ಸೆಮಿಫೈನಲ್ ವೀಕ್ಷಣೆಗೆ ಅನುಷ್ಕಾ ಆಗಮನ

ನಾಳೆ ನಡೆಯಲಿರುವ ಭಾರತ- ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ, ಟೀಂ ಇಂಡಿಯಾ...
ವಿರಾಟ್ ಕೊಹ್ಲಿ -ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ -ಅನುಷ್ಕಾ ಶರ್ಮಾ
Updated on: 

ಸಿಡ್ನಿ :ನಾಳೆ ನಡೆಯಲಿರುವ ಭಾರತ- ಆಸ್ಟ್ರೇಲಿಯಾ ನಡುವಿನ ವಿಶ್ವಕಪ್ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಬಾಲಿವುಡ್ ನಟಿ, ಟೀಂ ಇಂಡಿಯಾ ಉಪ ನಾಯಕ ವಿರಾಟ್ ಕೊಹ್ಲಿ ಪ್ರೇಯಸಿ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾ ತಲುಪಿದ್ದಾರೆ. ತಲುಪಿದ ಕೂಡಲೇ ಕೊಹ್ಲಿ ಮತ್ತು ಅನುಷ್ಕಾ ಭಾರತೀಯ ರೆಸ್ಟೊರೆಂಟ್‌ವೊಂದರಲ್ಲಿ ಒಟ್ಟಿಗೆ ಊಟ ಮಾಡಿದ್ದರು.

ವಿಶ್ವಕಪ್ ಪಂದ್ಯಗಳ ವೇಳೆ ತಂಡದ ಸದಸ್ಯರು ಅವರ ಪತ್ನಿ ಅಥವಾ ಪ್ರೇಯಸಿಯ ಜತೆ ಇರಲು ಬಿಸಿಸಿಐ ಅನುಮತಿ ನೀಡಿರಲಿಲ್ಲ. ಆದರೆ ಭಾರತ ಸೆಮಿಫೈನಲ್‌ಗೆ ತಲುಪಿರುವುದರಿಂದ ನಿಯಮ ಸಡಿಲಗೊಳಿಸಿದ್ದು, ಟೀಂ ಇಂಡಿಯಾ ಸದಸ್ಯರು ಅವರ ಪತ್ನಿ ಮತ್ತು ಪ್ರೇಯಸಿ ಜತೆ ಇರಲು ಅನುಮತಿ ನೀಡಲಾಗಿದೆ.

ಇಂಗ್ಲೆಂಡ್ ಪ್ರವಾಸದ ವೇಳೆ ಅನುಷ್ಕಾ ಕೊಹ್ಲಿ ಜತೆ ಇದ್ದ ಕಾರಣವೇ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದರು ಎಂಬ ಟೀಕೆಯೂ ಈ ಹಿಂದೆ ಕೇಳಿ ಬಂದಿತ್ತು. ಆದ್ದರಿಂದಲೇ ವಿಶ್ವಕಪ್ ಪಂದ್ಯದ ವೇಳೆ ಪತ್ನಿ ಅಥವಾ ಗರ್ಲ್‌ಫ್ರೆಂಡ್‌ನಿಂದ ದೂರವಿರುವಂತೆ ಟೀಂ ಇಂಡಿಯಾ ಸದಸ್ಯರಿಗೆ ಆದೇಶಿಸಲಾಗಿತ್ತು.

ವಿಶ್ವಕಪ್ ಪಂದ್ಯದ ಬ್ಯುಸಿಯಲ್ಲಿರುವಾಗಲೇ ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾಳ ಎನ್‌ಹೆಚ್ 10 ಚಿತ್ರ ನೋಡಿ ಟ್ವೀಟ್ ಮಾಡಿದ್ದರು. ಚಿತ್ರದಲ್ಲಿನ ಅಭಿನಯಕ್ಕೆ ಅನುಷ್ಕಾಳನ್ನು ಅಭಿನಂದಿಸಿದ ಕೊಹ್ಲಿ ಮೈ ಲವ್ ಅನುಷ್ಕಾ ಎಂದು ಟ್ವೀಟ್ ಮಾಡಿದ್ದು ಭಾರೀ ಸುದ್ದಿಯಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com