ಚೆನ್ನೈ ಕಿಂಗ್ಸ್ ಗೆ ಅಗ್ರಪಟ್ಟ

ಶಿಸ್ತುಬದ್ಧ ಬೌಲಿಂಗ್ ದಾಳಿ, ಫಫ್ ಡುಪ್ಲೆಸಿಸ್ (55) ಹಾಗೂ ಸುರೇಶ್ ರೈನಾ (ಅಜೇಯ 41) ಅವರ ಜವಾಬ್ದಾರಿಯುತ ಬ್ಯಾಟಿಂಗ್ ...
ಚೆನ್ನೈ ಸೂಪರ್ ಕಿಂಗ್ಸ್  (ಕೃಪೆ : ಬಿಸಿಸಿಐ)
ಚೆನ್ನೈ ಸೂಪರ್ ಕಿಂಗ್ಸ್ (ಕೃಪೆ : ಬಿಸಿಸಿಐ)

ಮೊಹಾಲಿ: ಶಿಸ್ತುಬದ್ಧ ಬೌಲಿಂಗ್ ದಾಳಿ, ಫಫ್ ಡುಪ್ಲೆಸಿಸ್  (55) ಹಾಗೂ ಸುರೇಶ್ ರೈನಾ (ಅಜೇಯ 41) ಅವರ ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ಐಪಿಎಲ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ   ಗೆಲವು ದಾಖಲಿಸಿದೆ. ಪಂಜಾಬ್ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಯ್ಕೆ ಮಾಡಿಕೊಂಡ ಪಂಜಾಬ್ ಪಡೆ,20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 130 ರನ್ ದಾಖಲಿಸಿತು. ಈ ಸಾಧಾರಣ ಗುರಿಯನ್ನು ಬೆನ್ನಟ್ಟಿದ ಚೆನ್ನೈ ಸೂಪರ್ ಕಿಂಗ್ಸ್ 16.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 134 ರನ್ ದಾಖಲಿಸಿ 7 ವಿಕೆಟ್‍ಗಳ ಸುಲಭ ಗೆಲವು ದಾಖಲಿಸಿತು. ಈ ಮೂಲಕ ಟೂರ್ನಿಯ  ಅಗ್ರಸ್ಥಾನವನ್ನು ಖಚಿತ ಮಾಡಿಕೊಂಡಿತು.
ಕಳೆದ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್  ತಂಡ ಈ ಬಾರಿ ಕಳಪೆ ಪ್ರದರ್ಶನದಿಂದ ಕಂಗೆಟ್ಟಿದ್ದು, ಸೋಲಿನೊಂದಿಗೆ ಟೂರ್ನಿಗೆ  ವಿದಾಯ ಹೇಳಿದೆ. ಚೆನ್ನೈ ಸೂಪರ್ ಕಿಂಗ್ಸ್  ತಂಡ 14 ಪಂದ್ಯಗಳಿಂದ 18 ಅಂಕಗಳನ್ನು ಸಂಪಾದಿಸುವ ಮೂಲಕ ಟೂರ್ನಿಯಲ್ಲಿ ಅಗ್ರಸ್ಥಾನ ಪಡೆದಿದೆ. ಉಳಿದ ಪಂದ್ಯಗಳಲ್ಲಿ ಯಾವುದೇ ತಂಡ ಗೆದ್ದರೂ
18 ಅಂಕಗಳನ್ನು  ಪಡೆಯಲು ಸಾಧ್ಯವಿಲ್ಲ. ಹಾಗಾಗಿ ಸಿಎಸ್ ಕೆ ಗೆ ಮೊದಲ ಸ್ಥಾನ ಅಬಾಧಿತ.

ಪರದಾಡಿದ ಪಂಜಾಬ್: ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೆಲವು ದಾಖಲಿಸಿ ಹೊಸ ಹುರುಪಿನೊಂದಿಗೆ ಕಣಕ್ಕಿಳಿದಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ, ಮತ್ತೆ ತನ್ನ ಪರದಾಟ ಮುಂದುವರಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಶಿಸ್ತು ಬದಟಛಿ ದಾಳಿಯ ಮುಂದೆ ಮಂಕಾದ ಪಂಜಾಬ್ ಬ್ಯಾಟ್ಸ್ಮನ್‍ಗಳು ರನ್ ಗಳಿಸಲು ಹರ ಸಾಹಸ ಪಡಬೇಕಾಯಿತು . ಸ್ಪಿನ್ನರ್  ಪವನ್ ನೇಗಿ ಅವರನ್ನು ಮೊದಲ ಓವರ್ ನಲ್ಲಿ ದಾಳಿಗಿಳಿಸಿದ ಧೋನಿ ಮತ್ತೆ ತಮ್ಮ ತಂತ್ರಗಾರಿಕೆ ಮೆರೆದರು. ಆರಂಭಿಕರಾದ ವೃದ್ಧಿಮಾನ್ ಸಾಹ 15, ಮನನ್ ವೊಹ್ರಾ 4, ನಾಯಕ ಜಾರ್  ಬೇಯ್ಲಿ 12,  ಮ್ಯಾಕ್ಸ್ ವೆಲ್ 6,  ಗುರು ಕೀರತ್ ಸಿಂಗ್  15,  ಡೇವಿಡ್ ಮಿಲ್ಲರ್ 11 ಹೆಚ್ಚು ಹೊತ್ತು ಕ್ರೀಸ್‍ನಲ್ಲಿ ನಿಲ್ಲದೆ ವಿಕೆಟ್ ಒಪ್ಪಿಸಿದ್ದು, ತಂಡ ಆರಂಭಿಕ ಆಘಾತ ಅನುಭವಿಸಲು ಕಾರಣವಾಯಿತು.
ಈ ವೇಳೆ ಜವಾಬ್ದಾರಿಯುತ ಬ್ಯಾಟಿಂಗ್ ಮಾಡಿದ  ಅಕ್ಷರ್  ಪಟೇಲ್ 32,  ರಿಶಿ ಧವನ್ ಅಜೇಯ 25 ರನ್ ದಾಖಲಿಸುವ ಮೂಲಕ ತಂಡದ ಮೊತ್ತವನ್ನು 130ರ ಗಡಿ ಮುಟ್ಟಿಸಿದರು. ಸಿಎಸ್‍ಕೆ ಪರ ಪವನ್ ನೇಗಿ 2, ಈಶ್ವರ್ ಪಾಂಡೆ, ಆಶಿಶ್ ನೆಹ್ರಾ , ಅಶ್ವಿನ್, ಜಡೇಜಾ ಮತ್ತು ಬ್ರಾವೋ ತಲಾ 1 ವಿಕೆಟ್ ಪಡೆದರು.
ಸುಲಭ ತುತ್ತು: ಸಾಧಾರಣ ಗುರಿಯನ್ನು ಬೆನ್ನಟ್ಟಿದ ಸಿಎಸ್‍ಕೆ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡರೂ ನಂತರ ಜವಾಬ್ದಾರಿಯುತ ಆಟದಿಂದ ಸುಲಭ ಗೆಲವು ದಾಖಲಿಸಿತು. ಆರಂಭಿಕರಾದ ಮೈಕಲ್ ಹಸ್ಸಿ 1, ಬ್ರೆಂಡನ್ ಮೆಕಲಂ   6 ರನ್ ದಾಖಲಿಸಿ  ಪೆವಿಲಿಯನ್  ಪೆವಿಲಿಯನ್ ಕಡೆ ನಡೆದಾಗ ಸಿಎಸ್‍ಕೆ ಪಾಳಯದಲ್ಲಿ ಆತಂಕ ಮೂಡಿತು. ಆ ವೇಳೆ ಜತೆಯಾದ ಫಫ್  ಡುಪ್ಲೆಸಿಸ್ (55 ರನ್, 41 ಎಸೆತ, 5 ಬೌಂಡರಿ, 1 ಸಿಕ್ಸರ್) ಹಾಗೂ ಸುರೇಶ್ ರೈನಾ (ಅಜೇಯ 41 ರನ್, 34 ಎಸೆತ, 4 ಬೌಂಡರಿ ) ¸ಸಮರ್ಥ ಬ್ಯಾಟಿಂಗ್ ಮೂಲಕ ತಂಡವನ್ನು ಮೇಲೆತ್ತಿದ್ದರು.  ಈ ಜೋಡಿ 3 ವಿಕೆಟ್ಹೆ 92 ರನ್ ಜತೆಯಾಟವಾಡುವ ಮೂಲಕ  ಮೂಲಕ ತಂಡವನ್ನು ಗೆಲವಿನತ್ತ ಕರೆದೊಯ್ದರು. ಇನ್ನು ಅಂತಿಮ ಹಂತದಲ್ಲಿ ಬಂದ ನಾಯಕ ಮಹೇಂದ್ರ ಸಿಂಗ್ ಧೋನಿ ಅಜೇಯ 25 ರನ್ ದಾಖಲಿಸಿದರು. ಪಂಜಾಬ್ ಪರ ಸಂದೀಪ್  ಶರ್ಮಾ, ಹೆಂಡ್ರಿಕ್ಸ್ ಮತ್ತು ರಿಶಿ ಧವನ್ ತಲಾ 1 ವಿಕೆಟ್ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com