಟಕದ ಪರ ಮಾರಕ ಬೌಲಿಂಗ್ ದಾಳಿ ನಡೆಸಿದ ನಾಯಕ ವಿನಯ್ ಕುಮಾರ್, ಅಭಿಮನ್ಯು ಮಿಥುನ್ ಮತ್ತು ಶ್ರೇಯಸ್ ಗೋಪಾಲ್ ತಲಾ 3 ವಿಕೆಟ್ ಕಬಳಿಸಿದರು. ಅಜೇಯ 123 ರನ್ ಗಳಿಸಿದ ಮನೀಶ್ ಪಾಂಡೆ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸಂಕ್ಷಿಪ್ತ ಸ್ಕೋರ್
ಕರ್ನಾಟಕ
244 ಮತ್ತು 422 ರನ್

ಶೇಷಭಾರತ
264 ಮತ್ತು 156 ರನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com