ಹಶೀಮ್ ಆಮ್ಲಾ
ಕ್ರೀಡೆ
ಪಿಚ್‍ಗೆ ಹೊಂದಿಕೊಳ್ಳಲಿಲ್ಲ: ಆಮ್ಲಾ
ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆದ ಮೊಹಾಲಿ ಕ್ರೀಡಾಂಗಣದ ಪಿಚ್, ತೀವ್ರ ತಿರುವು ಪಡೆಯುತ್ತಿದ್ದುದರಿಂದ ಹರಿಣಗಳ ಪಡೆ ಪಂದ್ಯದ ಮೂರನೇ ದಿನ...
ಮೊಹಾಲಿ: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯ ನಡೆದ ಮೊಹಾಲಿ ಕ್ರೀಡಾಂಗಣದ ಪಿಚ್, ತೀವ್ರ ತಿರುವು ಪಡೆಯುತ್ತಿದ್ದುದರಿಂದ ಹರಿಣಗಳ ಪಡೆ ಪಂದ್ಯದ ಮೂರನೇ ದಿನ, ಅತಿ ಹೆಚ್ಚು ವಿಕೆಟ್ ಕಳೆದುಕೊಳ್ಳಬೇಕಾಯಿತು ಎಂಬ ವದಂತಿಗಳನ್ನು ದಕ್ಷಿಣ ಆಫ್ರಿಕಾ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ಹಾಶೀಂ ಆಮ್ಲಾ ತಳ್ಳಿಹಾಕಿದ್ದಾರೆ. 'ಹೀಗೆ, ತಿರುವು ಪಡೆಯುವ ಪಿಚ್‍ಗಳಲ್ಲಿ ಸಾಮಾನ್ಯವಾಗಿ ಶೀಘ್ರಗತಿಯಲ್ಲಿ ವಿಕೆಟ್ ಬೀಳುವ ಗತಿಗಿಂತಲೂ ಹೆಚ್ಚಿನ ವೇಗದಲ್ಲಿ ವಿಕೆಟ್ ಗಳು ಉರುಳಿವೆ. ಆದರೆ, ನಮ್ಮ ತಂಡದ ಬ್ಯಾಟ್ಸ್ ಮನ್‍ಗಳು ಭಾರತೀಯ ಸ್ಪಿನ್ನರ್‍ಗಳ ವಿರುದ್ಧ ಮತ್ತಷ್ಟು ದಿಟ್ಟತನದ ಬ್ಯಾಟಿಂಗ್ ತೋರಬೇಕಿತ್ತು. ಹಾಗಾಗದೇ ಇದ್ದಿದ್ದರಿಂದ ನಾವು ಸೋಲು ಕಂಡೆವು'' ಎಂದು ಪಂದ್ಯದ ಬಳಿಕ ಆಮ್ಲಾ ಪ್ರತಿಕ್ರಿಯಿಸಿದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ