ಫುಟ್ಬಾಲ್: ಎಜಿಒಆರ್ ಜಿಸಿಗೆ ಜಯ

ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಎಜಿಒಆರ್‍ಸಿ ತಂಡ ಬಿಡಿಎಫ್ಎ ಎ ಡಿವಿಜನ್ ಫುಟ್ಬಾಲ್ ಟೂರ್ನಿಯಲ್ಲಿ ಎಲ್‍ಆರ್‍ಡಿಇ ವಿರುದ್ಧ..
ಡಿವಿಜನ್ ಫುಟ್ಬಾಲ್ ಟೂರ್ನಿ (ಸಾಂದರ್ಭಿಕ ಚಿತ್ರ)
ಡಿವಿಜನ್ ಫುಟ್ಬಾಲ್ ಟೂರ್ನಿ (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಸಂಘಟಿತ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾದ ಎಜಿಒಆರ್‍ಸಿ ತಂಡ ಬಿಡಿಎಫ್ಎ ಎ ಡಿವಿಜನ್ ಫುಟ್ಬಾಲ್ ಟೂರ್ನಿಯಲ್ಲಿ ಎಲ್‍ಆರ್‍ಡಿಇ ವಿರುದ್ಧ ಗೆಲವು ದಾಖಲಿಸಿದೆ.

ಶುಕ್ರವಾರ ಅಶೋಕನಗರದಲ್ಲಿರುವ ಬೆಂಗಳೂರು ಜಿಲ್ಲಾ ಫುಟ್ಬಾಲ್ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಎಜಿಒಆರ್ ಸಿ 3-1 ಗೋಲುಗಳ ಅಂತರದಲ್ಲಿ ಎಲ್‍ಆರ್‍ಡಿಇ ವಿರುದ್ಧ ಜಯಿಸಿತು. ಎಜಿಒಆರ್‍ಸಿ ಪರ ರಾಜು 59, 78ನೇ ಹಾಗೂ ರವೀಂದರ್ 65ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಎಲ್‍ಆರ್‍ಡಿಇ ವಿರುದಟಛಿ ಸತೀಶ್ 14ನೇ ನಿಮಿಷದಲ್ಲಿ ಗೋಲು ದಾಖಲಿಸಿದರು. ಇನ್ನು ಮತ್ತೊಂದು ಪಂದ್ಯದಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ತಂಡ ಬೆಂಗಳೂರು ಇಂಡಿಪೆಂಡೆನ್ಸ್ ವಿರುದ್ಧ 2-0 ಗೋಲುಗಳ ಅಂತರದಲ್ಲಿ ಗೆಲವು ದಾಖಲಿಸಿತು. ಕರ್ನಾಟಕ ರಾಜ್ಯ ಪೊಲೀಸ್ ತಂಡದ ಪರ ಅರುಣ್ ಕುಮಾರ್ 3 ಹಾಗೂ ಕಾರ್ತಿಕ್ 47ನೇ ನಿಮಿಷದಲ್ಲಿ ಗೋಲು ಗಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com