ಮೊದಲ ಟೆಸ್ಟ್ : ವಾರ್ನರ್ , ಖವಾಜಾ ಶತಕ: ಭರ್ಜರಿ ಮೊತ್ತದತ್ತ ಆಸೀಸ್

ಡೇವಿಡ್ ವಾರ್ನರ್ ಅವರ 13ನೇ ಹಾಗೂ ಉಸ್ಮಾನ್ ಖವಾಜ ಅವರ ಚೊಚ್ಚಲ ಟೆಸ್ಟ್ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಲ್ಲಿ ...
ಡೇವಿಡ್ ವಾರ್ನರ್
ಡೇವಿಡ್ ವಾರ್ನರ್

ಡೇವಿಡ್ ವಾರ್ನರ್ ಅವರ 13ನೇ ಹಾಗೂ ಉಸ್ಮಾನ್ ಖವಾಜ ಅವರ ಚೊಚ್ಚಲ ಟೆಸ್ಟ್ ಶತಕದ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ ಮೊದಲ ದಿನದಲ್ಲಿ ಆಸ್ಟ್ರೇಲಿಯಾ ತಂಡ 2 ವಿಕೆಟ್ ನಷ್ಟಕ್ಕೆ 389 ರನ್ ಗಳಿಸಿದೆ.

ವಾರ್ನರ್ 224 ಎಸೆತಗಳಲ್ಲಿ 163 ರನ್ ಗಳಿಸಿದರೆ, ಖವಾಜ ಅಜೇಯ 102 ರನ್ ಗಳಿಸಿ ಬೃಹತ್ ಮೊತ್ತಕ್ಕೆ ಕಾರಣರಾದರು. ಮೊದಲ ದಿನದಾಟ ಮುಕ್ತಾಯಗೊಂಡಾಗ ಸ್ಟೀವನ್ ಸ್ಮಿತ್ ಅಜೇಯ 41 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದೇ ವೇಳೆ ಸ್ಮಿತ್ ಪ್ರಸಕ್ತ ಋತುವಿನಲ್ಲಿ 1000 ರನ್ ಪೂರ್ಣಗೊಳಿಸಿದರು. ಆರಂಭಿಕ ಆಟಗಾರ ಜೋ ಬರ್ನ್ಸ್ (71) ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ಆಸ್ಟ್ರೇಲಿಯಾದ ಇನಿಂಗ್ಸ್‌ಗೆ ಭದ್ರ ತಳಪಾಯ ಹಾಕಿದರು. 19 ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 163 ರನ್ ಗಳಿಸಿದ ವಾರ್ನರ್ ಆರಂಭಿಕ ಆಟಗಾರನಾಗಿ ಆಸ್ಟ್ರೇಲಿಯಾದ ಪರ ಅತಿ ಹೆಚ್ಚು ಶತಕ ಗಳಿಸಿದ ನಾಲ್ಕನೇ ಆಟಗಾರರೆನಿಸಿದರು. ಮ್ಯಾಥ್ಯೂ ಹೇಡನ್ (30), ಮಾರ್ಕ್ ಟೇಲರ್ (19), ಹಾಗೂ ಮೈಕಲ್ ಸ್ಲೆಟರ್ (14) ಆರಂಭಿಕ ಆಟಗಾರರಾಗಿ ಆಸೀಸ್ ಪರ ಅತಿ ಹೆಚ್ಚು ಶತಕ ಗಳಿಸಿದ ಇತರ ಆಟಗಾರರು. 1988ರಿಂದ ಬ್ರಿಸ್ಬೇನ್ ಅಂಗಣದಲ್ಲಿ ಟೆಸ್ಟ್ ಪಂದ್ಯವನ್ನು ಸೋಲದ ಆಸ್ಟ್ರೇಲಿಯಾದ ಪರ ಮೊದಲ ವಿಕೆಟ್‌ನಲ್ಲಿ ವಾರ್ನರ್ ಹಾಗೂ ಜೋ ಬರ್ನ್ಸ್ 161 ರನ್ ಜತೆಯಾಟವಾಡಿದರೆ, ಎರಡನೇ ವಿಕೆಟ್ ಜತೆಯಾಟದಲ್ಲಿ ವಾರ್ನರ್ ಹಾಗೂ ಖವಾಜ 150 ಗಳಿಸಿದರು. ನ್ಯೂಜಿಲೆಂಡ್ ಪರ ಸೌಥೀ ಹಾಗೂ ನೀಶಾಮ್ ತಲಾ 1ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯಾ ಪ್ರಥಮ ಇನಿಂಗ್ಸ್
88 ಓವರ್‌ಗಳಲ್ಲಿ 2 ವಿಕೆಟ್‌ಗೆ 389

(ಜೋ ಬರ್ನ್ಸ್ 71, ಡೇವಿಡ್ ವಾರ್ನರ್ 163, ಸ್ಮಿತ್ ಔಟಾಗದೆ 41, ಟಿಮ್ ಸೌಥೀ 63ಕ್ಕೆ 1, ಜೇಮ್ಸ್ ನೀಶಾಮ್ 36ಕ್ಕೆ 1).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com